ದ್ವೇಷಭಾಷಣ: ಕೇರಳದ ಹಿಂದು ಸಂಘಟನೆ ನಾಯಕಿಯ ವಿರುದ್ಧ ಪ್ರಕರಣ ದಾಖಲು

ಕಾಸರಗೋಡು,ಅ.27: ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದಕ್ಕಾಗಿ ಕೇರಳದ ಧಾರ್ಮಿಕ ಸಂಘಟನೆ ‘ಹಿಂದು ಐಕ್ಯ ವೇದಿ’ಯ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಭಾಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ.
ಸರಕಾರಿ ವಕೀಲ ಸಿ.ಶುಕೂರ್ ಅವರ ದೂರಿನ ಮೇರೆಗೆ ಶಶಿಕಲಾರ ಮೇಲೆ ಜಾಮೀನು ರಹಿತ ಆರೋಪವನ್ನು ಹೊರಿಸಲಾಗಿದ್ದು, ಐಪಿಸಿ ಕಲಂ 153-ಎ(ಕೋಮು ದ್ವೇಷಕ್ಕೆ ಉತ್ತೇಜನ) ಅಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಥಾಮ್ಸನ್ ಜೋಸ್ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಗಿ ಹರಿದಾಡುತ್ತಿರುವ ಶಶಿಕಲಾರ ಇತ್ತೀಚಿನ ಕೆಲವು ಭಾಷಣಗಳು ರಾಜ್ಯದಲ್ಲಿ ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು ಎಂದು ಆರೋಪಿಸಿರುವ ಶುಕೂರ್, ಯು ಟ್ಯೂಬ್‌ನಿಂದ ಡೌನ್‌ಲೋಡ್ ಮಾಡಲಾದ ಭಾಷಣದ ಕೆಲವು ಫೂಟೇಜ್‌ಗಳು,ಜೊತೆಗೆ ವೆಬ್ ಲಿಂಕ್‌ಗಳನ್ನು ಒಳಗೊಂಡಿರುವ ಸಿಡಿಯೊಂದನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ.
ಮುಂದಿನ ಕ್ರಮ ಕೈಗೊಳ್ಳುವ ಮುನ್ನ ವಿವರವಾದ ತನಿಖೆಯನ್ನುನಡೆಸಲಾಗುವುದು ಎಂದು ಜೋಸ್ ತಿಳಿಸಿದರು.





