ಅಡುಗೆ ಮನೆಯಲ್ಲಿ ವಾಸನೆ ನಿವಾರಿಸಲು ಇಲ್ಲಿದೆ ಉಪಾಯಗಳು

ಸಾಮಾನ್ಯ ಲಿಂಬೆ ರಸ ಮಾಡುವ ಬದಲು ಲಿಂಬೆಯಿಂದ ಬೇರೇನಾದರೂ ತಿನಿಸನ್ನು ಯಾವಾಗಲಾದರೂ ಮಾಡಿದ್ದೀರಾ? ಇರಲಿ, ಲಿಂಬೆಯನ್ನು ಇತರ ಯಾವುದೇ ವಿಚಾರಕ್ಕೇನಾದರೂ ಬಳಸಿದ್ದೀರಾ? ಇಲ್ಲಿದೆ ಲಿಂಬೆಯ ಬಹುಬಳಕೆಯ ವಿಧಗಳು.
ಕಲೆ ನಿವಾರಣೆ

ಲಿಂಬೆಗಳು ಕಲೆ ನಿವಾರಿಸಲು ಅತೀ ಉತ್ತಮ. ಲಿಂಬೆಯನ್ನು ಕಲೆಯ ಮೇಲೆ ಒಮ್ಮೆ ಉಜ್ಜಿ ರಾತ್ರಿಯಿಡೀ ಹಾಗೇ ಬಿಡಿ. ಸಾಮಾನ್ಯ ಎಂಬಂತೆ ಅದನ್ನು ಮರುದಿನ ತೊಳೆದರೆ ಕಲೆ ಮಾಯವಾಗಿರುತ್ತದೆ.
ಕೀಟನಾಶಕಗಳಿಗೆ ರಾಮಬಾಣ

ಒಂದು ಚಮಚ ಲಿಂಬೆ ರಸ ಸಹಜವಾಗಿಯೇ ತರಕಾರಿ ಮತ್ತು ಹಣ್ಣುಗಳಲ್ಲಿನ ಕೀಟನಾಶಕದ ಪರಿಣಾಮವನ್ನು ನಿವಾರಿಸಿಬಿಡುತ್ತದೆ.
ಅಡುಗೆ ಸ್ವಚ್ಛಕ

ಕೆಲವೊಮ್ಮೆ ಅಡುಗೆಮನೆಯ ತರಕಾರಿ ಹೆಚ್ಚುವ ಮಣೆಯನ್ನು ಸ್ವಚ್ಛ ಮಾಡಲು ಲಿಂಬೆ ಬಳಸಬಹುದು. ಆಗಾಗ್ಗೆ ಲಿಂಬೆ ರಸವನ್ನು ಉಜ್ಜುವುದರಿಂದ ಮಣೆ ಸ್ವಚ್ಛಗೊಳ್ಳುತ್ತದೆ.
ತಾಜಾ ಮತ್ತು ಹಸಿರು

ಫ್ರಿಡ್ಜ್‌ನಲ್ಲಿ ಬಾಡಿದ ಎಲೆಗಳಿದ್ದರೆ ಅದನ್ನು ತೊಳೆಯಲು ತಂಪು ನೀರಿಗೆ ಅರ್ಧ ತುಂಡು ಲಿಂಬೆ ಹಾಕಿ. ಈ ಎಲೆಗಳು ಮತ್ತು ನೀರನ್ನು ರೆಫ್ರಿಜರೇಟರ್ ಅಲ್ಲಿಡಿ. ಒಂದುಗಂಟೆ ಇಟ್ಟು ತೆಗೆಯಿರಿ. ಎಲೆಗಳು ಮತ್ತೆ ತಾಜಾತನ ಕಂಡಿರುತ್ತವೆ.
ಕೆಟ್ಟ ವಾಸನೆ ನಿವಾರಣೆಗೆ

ಲಿಂಬೆ ರೆಫ್ರಿಜರೇಟರಲ್ಲಿ ವಾಸನೆ ತರಲೂ ಉಪಯುಕ್ತ. ಫ್ರಿಡ್ಜ್‌ನಲ್ಲಿ ತುಂಡು ಮಾಡಿದ ಲಿಂಬೆಗಳನ್ನು ಸದಾ ಇಟ್ಟಿರುವುದು ಉತ್ತಮ ವಾಸನೆ ಬರಲು ನೆರವಾಗುತ್ತದೆ.
ಕೀಟನಿವಾರಕ

ಮನೆಯಲ್ಲಿ ಕೀಟಗಳ ಸಮಸ್ಯೆ ಇದ್ದಲ್ಲಿ ಲಿಂಬೆಯ ತುಂಡುಗಳನ್ನು ಕೀಟಗಳು ಬರುವೆಡೆ ಇಡಿ. ಕಿಟಕಿ ಬದಿ, ಬಾಗಿಲು ಬದಿ ಅಥವಾ ಇರುವೆಗಳು ಬರುವ ಕಡೆಗೆ ಇಡಿ. ಜಿರಳೆ ಮತ್ತು ಸೊಳ್ಳೆಗಳನ್ನೂ ಇದು ದೂರ ಓಡಿಸುತ್ತದೆ.
ಆಸ್ತಮಾ ನಿವಾರಣೆ

ಎರಡು ಚಮಚ ಲಿಂಬೆ ರಸವನ್ನು ಊಟಕ್ಕೆ ಮೊದಲು ಸೇವಿಸುವುದು ಮತ್ತು ಮಲಗುವ ಮೊದಲು ಸೇವಿಸುವುದು ಆಸ್ತಮಾ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.
ಹೊಳೆಯುವ ತಾಮ್ರ ಮತ್ತು ಹಿತ್ತಾಳೆ

ಲಿಂಬೆ ರಸ ಮತ್ತು ಉಪ್ಪು ಬೆರೆಸಿ ಸ್ವಚ್ಛ ಮಾಡಿದರೆ ತಾಮ್ರ ಮತ್ತು ಹಿತ್ತಾಳೆಯನ್ನು ಮತ್ತೆ ಹೊಳೆಯುವಂತೆ ಮಾಡಬಹುದು. ಅವುಗಳನ್ನು ಪಾತ್ರೆಗಳ ಮೇಲೆ ಉಜ್ಜಿ ಮತ್ತು ಬಿಸಿ ನೀರಿನಿಂದ ತೊಳೆದರೆ ಹೊಳೆಯಲಾರಂಭಿಸುತ್ತದೆ.
ಹಾಲಿನ ಬಿಳುಪು

ತರಕಾರಿಗಳು ಅಡುಗೆಯ ಸಂದರ್ಭ ಬಿಳಿಯಾಗಿ ಕಾಣಬೇಕೆಂದರೆ ಅವುಗಳನ್ನು ಬೇಯಿಸುವ ಮೊದಲು ಒಂದು ಚಮಚ ಲಿಂಬೆರಸ ಬೆರೆಸಿ.
ಲವಣಾಂಶ ನಿವಾರಣೆ

ಕುಕ್ಕರ್ ಅಥವಾ ಚಹಾ ಪಾತ್ರೆಯಲ್ಲಿ ಉಳಿದಿರುವ ಲವಣಾಂಶ ನಿವಾರಿಸಲು ಅದಕ್ಕೆ ನೀರು ತುಂಬಿ ಸ್ವಲ್ಪ ಲಿಂಬೆ ಸಿಪ್ಪೆಯನ್ನು ಹಾಕಿ ಕುದಿಸಿ. ತಂಪಾದ ನಂತರ ಒಣಗಿಸಿ ಮತ್ತು ನೀರಿನಿಂದ ತೊಳೆಯಿರಿ. ಪಾತ್ರೆಗಳಿಗೆ ಮತ್ತೆ ಹೊಳಪು ಬರುತ್ತದೆ.
ಕೃಪೆ: http://timesofindia.indiatimes.com/







