ಮಹಿಳಾ ಇಂಜಿನಿಯರ್ ಅನ್ನು ಕುರ್ಚಿಗೆ ಕಟ್ಟಿ ಹಾಕಿ ಜೀವಂತ ದಹನ

ಪಾಟ್ನಾ, ಅ.25: ಕಿರಿಯ ಮಹಿಳಾ ಇಂಜಿನಿಯರ್ ಒಬ್ಬರನ್ನು ಕುರ್ಚಿಗೆ ಬಿಗಿದು, ಬೆಂಕಿ ಹಚ್ಚಿ ಕೊಂದ ದಾರುಣ ಘಟನೆ ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯಲ್ಲಿ ನಡೆದಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ತನ್ನ ಗಂಡನಿಂದ ಬೇರೆಯಾಗಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಸರಿತಾ ದೇವಿಯೆಂಬ ಮಹಿಳೆ ರವಿವಾರ ರಾತ್ರಿ ಸಜೀವ ದಹನ ಮಾಡಲ್ಪಟ್ಟವರಾಗಿದ್ದಾರೆ. ಸೋಮವಾರ ಪೊಲೀಸರಿಗೆ ಅಪರಾಧದ ಕುರಿತು ಮಾಹಿತಿ ಲಭಿಸಿವೆ.
ಆಕೆಯನ್ನು ಸುಡಲು ಸೀಮೆ ಎಣ್ಣೆಯನ್ನು ಉಪಯೋಗಿಸಲಾಗಿದೆ. ಪ್ರಕರಣದ ಕುರಿತು ತಾವು ತನಿಖೆ ಆರಂಭಿಸಿದ್ದೇವೆಂದು ಮುಝಫ್ಫರ್‌ಪುರದ ಹಿರಿಯ ಪೊಲೀಸ್ ಅಧೀಕ್ಷಕ ವಿವೇಕ್‌ಕುಮಾರ್ ಹೇಳಿದ್ದಾರೆ.
Next Story





