ದಿಲ್ಲಿ ಹಾಫ್ ಮ್ಯಾರಥಾನ್‌ಗೆ ಅಸಫಾ ಪೊವೆಲ್

ಹೊಸದಿಲ್ಲಿ, ಅ.26: ಜಮೈಕಾದ ಸ್ಟಾರ್ ಓಟಗಾರ ಅಸಫಾ ಪೊವೆಲ್ ಮುಂದಿನ ತಿಂಗಳು ನಡೆಯಲಿರುವ 2016ರ ಏರ್‌ಟೆಲ್ ದಿಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ಮೊದಲ ಬಾರಿ ಭಾಗವಹಿಸಲು ಸಜ್ಜಾಗಿದ್ದಾರೆ.
ಪ್ರತಿಷ್ಠಿತ 9ನೆ ಆವೃತ್ತಿಯ ದಿಲ್ಲಿ ಹಾಫ್ ಮ್ಯಾರಥಾನ್ ಹೊಸದಿಲ್ಲಿಯಲ್ಲಿ ನ.9 ರಂದು ನಡೆಯಲಿದೆ.
33ರ ಹರೆಯದ ಒಲಿಂಪಿಕ್ ಚಾಂಪಿಯನ್ ಪೊವೆಲ್ 100 ಮೀ. ಓಟದಲ್ಲಿ 9.77 ಹಾಗೂ 9.74 ಸೆಕೆಂಡ್‌ನಲ್ಲಿ ಗುರಿ ತಲುಪಿ 2005 ರಿಂದ 2008ರ ತನಕ ವಿಶ್ವ ದಾಖಲೆ ಕಾಯ್ದುಕೊಂಡಿದ್ದರು. ಪೊವೆಲ್ ವಿಶ್ವ ದಾಖಲೆಯನ್ನು ಅವರದ್ದೇ ದೇಶದ ಉಸೇನ್ ಬೋಲ್ಟ್ ಮುರಿದಿದ್ದರು.
ಪೊವೆಲ್ 2004, 2008 ಹಾಗೂ 2012ರ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಮರಣೀಯ ಪ್ರದರ್ಶನ ನೀಡಿದ್ದರು. 2014ರಲ್ಲಿ ಡೋಪಿಂಗ್ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಕ್ಕೆ ಒಳಗಾಗಿದ್ದ ಪೊವೆಲ್ ಈ ವರ್ಷದ ರಿಯೋ ಒಲಿಂಪಿಕ್ಸ್‌ನಲ್ಲಿ 4-100 ಮೀ.ರಿಲೇಯಲ್ಲಿ ಚಿನ್ನದ ಪದಕವನ್ನು ಜಯಿಸುವ ಮೂಲಕ ಟ್ರಾಕ್ ಅಂಗಣಕ್ಕೆ ಮರಳಿದ್ದರು.
ದಿಲ್ಲಿ ಹಾಫ್ ಮ್ಯಾರಥಾನ್‌ನಲ್ಲಿ ವಿಶ್ವ ದರ್ಜೆಯ ಭಾರತ ಹಾಗೂ ವಿದೇಶದ ಅಥ್ಲೀಟ್‌ಗಳು, ವೃತ್ತಿಪರ ಹಾಗೂ ಹವ್ಯಾಸಿ ಓಟಗಾರರು ಸಹಿತ 34,000ಕ್ಕೂ ಅಧಿಕ ಜನರು ಭಾಗವಹಿಸಲಿದ್ದಾರೆ.







