Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕುಸಿಯುತ್ತಿರುವ, ವಾಲುತ್ತಿರುವ ಸ್ಯಾನ್...

ಕುಸಿಯುತ್ತಿರುವ, ವಾಲುತ್ತಿರುವ ಸ್ಯಾನ್ ಫ್ರಾನ್ಸಿಸ್ಕೋದ ಪ್ರತಿಷ್ಠಿತ ಬಹುಮಹಡಿ ಕಟ್ಟಡ!

ವಾರ್ತಾಭಾರತಿವಾರ್ತಾಭಾರತಿ27 Oct 2016 11:15 PM IST
share
ಕುಸಿಯುತ್ತಿರುವ, ವಾಲುತ್ತಿರುವ ಸ್ಯಾನ್ ಫ್ರಾನ್ಸಿಸ್ಕೋದ ಪ್ರತಿಷ್ಠಿತ ಬಹುಮಹಡಿ ಕಟ್ಟಡ!

ಪಮೇಲಾ ಬಟ್ಟರಿ ದುಬಾರಿ ಮೆಲೆನಿಯಂ ಟವರ್‌ನ ತಮ್ಮ 57ನೆ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ಗಾಲ್ಫ್ ಆಡುತ್ತಾ ಆರು ವರ್ಷಗಳ ಹಿಂದೆ ವಿಚಿತ್ರವಾದುದೊಂದನ್ನು ಗಮನಿಸಿದ್ದರು. ಬಾಲು ಪ್ರತೀ ಬಾರಿ ಒಂದೇ ಮೂಲೆಗೆ ಹೋಗಿ ನಿಲ್ಲುತ್ತಿತ್ತು. ಇದು ಈ ಗಗನಚುಂಬಿ ಕಟ್ಟಡದಲ್ಲಿ ಏನೋ ಲೋಪವಿದೆ ಎಂದು ಜನರಿಗೆ ಮನವರಿಕೆಯಾದ ಮೊದಲ ಕ್ಷಣ.

ಈಗ ಈ ಕಟ್ಟಡ ಸ್ಯಾನ್ ಫ್ರಾನ್ಸಿಸ್ಕೋದ ಲೀನಿಂಗ್ ಟವರ್ (ವಾಲುವ ಗೋಪುರ) ಎನ್ನುವ ಕುಖ್ಯಾತಿ ಪಡೆದಿದೆ. ಆದರೆ ಇದು ಬಾಗುವುದು ಮಾತ್ರವಲ್ಲ, ಕುಸಿಯುತ್ತಲೂ ಇದೆ. ಈ ಬಗ್ಗೆ ಪರಿಶೀಲಿಸುತ್ತಿರುವ ಇಂಜಿನಿಯರ್‌ಗಳು ಸದ್ಯಕ್ಕೆ ಸಮಸ್ಯೆ ಬಗೆಹರಿಯುವ ಲಕ್ಷಣವಿಲ್ಲ ಎಂದು ಅನಿಸಿದೆ. "ನನಗೆ ಬಾಗುತ್ತಿರುವ ಬಗ್ಗೆಯೇ ಚಿಂತೆಯಾಗಿದೆ. ಇಲ್ಲಿ ನೆಲೆಸುವುದು ಸುರಕ್ಷಿತವೇ?" ಎಂದ 76 ವರ್ಷದ ರಿಯಲ್ ಎಸ್ಟೇಟ್ ಡೆವಲಪರ್ ಬಟರಿ ಕೇಳುತ್ತಿದ್ದಾರೆ.

7 ವರ್ಷದ ಹಿಂದೆ ಕಟ್ಟಲಾದ ಈ ಟವರ್ ಮೃದು ನೆಲದಲ್ಲಿ ಈವರೆಗೆ 16 ಇಂಚು ಕುಸಿದಿದೆ. ಆದರೆ ಸಮಾನವಾಗಿ ಕುಸಿಯುತ್ತಿರುವ ಕಾರಣ ನೆಲದಡಿಗೆ 2 ಇಂಚು ಇಳಿದು ಹೋಗಿದೆ. ಅಲ್ಲದೆ, ಮೇಲ್ಗಡೆ 6 ಇಂಚು ವಾಲಿದೆ. 16 ಅಡಿಗೂ ಹೆಚ್ಚು ಬಾಗಿರುವ ಇಟಲಿಯ ಪ್ರಸಿದ್ಧ ಪೀಸಾ ಗೋಪುರದ ವಾಲುವಿಕೆಗೆ ಹೋಲಿಸಿದಲ್ಲಿ ಇದು ಕಡಿಮೆಯೇ. ಆದರೆ ಮಿಲೆನಿಯಂ ಟವರ್ ದೊಡ್ಡ ಭೂಕಂಪ ಪೀಡಿತ ಜಾಗದಲ್ಲಿದೆ. ಹೀಗಾಗಿ ರಚನಾತ್ಮಕ ಸಮಸ್ಯೆಗಳು ಎಚ್ಚರಿಕೆಯ ಗಂಟೆಯಾಗಿದೆ. ಈ ನಿಟ್ಟಿನಲ್ಲಿ ದಾಖಲೆಗಳು ಬಹಿರಂಗವಾಗಿ ನಗರದ ಕಟ್ಟಡ ಇಲಾಖೆ ಮತ್ತು ಡೆವಲಪರ್ ಇಬ್ಬರಿಗೂ ಕಟ್ಟಡ ಕುಸಿಯುತ್ತಿರುವ ಬಗ್ಗೆ 2009ರಿಂದೇ ಅರಿವಿದ್ದರೂ ವಿಷಯವನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.

2009ರ ಫೆಬ್ರವರಿಯಲ್ಲಿ ಬರೆದ ಪತ್ರದಲ್ಲಿ ಮುಖ್ಯ ಕಟ್ಟಡ ಇನ್‌ಸ್ಪೆಕ್ಟರ್ ರೇಮಂಡ್ ಲುಯ್ ಟವರ್ ಇಂಜಿನಿಯರ್‌ಗಳಿಗೆ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚು ವಸತಿ ವ್ಯವಸ್ಥೆ ಮಾಡುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದರು. ಕುಸಿಯುತ್ತಿರುವುದು ಮತ್ತು ಕಟ್ಟಡದ ಸುರಕ್ಷೆಗೆ ಏನು ಮಾಡಲಾಗಿದೆ ಎಂದೂ ಅವರು ಪ್ರಶ್ನಿಸಿದ್ದರು. ಆದರೆ ಡಿಸಿಮೋನ್ ಕನ್ಸಲ್ಟಿಂಗ್ ಇಂಜಿನಿಯರ್ ಈಗಾಗಲೇ ಅನಿರೀಕ್ಷಿತವಾಗಿ 8.3 ಇಂಚುಗಳಷ್ಟು ಕುಸಿದಿದ್ದರೂ ಕಟ್ಟಡ ಸುರಕ್ಷಿತ ಎಂದಿದ್ದರು. ಎಲ್ಲವೂ ಸುರಕ್ಷಿತವಾಗಿದೆ ಎಂದುಕೊಂಡು ಇದಕ್ಕೆ ನೆಲೆಸಲು ಸುರಕ್ಷಿತವಾದ ಜಾಗ ಎಂದು ಪ್ರಮಾಣೀಕರಣ ಕೊಡಲಾಗಿದೆ ಎಂದು ಲುಯ್ ಹೇಳಿದ್ದಾರೆ. ಈಗ ನಗರಾಧಿಕಾರಿಗಳು, ವಸತಿಗೆ ಆರಿಸಿಕೊಂಡ ಮಾಲಕರು, ಡೆವಲಪರ್ ಮತ್ತು ರಾಜಕಾರಣಿಗಳು ಯಾರ ಮೇಲೆ ಹೊಣೆ ಹೊರಿಸುವುದು ಎಂದು ಕಚ್ಚಾಡುತ್ತಿದ್ದಾರೆ. ಆದರೆ ಕಟ್ಟಡ ವಾಲುವುದು ನಿಲ್ಲಿಸುವುದು ಯಾವಾಗ ಎನ್ನುವ ಪ್ರಶ್ನೆ ಹಾಗೇ ಇದೆ. ಕಳೆದ ತಿಂಗಳು ಇಂಜಿನಿಯರ್‌ಗಳು ಕಟ್ಟಡ ಏಕೆ ಕುಸಿಯುತ್ತಿದೆ ಮತ್ತು ಅದನ್ನು ಸರಿಪಡಿಸುವುದು ಹೇಗೆಂದು ಪರಿಶೀಲನೆ ನಡೆಸಿದ್ದರು. ಜಿಯೋಟೆಕ್ನಿಕಲ್ ಇಂಜಿನಿಯರ್ ಪ್ರಕಾರ ಟವರ್ ಕನಿಷ್ಠ 24-31 ಇಂಚುಗಳಷ್ಟು ಕುಸಿಯುವ ಸಾಧ್ಯತೆಯಿದೆ. ಮಿಲೇನಿಯಂ ಟವರ್ ತೆರೆದಾಗ ನಗರದ ಶ್ರೀಮಂತರು ಆಕರ್ಷಿತರಾಗಿ ತ್ವರಿತವಾಗಿ 419 ಅಪಾರ್ಟ್‌ಮೆಂಟ್‌ಗಳು ಮಾರಾಟವಾಗಿದ್ದವು. ಇದರಲ್ಲಿ ನಗರದ ಉನ್ನತವರ್ಗದ ಜನರು ವಾಸವಿದ್ದಾರೆ. ಕಟ್ಟಡದಲ್ಲಿ 75 ಅಡಿಯ ಈಜುಕೊಳ, ಆರೋಗ್ಯ ಕ್ಲಬ್, ಸ್ಪಾ, ಸಿನಿಮಾ ಹಾಲ್, ರೆಸ್ಟೊರಂಟ್, ವೈನ್ ಬಾರ್ ಮೊದಲಾದವು ಇವೆ. ಪೆಂಟ್ ಹೌಸ್‌ಗಳು 10 ಮಿಲಿಯನ್ ಡಾಲರ್‌ಗೂ ಮೇಲೆ ಮಾರಾಟಗೊಂಡಿವೆ. ಕಟ್ಟಡದ ಸಮಸ್ಯೆ ಭೂಗತ ಐದು ಮಹಡಿಗಳ ಗ್ಯಾರೇಜ್‌ನಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಈ ನಡುವೆ ನ್ಯಾಯಾಲಯದಲ್ಲಿ ಮೊಕದ್ದಮೆಗಳೂ ನಡೆಯುತ್ತಿವೆ. ನಿವಾಸಿಗಳು ಡೆವಲಪರ್‌ಗಳ ಮೇಲೆ ದೂರು ಕೊಟ್ಟು ವಿನ್ಯಾಸದಲ್ಲೇ ತೊಂದರೆಯಿದೆ ಎಂದು ಆರೋಪಿಸಿದ್ದಾರೆ.

ನಿವಾಸಿಗಳ ಪ್ರಕಾರ ಟವರ್‌ನ ನೆಲಹಾಸನ್ನು ಸರಿಯಾಗಿ ಹಾಕದೆ ಇದ್ದ ಕಾರಣಕ್ಕೇ ಈಗ ಸಮಸ್ಯೆಯಾಗುತ್ತಿದೆ. ಈ ಸುರಕ್ಷೆಯ ಬಗ್ಗೆ ಭಯಪಟ್ಟುಕೊಂಡೇ ನೆಲೆಸುವ ಹಾಗಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ವರ್ಷಗಳೇ ಹಿಡಿಯಬಹುದು ಎನ್ನಲಾಗುತ್ತಿದೆ. ಆದರೆ ಅಷ್ಟರವರೆಗೆ ಈ ಕಟ್ಟಡ ಉಳಿಯುವುದೇ ಎಂದು ಭಯವಾಗಿದೆ ಎಂದು ನಿವಾಸಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.

ಕೃಪೆ : http://www.businessinsider.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X