Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಭಾರತಕ್ಕೆ ಸರಣಿ ಗೆಲುವಿನ ಕನಸು

ಭಾರತಕ್ಕೆ ಸರಣಿ ಗೆಲುವಿನ ಕನಸು

ವಾರ್ತಾಭಾರತಿವಾರ್ತಾಭಾರತಿ25 Oct 2016 11:07 PM IST
share
ಭಾರತಕ್ಕೆ ಸರಣಿ ಗೆಲುವಿನ ಕನಸು

ರಾಂಚಿ, ಅ.25: ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ನಾಲ್ಕನೆ ಏಕದಿನ ಪಂದ್ಯ ಬುಧವಾರ ರಾಂಚಿಯಲ್ಲಿ ನಡೆಯಲಿದ್ದು, ಭಾರತ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಗೆಲ್ಲುವ ಕನಸು ಕಾಣುತ್ತಿದೆ.
ಕಳೆದ ಪಂದ್ಯದಲ್ಲಿ ಕ್ಯಾಪ್ಟನ್ ಕೂಲ್ ಧೋನಿ ನಾಲ್ಕನೆ ಕ್ರಮಾಂಕದಲ್ಲಿ ಭಡ್ತಿ ಪಡೆದು ಆಗಮಿಸಿ ವಿರಾಟ್ ಕೊಹ್ಲಿ ಜೊತೆ 151 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
 ಧೋನಿ 91 ಎಸೆತಗಳಲ್ಲಿ 80 ರನ್ ದಾಖಲಿಸಿದ್ದರು. ಇದೇ ಸಂದರ್ಭದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 9,000 ರನ್‌ಗಳನ್ನು ಪೂರೈಸಿದ್ದರು. 26ನೆ ಏಕದಿನ ಶತಕ ದಾಖಲಿಸಿದ ಉಪನಾಯಕ ವಿರಾಟ್ ಕೊಹ್ಲಿ ಔಟಾಗದೆ 154 ರನ್(134ಎ, 16ಬೌ,1ಸಿ)ಗಳಿಸಿದ್ದರು.
 ಧೋನಿ ತವರು  ರಾಂಚಿಯ ಜಾರ್ಖಂಡ್ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಾಲ್ಕನೆ ಏಕದಿನ ಪಂದ್ಯ ನಡೆಯಲಿದ್ದು, ಧೋನಿ ಗಮನ ಸೆಳೆಯಲಿದ್ದಾರೆ. ಧೋನಿಗೆ ಇದೊಂದು ಭಾವನಾತ್ಮಕ ಪಂದ್ಯವಾಗಿದೆ. ಐಸಿಸಿಯ ಎಲ್ಲ ಟ್ರೋಫಿಗಳನ್ನು ಜಯಿಸಿರುವ ಧೋನಿ ತವರಿನಲ್ಲಿ ಕಿವೀಸ್ ವಿರುದ್ಧ ಸರಣಿ ಗೆಲುವಿನ ಸಂಕಲ್ಪ ಹೊಂದಿದ್ದಾರೆ.
ರಾಂಚಿಯ ಕ್ರೀಡಾಂಗಣದಲ್ಲಿ ಈ ತನಕ ಮೂರು ಏಕದಿನ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಉಳಿದ ಎರಡು ಪಂದ್ಯಗಳಲ್ಲಿ ಭಾರತ ಜಯ ಗಳಿಸಿತ್ತು.
ವಿರಾಟ್ ಕೊಹ್ಲಿ ಎರಡು ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ ಔಟಾಗದೆ 77 ರನ್ ಮತ್ತು ಔಟಾಗದೆ 139 ರನ್ ಗಳಿಸಿದ್ದರು. ನಾಲ್ಕನೆ ಏಕದಿನ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಕೊಹ್ಲಿ ಕಳೆದ ಪಂದ್ಯದಲ್ಲಿ 26ನೆ ಶತಕ ದಾಖಲಿಸಿದ್ದರು. ಅವರು ಶತಕ ದಾಖಲಿಸಿದ್ದ 22 ಪಂದ್ಯಗಳಲ್ಲಿ ಭಾರತ ಜಯ ಗಳಿಸಿತ್ತು. ನಾಯಕ ಧೋನಿ ಫಾರ್ಮ್‌ಗೆ ಮರಳಿರುವುದು ಕಿವೀಸ್ ಪಾಲಿಗೆ ಅಪಾಯದ ಸೂಚನೆ ನೀಡಿದಂತಾಗಿದೆ. ಟೆಸ್ಟ್ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್‌ವಾಶ್ ಅನುಭವಿಸಿದ್ದ ನ್ಯೂಝಿಲೆಂಡ್ ಎರಡನೆ ಏಕದಿನ ಪಂದ್ಯದಲ್ಲಿ 6 ರನ್‌ಗಳ ರೋಚಕ ಜಯ ದಾಖಲಿಸಿತ್ತು. ಭಾರತದ   ಮೂವರು ಪ್ರಮುಖ ಬೌಲರ್‌ಗಳಾದ ರವಿಚಂದ್ರನ್ ಅಶ್ವಿನ್, ಮುಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ತಂಡದಲ್ಲಿರುವ ಇತರ ಯುವ ಬೌಲರ್‌ಗಳ ಸಹಾಯದಿಂದ ಭಾರತ  ಯಶಸ್ಸು ಗಳಿಸಿದೆ. ಇವರ ಅನುಪಸ್ಥಿತಿ
ಯಲ್ಲಿ ಅಫ್‌ಸ್ಪಿನ್ನರ್ ಕೇದಾರ್ ಜಾಧವ್ ಅಚ್ಚರಿಯ ಪ್ರದರ್ಶನ ನೀಡಿದ್ದಾರೆ. ಅವರು 6 ವಿಕೆಟ್ ಗಳಿಸಿದ್ದಾರೆ. ಅಮಿತ್ ಮಿಶ್ರಾ ಗರಿಷ್ಠ ವಿಕೆಟ್ ಪಡೆದವರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿರುವ ಸುರೇಶ್ ರೈನಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಜಾಧವ್ ಸಿಕ್ಕಿದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ದಿಲ್ಲಿಯ ಪಂದ್ಯದಲ್ಲಿ 37 ಎಸೆತಗಳಲ್ಲಿ 41 ರನ್ ಗಳಿಸಿದ್ದರು. ಮುಂಬರುವ ಚಾಂಪಿಯನ್ಸ್ ಟ್ರೋಫಿಗೆ ತಂಡದಲ್ಲಿ ಅವಕಾಶ ಗಿಟ್ಟಿಕೊಳ್ಳುವ ಭರವಸೆ ಮೂಡಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಗಿ ಮೊದಲ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಧರ್ಮಶಾಲಾದಲ್ಲಿ ಅವರು 31ಕ್ಕೆ 3 ವಿಕೆಟ್ ಪಡೆದಿದ್ದರು. 32 ಎಸೆತಗಳಲ್ಲಿ 36 ರನ್ ಗಳಿಸಿದ್ದರು.
ಭಾರತದ ಆರಂಭಿಕ ದಾಂಡಿಗರಿಂದ ಮೊದಲ ವಿಕೆಟ್‌ಗೆ ದೊಡ್ಡ ಮೊತ್ತದ ಸ್ಕೋರ್ ದಾಖಲಾಗುತ್ತಿಲ್ಲ. ಮೊದಲ ವಿಕೆಟ್‌ಗೆ ರೋಹಿತ್ ಶರ್ಮ ಮತ್ತು ಅಜಿಂಕ್ಯ ರಹಾನೆ ಜೊತೆಯಾಟದಲ್ಲಿ ದಾಖಲಾದ ಸ್ಕೋರ್‌ಗಳು 49,21 ಮತ್ತು 13 ರನ್.
ರೋಹಿತ್ ಮತ್ತು ರಹಾನೆ ವೈಫಲ್ಯದಿಂದಾಗಿ ಮಧ್ಯಮ ಸರದಿಯ ದಾಂಡಿಗರು ಸಮಸ್ಯೆ ಎದುರಿಸುತ್ತಿದ್ದಾರೆ. ರಹಾನೆ ಅವರು ಶಿಖರ್ ಧವನ್ ಮತ್ತು ಕೆ.ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನವನ್ನು ಭದ್ರಪಡಿಸುವಲ್ಲಿ ವಿಫಲರಾಗಿದ್ದಾರೆ.
ನ್ಯೂಝಿಲೆಂಡ್ ಸರಣಿಯನ್ನು ಗೆಲ್ಲಲು ಅಂತಿಮ ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಈ ಕಾರಣದಿಂದಾಗಿ ನ್ಯೂಝಿಲೆಂಡ್ ಪಾಲಿಗೆ ನಾಲ್ಕನೆ ಪಂದ್ಯಅತ್ಯಂತ ಮಹತ್ವದ್ದಾಗಿದೆ.
ಟಾಮ್ ಲಥಾಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ತಂಡದ ಇತರ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಕಳೆದ ಪಂದ್ಯದಲ್ಲಿ ಜೇಮ್ಸ್ ನಿಶಮ್ (57) ಮತ್ತು ಮ್ಯಾಟ್ ಹೆನ್ರಿ 9ನೆ ವಿಕೆಟ್‌ಗೆ 84 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು 285ಕ್ಕೆ ತಲುಪಿಸಲು ನೆರವಾಗಿದ್ದರು.
ಮುಂದಿನ ಎರಡು ಪಂದ್ಯಗಳಲ್ಲಿ ನ್ಯೂಝಿಲೆಂಡ್‌ನ ಅಗ್ರಸರದಿಯ ದಾಂಡಿಗರು ಮಿಂಚಲಿದ್ದಾರೆಂದು ತಂಡದ ನಾಯಕ ವಿಲಿಯಮ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ ತಂಡ:ಎಂ.ಎಸ್.ಧೋನಿ(ನಾಯಕ/ವಿಕೆಟ್ ಕೀಪರ್), ಜಸ್‌ಪ್ರೀತ್ ಬುಮ್ರಾ, ಕೇದಾರ್ ಜಾಧವ್, ವಿರಾಟ್ ಕೊಹ್ಲಿ, ಧವಳ್ ಕುಲಕರ್ಣಿ, ಮನ್‌ದೀಪ್ ಸಿಂಗ್, ಅಮಿತ್ ಮಿಶ್ರಾ, ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಜಯಂತ್ ಯಾದವ್, ಉಮೇಶ್ ಯಾದವ್.
ನ್ಯೂಝಿಲೆಂಡ್: ಕೇನ್ ವಿಲಿಯಮ್ಸನ್(ನಾಯಕ), ಕೋರಿ ಆ್ಯಂಡರ್ಸನ್, ಟ್ರೆಂಟ್ ಬೌಲ್ಟ್, ಡಗ್ ಬ್ರಾಸ್‌ವೆಲ್, ಆ್ಯಂಟನಿ ಡೇವಿಚ್,ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಜೇಮ್ಸ್ ನಿಶಮ್, ಲೂಕ್ ರೊಂಚಿ(ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನೆರ್, ಐಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಬಿ.ಜೆ. ವಾಟ್ಲಿಂಗ್.
ಪಂದ್ಯದ ಸಮಯ: ಮಧ್ಯಾಹ್ನ 1:30ಕ್ಕೆ ಆರಂಭ.
,,,,,,,,,,,,
ಅಂಕಿ-ಅಂಶ
*ಟಾಮ್ ಲಥಾಮ್ ಭಾರತ ಪ್ರವಾಸದಲ್ಲಿ ಆಡಿರುವ 6 ಅಂತಾರಾಷ್ಟ್ರೀಯ ಪಂದ್ಯ(3ಏಕದಿನ , 3 ಟೆಸ್ಟ್)ಗಳ ಪೈಕಿ ಐದು ಅರ್ಧಶತಕಗಳನ್ನು ದಾಖಲಿಸಿದ್ದಾರೆೆ.
 *2016ರಲ್ಲಿ ನ್ಯೂಝಿಲೆಂಡ್ 3 ಬಾರಿ 9ನೆ ವಿಕೆಟ್‌ಗೆ 50ಕ್ಕಿಂತ ಅಧಿಕ ರನ್ ದಾಖಲಿಸಿದೆ.
*ಕೊಹ್ಲಿ ರಾಂಚಿಯಲ್ಲಿ ನಡೆದ ಎರಡು ಪಂದ್ಯಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ನವೆಂಬರ್ 2014ರಲ್ಲಿ ಶ್ರೀಲಂಕಾ ವಿರುದ್ಧ ಔಟಾಗದೆ 139 ರನ್ ಮತ್ತು ಜನವರಿ 2013ರಲ್ಲಿ ಇಂಗ್ಲೆಂಡ್ ವಿರುದ್ಧ ಔಟಾಗದೆ 77 ರನ್ ಗಳಿಸಿದ್ದರು.
*ರಾಂಚಿಯಲ್ಲಿ ನಡೆದ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಜಯ ಗಳಿಸಿತ್ತು.
*ಕೋರಿ ಆ್ಯಂಡರ್ಸನ್ ಅವರಿಂದ ಕಳೆದ 9 ಏಕದಿನ ಪಂದ್ಯಗಳಲ್ಲಿ ಮೊದಲ ಅರ್ಧಶತಕ ದಾಖಲಾಗಿದೆ.
*ರೋಹಿತ್ ಶರ್ಮ ಈ ಸರಣಿಯಲ್ಲಿ ಒಟ್ಟು 42 ರನ್ ಗಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X