ಇನ್ನು ಪಾಕ್ ಆಟಗಾರರು ಪಂದ್ಯ ಜಯಿಸಿದ ಮೇಲೆ ಹೀಗೆ ಮಾಡುವಂತಿಲ್ಲ !
ಪಾಕ್ ಕ್ರಿಕೆಟಿಗರ 'ಪುಶ್-ಅಪ್ಸ್' ಚಾಳಿಗೆ ಮಂಡಳಿಯ ಕಡಿವಾಣ

ಇಸ್ಲಾಮಾಬಾದ್ , ಅ.26: ಪಾಕಿಸ್ತಾನ ಕ್ರಿಕೆಟಿಗರು ಪಂದ್ಯ ಗೆದ್ದೊಡನೆ ಕ್ರೀಡಾಂಗಣದಲ್ಲಿ ‘ಪುಶ್ ಅಪ್ಸ್’ ಮೂಲಕ ಸಂಭ್ರಮಾಚರಣೆ ಮಾಡುವ ಕ್ರಮವನ್ನು ಪಾಕ್ ಕ್ರಿಕೆಟ್ ಮಂಡಳಿ ನಿಷೇಧಿಸಿದೆ.
ಪಾಕಿಸ್ತಾನ ಕ್ರಿಕೆಟಿಗರು ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ‘ಪುಶ್ ಅಪ್’್ಸ ಮೂಲಕ ವಿಜಯೋತ್ಸವ ಆಚರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಮುಂದೆ ಇಂತಹ ಕೆಟ್ಟ ಅಭ್ಯಾಸವನ್ನು ಮುಂದುವರಿಸದಂತೆ ಪಾಕ್ ಕ್ರಕೆಟಿಗರಿಗೆ ಎಚ್ಚರಿಕೆ ನೀಡಿದೆ.
ಕ್ರೀಡಾ ಸ್ಥಾಯಿ ಸಮಿತಿ ಸಭೆಯಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್ ಸೆನೆಟರ್ ರಾಣಾ ಅಫ್ಝಲ್ ಖಾನ್ ಅವರು ಪಾಕ್ ಕ್ರಿಕೆಟಿಗರು ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಪುಶ್ ಅಪ್ಸ್ ಮೂಲಕ ಗೆಲುವಿನ ಸಂಭ್ರವನ್ನು ಆಚರಿಸುವ ಕ್ರಮದ ಬಗ್ಗೆ ಪ್ರಸ್ತಾಪಿಸಿ ಆಟಗಾರರು ಪಂದ್ಯದಲ್ಲಿ ಗೆಲುವ ಸಾಧಿಸಿದಾಗ ಪ್ರಾರ್ಥನೆ ಅಥವಾ ದೇವನಿಗೆ ವಂದನೆ ಸಲ್ಲಿಸುತ್ತಾ ‘ಸುಜೂದ್ ’ಮಾಡಲಿ ಅದು ಬಿಟ್ಟು ಪುಶ್ ಅಪ್ಸ್ ಮೂಲಕ ಸಂಭ್ರಮಪಡುವುದು ಸರಿಯಲ್ಲ ಎಂದು ಹೇಳಿದರು.
ಕ್ರಿಕೆಟ್ ಸಂಭ್ಯವಂತರ ಆಟ. ಆದ ಕಾರಣ ಕ್ರಿಕೆಟ್ ಆಟದ ವೇಳೆ ಪುಶ್ ಅಪ್ಸ್ ಸಲ್ಲದು. ದೇಶಕ್ಕೆ ಕೆಟ್ಟ ಹೆಸರು ತರುವ ಪುಶ್ ಅಪ್ಸ್ ಆಚರಣೆ ಸಲ್ಲದು ಎಂದು ಖಾನ್ ಹೇಳಿದರು.





