‘ಅಫ್ಘಾನ್ ಮೊನಲಿಸಾ’ ಪಾಕಿಸ್ತಾನದಲ್ಲಿ ಬಂಧನ

ಹೊಸದಿಲ್ಲಿ, ಅಕ್ಟೋಬರ್ 26: ಪಾಕಿಸ್ತಾನದಲ್ಲಿರುವ ಅಫ್ಘಾನಿಸ್ತಾನದ ನಿರಾಶ್ರಿತರ ಮುಖವಾಗಿ ನ್ಯಾಶನಲ್ ಜಿಯೊಗ್ರಾಫಿಕ್ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಗಮನಸೆಳೆದ ಶರ್ಬತ್ ಬೀಬಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈಕೆ ಯನ್ನು ಪಾಕಿಸ್ತಾನದ ಫೆಡರಲ್ ಇನ್‌ವೆಸ್ಟಿಗೇಶನ್ ಸಂಸ್ಥೆ ಬಂಧಿಸಿದ ಸುದ್ದಿಯನ್ನು ಡಾನ್ ಪತ್ರಿಕೆ ವರದಿ ಮಾಡಿದೆ. ಪಾಕ್‌ನಾಗರಿಕರಿಗೆ ನೀಡುವ ಗುರುತು ಚೀಟಿಯನ್ನು ನಕಲಿಯಾಗಿ ಸೃಷ್ಟಿಸಿದ್ದಾಳೆಂದು ಶರ್ಬತ್ ಬೀಬಿಯನ್ನು ಪಾಕಿಸ್ತಾನದಲ್ಲಿ ಬಂಧಿಸಲಾಗಿದೆ. ಈಕೆ ಪಾಕಿಸ್ತಾನಮತ್ತು ಅಫ್ಘಾನಿಸ್ತಾನದ ಜಂಟಿ ಪೌರತ್ವವನ್ನು ನಕಲಿಯಾಗಿ ಸೃಷ್ಟಿಸಿದ್ದಾಳೆಂಬುದು ಫೆಡರಲ್ ಇನ್ವೆಸ್ಟಿಗೇಶನ್‌ನ ತನಿಖೆಯಲ್ಲಿ ಪತ್ತೆಯಾಗಿದೆ.
1984ರಲ್ಲಿ ಶರ್ಬಿತ್‌ಳನ್ನು ಆಕೆಯ ಹನ್ನೆರಡನೆಯ ವಯಸ್ಸಿನಲ್ಲಿ ಪೇಶಾವರದಲ್ಲಿ ನ್ಯಾಶನಲ್ ಜೋಗ್ರಫಿಕ್ ಮ್ಯಾಗಝಿನ್ ಫೋಟೊಗ್ರಾಫರ್ ಸ್ಟೀವ್ ಮಕರೆ ಫೋಟೊಕ್ಲಿಕ್ಕಿಸಿದ್ದರು. 1985ರಲ್ಲಿ ಅದನ್ನು ಮ್ಯಾಗಝಿನ್ ಕವರ್ ಫೋಟೊವಾಗಿ ಪ್ರಕಟಿಸಿ ಅಫ್ಘಾನಿಸ್ತಾನದ ಮೊನಲಿಸಾ ಎಂದು ಹೆಸರಿಸಿತ್ತು. ಹಸಿರು ಕಣ್ಣಿನ ಚೆಲುವೆ ಅಂದು ಎಲ್ಲರನ್ನೂ ಆಕರ್ಷಿಸಿದ್ದಳು. ಈಗ ಶರ್ಬಿತ್ ಬೀಬಿಗೆ 40ವರ್ಷವಯಸ್ಸಾಗಿದೆ. ಅಫ್ಘಾನಿಸ್ತಾನದಲ್ಲಿ ಅಂತರ್ಯುದ್ಧ ವಿಪರೀತವಾದಾಗ ಆಕೆ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದಳು..ಶರ್ಬಿತ್‌ಳ ಹಸಿರುಕಣ್ಣುಗಳೇ ಆಕೆಯನ್ನು ಪತ್ತೆಹಚ್ಚಲು ಪಾಕಿಸ್ತಾನದ ಅಧಿಕಾರಿಗಳಿಗೆ ಸಹಾಯಕವಾಯಿತು ಎಂದು ವರದಿ ತಿಳಿಸಿದೆ.







