ಮುಹಮ್ಮದ್ ಮುಸ್ಲಿಯಾರ್ ಸೇರಾಜೆ

ವಿಟ್ಲ, ಅ.27: ವಿಟ್ಲ ಸಮೀಪದ ಸೇರಾಜೆ ನಿವಾಸಿ ಹಾಜಿ ಮಹಮ್ಮದ್ ಮುಸ್ಲಿಯಾರ್ ಸೇರಾಜೆ (72) ಹೃದಯಾಘಾತದಿಂದ ಬುಧವಾರ ಮಧ್ಯರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮುಹಮ್ಮದ್ ಅವರು ಈ ಹಿಂದೆ ಹಲವು ಮಸೀದಿಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಕೃಷಿಕರಾಗಿ ನಿವೃತ್ತಿ ಜೀವನ ನಡೆಸುತ್ತಿದ್ದರು. ಮೃತರು ಪತ್ನಿ, ಆರು ಮಂದಿ ಪುತ್ರರು ಮತ್ತು 6 ಮಂದಿ ಪುತ್ರಿಯರನ್ನು ಅಗಲಿದ್ದಾರೆ.
Next Story





