ವಲಯ ಸಮ್ಮೇಳನ: ಜೇಸಿಐ ಕಾಪು ಘಟಕಕ್ಕೆ ಪ್ರಶಸ್ತಿ

ಕಾಪು, ಅ.26: ಜೇಸಿಐ ಉಡುಪಿ ಸಿಟಿ ವತಿಯಿಂದ ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಜತ ವೈಭವ ವಲಯ ಸಮ್ಮೇಳನದಲ್ಲಿ ವಲಯದ ಅತ್ಯುತ್ತಮ ಘಟಕ ವಿನ್ನರ್, ಅತ್ಯುತ್ತಮ ಘಟಕಾಧ್ಯಕ್ಷೆ ವಿನ್ನರ್ ಸಹಿತ ಹಲವು ವಲಯ ಪ್ರಶಸ್ತಿಗಳನ್ನು ಜೇಸಿಐ ಕಾಪು ಘಟಕವು ತನ್ನದಾಗಿಸಿಕೊಂಡಿದೆ.
ಜೇಸಿಐನ ವಲಯಾಧ್ಯಕ್ಷ ಸಂದೀಪ್ ಕುಮಾರ್ ಜೇಸಿಐ ಕಾಪುವಿನ ಪ್ರಥಮ ಮಹಿಳಾ ಅಧ್ಯಕ್ಷೆ ಸೌಮ್ಯಾ ರಾಕೇಶ್ ಅವರಿಗೆ ಪ್ರಶಸ್ತಿಗಳನ್ನು ಹಸ್ತಾಂತರಿಸಿದರು.
ವಲಯ ಉಪಾಧ್ಯಕ್ಷ ರಾಕೇಶ್ ಕುಂಜೂರು, ವಲಯಾಧಿಕಾರಿ ಅನಿಲ್ ಕುಮಾರ್, ಘಟಕದ ಕಾರ್ಯದರ್ಶಿ ವಿನೋದ್ ಕಾಂಚನ್, ಜೇಸಿರೆಟ್ ಅಧ್ಯಕ್ಷೆ ಅರುಣಾ ಐತಾಳ್, ಯುವ ಜೇಸಿ ಅಧ್ಯಕ್ಷ ಧೀರಜ್ ಕುಮಾರ್, ಪೂರ್ವಾಧ್ಯಕ್ಷರಾದ ಸುಧಾಕರ ಸಾಲ್ಯಾನ್, ದೀಪಕ್ ಕುಮಾರ್ ಎರ್ಮಾಳ್, ಜಗದೀಶ್ ಬಂಗೇರ, ಅರುಣ್ ಶೆಟ್ಟಿ ಪಾದೂರು, ಪ್ರವೀಣ್ ಕುಮಾರ್ ಗುರ್ಮೆ, ರಾಜೇಂದ್ರ ಬಿ.ಕೆ., ಘಟಕದ ಉಪಾಧ್ಯಕ್ಷ ನಿವಾಸ್ ಐತಾಳ್, ರಮೇಶ್ ನಾಯ್ಕ, ದಿನೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Next Story





