Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಷ್ಪ್ರಯೋಜಕ ಚಿಕಿತ್ಸೆಗಳು ಬೇಕಿಲ್ಲ!

ನಿಷ್ಪ್ರಯೋಜಕ ಚಿಕಿತ್ಸೆಗಳು ಬೇಕಿಲ್ಲ!

‘ಅಕಾಡಮಿ ಆಫ್ ಮೆಡಿಕಲ್ ರಾಯಲ್ ಕಾಲೇಜಸ್’ನಿಂದ ಇಂತಹ 40 ಚಿಕಿತ್ಸೆಗಳ ಪಟ್ಟಿ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ26 Oct 2016 11:32 PM IST
share
ನಿಷ್ಪ್ರಯೋಜಕ ಚಿಕಿತ್ಸೆಗಳು ಬೇಕಿಲ್ಲ!

*ಅನಗತ್ಯ ವೈದ್ಯಕೀಯ ಚಿಕಿತ್ಸೆ ತಪ್ಪಿಸಲು ಇದು ಸಹಕಾರಿ *ತಮ್ಮ ಪರೀಕ್ಷೆ, ಚಿಕಿತ್ಸೆಗೆ ಮೊದಲು ರೋಗಿಗಳು ಪ್ರಶ್ನಿಸಬೇಕು *ಯಾವ ಚಿಕಿತ್ಸೆ ಅನಗತ್ಯ? *ನೀವು ಕೇಳಬೇಕಾದ ಪ್ರಶ್ನೆಗಳೇನು?

45 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಋತುಚಕ್ರ ನಿಂತಿದೆಯೇ ಎನ್ನುವುದನ್ನು ನಿರ್ಧರಿಸಲು ಅವರನ್ನು ರಕ್ತಪರೀಕ್ಷೆಗೊಳಪಡಿಸುವ ಅಗತ್ಯವಿಲ್ಲ ಮತ್ತು ಕೆಳಬೆನ್ನಿನ ನೋವಿರುವ ರೋಗಿಗಳಿಗೆ ಎಕ್ಸರೇಗಳಿಂದ ಯಾವುದೇ ಹೇಳಿಕೊಳ್ಳುವಂತಹ ಪ್ರಯೋಜನವಿಲ್ಲ ಎನ್ನುವುದು ನಿಮಗೆ ಗೊತ್ತೇ? ಇದನ್ನು ನೀವು ನಂಬಬೇಕು...ಏಕೆಂದರೆ ಇದು ವೈದ್ಯರೇ ಹೇಳಿರುವ ಸತ್ಯ.
ಅಕಾಡಮಿ ಆಫ್ ಮೆಡಿಕಲ್ ರಾಯಲ್ ಕಾಲೇಜಸ್ ಅನಗತ್ಯ ವೈದ್ಯಕೀಯ ಚಿಕಿತ್ಸೆಗಳ ಸಂಖ್ಯೆಯನ್ನು ತಗ್ಗಿಸುವ ತನ್ನ ಅಭಿಯಾನದ ಅಂಗವಾಗಿ ಇಂತಹ 40 ವೈದ್ಯಕೀಯ ಚಿಕಿತ್ಸೆಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಚಿಕಿತ್ಸೆಗಳಿಂದ ರೋಗಿಗಳಿಗೆ ಯಾವುದೇ ಲಾಭವಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ತಮಗೆ ನಡೆಸಲಾಗುವ ಚಿಕಿತ್ಸಾ ವಿಧಾನಗಳನ್ನು ವೈದ್ಯರಲ್ಲಿ ಪ್ರಶ್ನಿಸುವ ಪರಿಪಾಠವನ್ನು ರೋಗಿಗಳು ಬೆಳೆಸಿಕೊಳ್ಳಬೇಕು ಎಂದು ಅದು ಹೇಳಿದೆ.
ಅಕಾಡಮಿ ಆಫ್ ಮೆಡಿಕಲ್ ರಾಯಲ್ ಕಾಲೇಜಸ್ ತಮ್ಮ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ, ಯಾವಾಗಲೂ ಅಗತ್ಯವಲ್ಲದ ಮತ್ತು ವೌಲಿಕವಲ್ಲದ ಐದು ಚಿಕಿತ್ಸೆಗಳನ್ನು ಗುರುತಿಸುವಂತೆ 11 ವಿಭಿನ್ನ ರೋಗಗಳ ತಜ್ಞವೈದ್ಯರಿಗೆ ಸೂಚಿಸಿತ್ತು. ಈ ತಜ್ಞವೈದ್ಯರು ಸಲ್ಲಿಸಿದ ವಿಶ್ಲೇಷಣಾ ವರದಿಯ ಆಧಾರದಲ್ಲಿ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
*ಗಾಯಗಳು ಮತ್ತು ತರಚುಗಾಯಗಳನ್ನು ತೊಳೆಯುವಲ್ಲಿ ನಲ್ಲಿಯ ನೀರು ಸಲೈನ್ ದ್ರಾವಣದಷ್ಟೇ ಉತ್ತಮವಾಗಿದೆ.
*ಮಕ್ಕಳಲ್ಲಿ ಮಣಿಗಂಟಿನ ಸಣ್ಣಪುಟ್ಟ ಮೂಳೆಮುರಿತಗಳಿಗೆ ಪ್ಲಾಸ್ಟರ್ ಸಾಮಾನ್ಯವಾಗಿ ಅಗತ್ಯವಿಲ್ಲ, ಬಿದಿರಿನ ತುಂಡನ್ನು ಬಿಗಿಯಾಗಿ ಕಟ್ಟಿದರೂ ಮೂಳೆ ಸೇರಿಕೊಳ್ಳುತ್ತದೆ.
*ಬ್ರಾಂಕಿಯೊಲಿಟಿಸ್‌ಅಥವಾ ಉಸಿರಾಟದ ತೊಂದರೆಗಳಿಂದ ಬಳಲುವ ಮಕ್ಕಳು ಸಾಮಾನ್ಯವಾಗಿ ಯಾವುದೇ ಚಿಕಿತ್ಸೆಯಿಲ್ಲದೆ ಗುಣಮುಖರಾಗುತ್ತಾರೆ.
*ಹೆರಿಗೆಯ ಸಮಯದಲ್ಲಿ ತಾಯಿಯಲ್ಲಿ ಸಾಮಾನ್ಯಕಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳಿದ್ದರೆ ಮಾತ್ರ ಶಿಶುವಿನ ಹೃದಯದ ಇಲೆಕ್ಟ್ರಾನಿಕ್ ಮಾನಿಟರಿಂಗ್ ಅಗತ್ಯವಾಗುತ್ತದೆ.
*ಕೊನೆಯ ಹಂತದ ಕ್ಯಾನ್ಸರ್‌ನ ಲಕ್ಷಣಗಳನ್ನು ಹಗುರಗೊಳಿಸಲು ಕೆಮೊಥೆರಪಿಯನ್ನು ಬಳಸಬಹುದು, ಆದರೆ ಅದು ಜೀವನದ ಕೊನೆಯ ತಿಂಗಳುಗಳಲ್ಲಿ ರೋಗಿಯ ಸಂಕಷ್ಟವನ್ನು ಇನ್ನಷ್ಟು ಹೆಚ್ಚಿಸಬಹುದು.
*ಪ್ರಾಸ್ಟೇಟ್ ಸ್ಪೆಸಿಫಿಕ್ ಆ್ಯಂಟಿಜೆನ್(ಪಿಎಸ್‌ಎ) ಎಂಬ ಪರೀಕ್ಷೆಯನ್ನು ಬಳಸಿ ಪ್ರಾಸ್ಟೇಟ್ ಗ್ರಂಥಿಯ ಮಾಮೂಲು ತಪಾಸಣೆ ಆಯಸ್ಸನ್ನು ಹೆಚ್ಚಿಸುವುದಿಲ್ಲ ಮತ್ತು ಅನಗತ್ಯ ತಳಮಳಕ್ಕೆ ಕಾರಣವಾಗಬಲ್ಲುದು.
ಪ್ರತಿ ವರ್ಷ ಈ ಪಟ್ಟಿಗೆ ಇನ್ನಷ್ಟು ಅನಗತ್ಯ ಚಿಕಿತ್ಸೆಗಳು ಸೇರ್ಪಡೆಯಾಗಲಿವೆ.
ವೈದ್ಯರು ಬೇಡವೆಂದರೂ ರೋಗಿಗಳೇ ತಮಗೆ ಅನಗತ್ಯ ಚಿಕಿತ್ಸೆಗಳಿಗೆ ಒಳಪಡಿಸುವಂತೆ ಒತ್ತಡ ಹೇರುವ ನಿದರ್ಶನಗಳೂ ಹೇರಳವಾಗಿವೆ ಎಂದು ಅಕಾಡಮಿ ಹೇಳಿದೆ. ಎನ್‌ಎಚ್‌ಎಸ್(ರಾಷ್ಟ್ರೀಯ ಆರೋಗ್ಯ ಸೇವೆ) ಕೂಡ ರೋಗಿಗಳು ಅನಗತ್ಯ ಔಷಧಗಳನ್ನು ಸೇವಿಸುವುದನ್ನು ತಗ್ಗಿಸುವ ಒತ್ತಡಕ್ಕೆ ಗುರಿಯಾಗಿದೆ. ರೋಗಿಗಳಿಗೆ ಆ್ಯಂಟಿ ಬಯಾಟಿಕ್‌ಗಳನ್ನು ಶಿಫಾರಸು ಮಾಡುವುದನ್ನು ಕಡಿಮೆಗೊಳಿಸುವಂತೆ ಜನರಲ್ ಪ್ರಾಕ್ಟಿಷನರ್‌ಗಳಿಗೆ ಇತ್ತೀಚೆಗೆ ಸೂಚಿಸಲಾಗಿದೆ.

ರೋಗಿಗಳು ಯಾವುದೇ ಚಿಕಿತ್ಸೆಯನ್ನು ಪಡೆಯುವ ಮುನ್ನ ಸದಾ ಈ ಐದು ಪ್ರಶ್ನೆಗಳನ್ನು ಕೇಳಬೇಕೆಂದು ಅಕಾಡಮಿಯು ಸೂಚಿಸಿದೆ.
.ಈ ಪರೀಕ್ಷೆ, ಚಿಕಿತ್ಸೆ ಅಥವಾ ವಿಧಾನ ನಿಜಕ್ಕೂ ನನಗೆ ಅಗತ್ಯವಿದೆಯೇ?
.ಈ ಚಿಕಿತ್ಸೆಯ ಸಂಭಾವ್ಯ ಅಪಾಯಗಳೇನು?
.ಸಂಭಾವ್ಯ ಅಡ್ಡ ಪರಿಣಾಮಗಳೇನು?
.ಇದಕ್ಕಿಂತಲೂ ಸರಳ ಮತ್ತು ಸುರಕ್ಷಿತ ಪರ್ಯಾಯವೇನಾದರೂ ಇದೆಯೇ?
.ನಾನು ಯಾವುದೇ ಚಿಕಿತ್ಸೆ ಪಡೆಯದಿದ್ದರೆ ಏನಾಗುತ್ತದೆ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X