ಜಿಷಾಗೆ ನ್ಯಾಯಕ್ಕೆ ಆಗ್ರಹಿಸಿ ಮಹಿಳಾ ಒಕ್ಕೂಟದಿಂದ ಪ್ರತಿಭಟನೆ

ಕೋಝಿಕ್ಕೋಡ್, ಅ. 26: ಸೌಮ್ಯಕೊಲೆಪ್ರಕರಣದ ಅಂತಿಮವಿಚಾರಣೆಯಲ್ಲಿ ಸಂಭವಿಸಿದಂತೆ ಜಿಷಾ ಕೊಲೆಪ್ರಕರಣದಲ್ಲಿ ಪುನರಾವರ್ತಿಸಲ್ಪಡಬಾರದು ಎಂಬ ಪ್ರಚಾರದೊಂದಿಗೆ ಮಹಿಳಾ ಒಕ್ಕೂಟವೊಂದುಪ್ರತಿಭಟನೆಗೆ ಸಿದ್ಧವಾಗಿದೆ ಎಂದು ವರದಿಯಾಗಿದೆ. ಜಿಷಾ ಹತ್ಯೆ ಪ್ರಕರಣದ ವಿಚಾರಣೆ ಆರಂಭವಾಗಲಿರುವ ನವೆಂಬರ್ ಎರಡಕ್ಕೆ ’ಪೆಣ್ಣೊರುಮೆ’ ಸಂಘಟನೆಯ ನೇತೃತ್ವದಲ್ಲಿ ಶೋರ್ನೂರಿನಲ್ಲಿ ನವೆಂಬರ್ ಎರಡಕ್ಕೆ ಪ್ರತಿಭಟನಾ ಕಾರ್ಯಕ್ರಮ ನಡೆಯಲಿದೆ.
ಮಹಿಳೆಯರ ವಿರುದ್ಧ ಅಪರಾಧಕೃತ್ಯಗಳಲ್ಲಿ ಹೆಚ್ಚಳವಾಗಿದೆ. ಕಾನೂನು ಮತ್ತು ನ್ಯಾಯವ್ಯವಸ್ಥೆ ಅನಾಸ್ಥೆಯನ್ನು ತೋರಿಸುತ್ತಿದೆ ಹೀಗಿರುವಾಗ ನಮ್ಮಿಂದ ನಿಷ್ಕ್ರಿಯರಾಗಿರಲು ಸಾಧ್ಯವಿಲ್ಲ ಎಂಬ ಘೋಷಣೆಯಡಿಯಲ್ಲಿ ಕೇರಳ ರಾಜ್ಯದ ವಿವಿಧ ಭಾಗಗಳಿಂದ ಐನೂರರಷ್ಟು ಮಹಿಳೆಯರು ಭಾಗವಹಿಸಿ ರಕ್ತಪ್ರತಿಜ್ಞೆ ಕೈಗೊಳ್ಳಲಿದ್ದಾರೆ. ನ್ಯಾಯ ನಿರ್ಲಕ್ಷ್ಯವನ್ನು ಪುನರಾವರ್ತಿಸಬೇಡಿ ಎಂಬ ಸಂದೇಶದೊಂದಿಗೆ ನಡೆಯುವ ಪ್ರತಿಭಟನೆಯಲ್ಲಿ ಕೆ. ಅಜಿತಾ. ಡಾ.ಪಿ.ಗೀತಾ. ವಿ.ಪಿ. ಝುಹ್ರಾ. ಕೆ.ಕೆ. ರಮಾ ಮುಂತಾದವರು ಭಾಗವಹಿಸಲಿದ್ದಾರೆಂದು ವರದಿ ತಿಳಿಸಿದೆ.





