ಮದಕ: ‘ಬಿ’ ಮುನ್ನಾ ಗೆಳೆಯರ ಬಳಗದಿಂದ ಕಬಡ್ಡಿ ಪಂದ್ಯಾಟ

ಬಂಟ್ವಾಳ, ಅ.27: ಮದಕದ ಪಡಾರಿನ ‘ಬಿ’ ಮುನ್ನಾ ಗೆಳೆಯರ ಬಳಗದ ವತಿಯಿಂದ 60 ಕೆ.ಜಿ. ವಿಭಾಗದ ಹೊನಲು ಬೆಳಕಿನ ಪುರುಷರ ಕಬಡ್ಡಿ ಪಂದ್ಯಾಟ ನಡೆಯಿತು.
ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ತುಳುನಾಡ ವೇದಿಕೆಯ ಅಧ್ಯಕ್ಷ ಕೆ.ಮಹೇಂದ್ರನಾಥ್ ಸಾಲೆತ್ತೂತು ಪಂದ್ಯಾಟಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕೊಳ್ನಾಡು ಗ್ರಾಪಂ ಸದಸ್ಯ ಸಿ.ಎಚ್.ಅಬೂಬಕರ್, ದುಬೈ ಪವರ್ ಲಿಫ್ಟ್ ಕಂಪೆನಿಯ ಮೇನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಮದಕ, ನಝೀರ್ ಅಂತರ್ ಮೂಲೆ, ಆದಂಕುಂಞಿ ದುಬೈ ಮಾದಕಟ್ಟೆ, ಅಬ್ಬಾಸ್ ಬಾಳೆಪುಣಿ, ಹನೀಫ್ ತಲಕ್ಕಿ, ಹಮೀದ್ ಮದಕ, ಹೆಲ್ಪಿಂಗ್ ಹ್ಯಾಂಡ್ಸ್ ಕರೈ ಇದರ ಅಧ್ಯಕ್ಷ ಎಚ್.ಎಂ.ಖಾಲಿದ್ ಕರೈ, ಆಶಿಕ್ ಕುಕ್ಕಾಜೆ, ಮುಹಮ್ಮದ್ ಗಝ್ಝಾಲಿ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಆಟೊ ಸಲೀಂ ಮಾಲಕತ್ವದ ಗೊಲ್ಡನ್ ಗೈಸ್ ಪಡಾರು ಮದಕ ಪ್ರಥಮ ಬಹುಮಾನ, ಸೆವೆನ್ ಸ್ಟಾರ್ ಕಲ್ಪನೆ ದ್ವಿತೀಯ ಬಹುಮಾನ, ಸೆವೆನ್ ಸ್ಟಾರ್ ಕಲ್ಪನೆ ‘ಬಿ’ ತೃತೀಯ ಬಹುಮಾನವನ್ನು ಹಾಗೂ ಗ್ರೀನ್ ಸ್ಟಾರ್ ಪರ್ತಿಪ್ಪಾಡಿ ಚತುರ್ಥ ಬಹುಮಾನವನ್ನು ಪಡೆದಿದೆ.
ನೌಫಲ್ ಕೆ.ಬಿ.ಎಸ್. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







