ರಾಷ್ಟ್ರಪತಿ ಸಂಬಳ ಮೂರು ಪಟ್ಟು ಹೆಚ್ಚಳ: ಪ್ರಸ್ತಾವನೆ
ಹೊಸದಿಲ್ಲಿ, ಅ.26: ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯವರ ಸಂಬಳವನ್ನು ಮೂರುಪಟ್ಟು ಹೆಚ್ಚಿಸುವ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಪ್ರಸ್ತಾವನೆ ರೂಪಿಸಿದ್ದು ಈ ಪ್ರಸ್ತಾವನೆಯನ್ನು ಶೀಘ್ರ ಕೇಂದ್ರ ಸಂಪುಟದೆದುರು ಮಂಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತ ಬಳಿಕ ಇದನ್ನು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಮಂಡಿಸುವ ನಿರೀಕ್ಷೆಯಿದೆ. ಇದರ ಪ್ರಕಾರ ರಾಷ್ಟ್ರಪತಿಯ ಸಂಬಳ ಐದು ಲಕ್ಷಕ್ಕೆ ಮತ್ತು ಉಪರಾಷ್ಟ್ರಪತಿಯ ಸಂಬಳ ಮೂರೂವರೆ ಲಕ್ಷಕ್ಕೆ ಏರಲಿದೆ. 7ನೇ ವೇತನ ಆಯೋಗದ ಅನುಷ್ಠಾನದ ಬಳಿಕ ರಾಷ್ಟ್ರಪತಿಯವರ ಸಂಬಳಕ್ಕಿಂತ ಸಂಪುಟ ಕಾರ್ಯದರ್ಶಿ ಒಂದು ಲಕ್ಷ ರೂ. ಹೆಚ್ಚಿನ ಸಂಬಳ ಪಡೆಯುವ ವಿಲಕ್ಷಣ ಪರಿಸ್ಥಿತಿ ತಲೆದೋರಿದ್ದು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ವೇತನ ಆಯೋಗದ ಶಿಫಾರಸಿನಂತೆ ಸಂಪುಟ ಕಾರ್ಯದರ್ಶಿ ತಿಂಗಳಿಗೆ 2.5 ಲಕ್ಷ ರೂ. ಸಂಬಳ ಪಡೆಯುತ್ತಾರೆ.
Next Story





