ಉತ್ತರ ಕರ್ನಾಟಕ: ಕಲಾಸಕ್ತರ ಮನಗೆದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ
.jpg)
ಪ್ರೇಮಶ್ರೀ ಕಲ್ಲಬೆಟ್ಟು
ಮೂಡುಬಿದಿರೆ, ಅ.25: ಆಳ್ವಾಸ್ ನುಡಿಸಿರಿ ಘಟಕದ ಮೂಲಕ ಸಂಸ್ಕೃತಿ, ಭಾಷೆ, ಸಂಸ್ಕಾರ ಮತ್ತು ಸಾಂಸ್ಕೃತಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಆಳ್ವಾಸ್‌ನ ವಿದ್ಯಾರ್ಥಿ ಕಲಾವಿದರಿಂದ ಉತ್ತರ ಕರ್ನಾಟಕದ 9 ಕಡೆಗಳಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡಿರುವ ಆಳ್ವಾಸ್ ಸಾಂಸ್ಕೃತಿಕ ವೈಭವದ ನಾದವು ದಾಖಲೆಯ ಎರಡೂವರೆ ಲಕ್ಷ ಕಲಾಸಕ್ತರ ಮನ ಗೆದ್ದಿದೆಯಲ್ಲದೆ ಅಥಣಿಯಂತಹ ಊರಿನಲ್ಲೂ ಡಾ.ಮೋಹನ ಆಳ್ವ ಅವರು ಸಾಂಸ್ಕೃತಿಕವಾಗಿ ಕನ್ನಡ ಮನಸ್ಸುಗಳನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500 ಮಂದಿ ವಿದ್ಯಾರ್ಥಿ ಕಲಾವಿದರು ಮೂರೂವರೆ ಗಂಟೆಗಳ ಕಾಲ 17 ಕಲಾ ಪ್ರಕಾರಗಳನ್ನು ಪ್ರದರ್ಶಿಸಿದರು. ಮೋಹಿನಿಯಾಟಂ-ಕೇರಳ ನಟನಂ ಒಂದು ಗೂಡಿಸಿ ವಿಶೇಷ ರೀತಿಯಲ್ಲಿ ಪ್ರಸ್ತುತಗೊಳಿಸಲಾಗಿತ್ತು. ಆಂಧ್ರದ ಬಂಜಾರ ನೃತ್ಯ, ಮಧು ಮಾಸದ ರೂಪಕ, ಬಡಗುತಿಟ್ಟು ಯಕ್ಷ ಪ್ರಯೋಗ, ಮಣಿಪುರಿ ಸಾಹಸಮಯ ಸ್ಟಿಕ್ ಡ್ಯಾನ್ಸ್, ಶ್ರೀಲಂಕಾದ ನೃತ್ಯ ವೈಭವ, ಮಹಾರಾಷ್ಟ್ರದ ಲಾವಣಿ ನೃತ್ಯ, ಮಣಿಪುರಿ ದೋಲ್ ಚಲಂ, ರೋಪ್ ಸಾಹಸದೊಂದಿಗೆ ಮಲ್ಲಕಂಬ, ಕಥಕ್-ಆನಂದ ಮಂಗಳಂ ದೇರ್, ಒರಿಸ್ಸಾದ ಗೋಟಿಪೂವ ಮತ್ತು ಯೋಗ ನೃತ್ಯ, ಗುಜರಾತ್‌ನ ಹುಡೋ ಮತ್ತು ರಾಸ, ತೆಂಕುತಿಟ್ಟು ಯಕ್ಷ ಪ್ರಯೋಗ ವೇದೋದ್ಧರಣ ಪಶ್ಚಿಮ ಬಂಗಾಳದ ಸಿಂಹ ನೃತ್ಯ ಪುರುಲಿಯೊ ಚಾವೋ ಹಾಗೂ ವಂದೇ ಮಾತರಂ ನೃತ್ಯಗಳು ಕಲಾಸಕ್ತರ ಮನಸೂರೆಗೊಂಡವು. ಅ.12ರಂದು ನಿಪ್ಪಾಣಿಯಲ್ಲಿ ಆರಂಭ ಗೊಂಡ ಸಾಂಸ್ಕೃತಿಕ ಯಾತ್ರೆಯು ವಿವಿಧ ಕಡೆಗಳಲ್ಲಿ 11 ದಿನಗಳ ಕಾಲ ನಡೆದು ಅಥಣಿಯಲ್ಲಿ ಕೊನೆಗೊಂಡಿತು. ಅಥಣಿಯಲ್ಲಿ ನಡೆದ ಸಾಂಸ್ಕೃತಿಕ ವೈಭವಕ್ಕೂ ಮುನ್ನ ಕ್ರೀಡಾಂಗಣದವರೆಗೆ ನಡೆದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಕರಾವಳಿಯ ಕೊಂಬು, ಕಹಳೆ, ಶಂಖ, ಬೆಂಡೆ ತಾಳ, ಕೇರಳದ ಚೆಂಡೆ, ಡೊಳ್ಳಿನ ಕುಣಿತ ಗಮನ ಸೆಳೆದವು.
ದೇಶೀಯ ಕಲೆಗಳನ್ನು ಯುವ ಜನರ ಮನಸ್ಸಲ್ಲಿ ಬಿತ್ತಿದರೆ ಸಾಂಸ್ಕೃತಿಕ ರಂಗದಲ್ಲಿ ಅದ್ಭುತಗಳನ್ನು ಸೃಷ್ಟಿಸಬಹುದು. ಈ ನಿಟ್ಟಿನಲ್ಲಿ ಆಳ್ವಾಸ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳಿಗೆ ಕ್ರಿಯಾಶೀಲ, ಸೃಜನಶೀಲ ವೇದಿಕೆಯನ್ನು ಕಲ್ಪಿಸುತ್ತಿದೆ. ಸಂಸ್ಥೆಯ ಪ್ರಯೋಗಶೀಲತೆಯೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ರೂಪು ನೀಡುತ್ತಿರುವ ತೃಪ್ತಿ ನನಗಿದೆ. ನುಡಿಸಿರಿ ಘಟಕಗಳ ಪದಾಧಿಕಾರಿಗಳ ಬೆಂಬಲ, ಪ್ರೇಕ್ಷಕರ ಪ್ರೋತ್ಸಾಹಕ್ಕೆ ಚಿರಋಣಿ.
ಡಾ.ಎಂ.ಮೋಹನ ಆಳ್ವ,
ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಸಂ
ಶಿಕ್ಷಣವನ್ನು ವ್ಯಾಪಾರಕ್ಕೆ ಬಳಸದೆ, ವಿದ್ಯಾರ್ಥಿಗಳಲ್ಲಿರುವ ನೈಜ ಪ್ರತಿಭೆ ಅರಳಿಸಲು ಮೋಹನ ಆಳ್ವರು ಒಂದೇ ಕಡೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಮಾದರಿ ಕೆಲಸ. ಮುಂದಿನ ವರ್ಷ ಅಥಣಿ ಗಡಿನಾಡ ಉತ್ಸವದಲ್ಲೂ ಆಳ್ವಾಸ್ ತಂಡ ಕಾರ್ಯಕ್ರಮ ನೀಡಬೇಕು.
ಲಕ್ಷ್ಮಣ್ ಸವದಿ, ಮಾಜಿ ಸಚಿವ, ಅಥಣಿ ಶಾಸಕ ್ಥೆ





