ಸೋನಿಯಾ ವಿರುದ್ಧ ಚುನಾವಣಾ ದೂರು ಸುಪ್ರೀಂಕೋರ್ಟ್‌ನಿಂದ ವಿಚಾರಣೆ ಮುಂದೂಡಿಕೆ
.jpg)
ಹೊಸದಿಲ್ಲಿ, ಅ.27: ಪೌರತ್ವ ವಿವಾದ ಹಾಗೂ ಮುಸ್ಲಿಂ ಮತಗಳಿಗಾಗಿ ಕೋಮುವಾದ ಬಳಸಿದ್ದರೆಂಬ ಆರೋಪದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿಯಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಯ್ಕೆಯನ್ನು ಪ್ರಶ್ನಿಸಿದ್ದ ಮನವಿಯೊಂದರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮುಂದೂಡಿದೆ.
ಇಂತಹದೇ ವಿಚಾರವೊಂದರ ಕುರಿತು 7 ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠವೊಂದು ಈಗಾಗಲೇ ವಿಚಾರಣೆ ನಡೆಸುತ್ತಿವೆ. ಆದುದರಿಂದ ಈ ವಿಚಾರದಲ್ಲಿ ಈಗ ತೀರ್ಮಾನ ಕೈಗೊಳ್ಳುವುದು ಸೂಕ್ತವಲ್ಲವೆಂದು ನ್ಯಾಯಮೂರ್ತಿ ಎ.ಆರ್. ದವೆ ನೇತೃತ್ವದ ಪೀಠವೊಂದು ಹೇಳಿದೆ.
ಅಲಹಾಬಾದ್ ಹೈಕೋರ್ಟ್‌ನ ಪೀಠವೊಂದು, 1951ರ ಜನಪ್ರಾತಿನಿಧ್ಯ ಕಾಯ್ದೆಯನ್ವಯ ದಾಖಲಿಸಿದ್ದ ಅರ್ಜಿಯೊಂದನ್ನು ಜು.11ರಂದು ವಜಾಗೊಳಿಸಿ, ಅರ್ಜಿದಾರನಿಗೆ ದಂಡವನ್ನು ಹೇರಿತ್ತು. ಈ ಚುನಾವಣಾ ಅರ್ಜಿಯು ವಾಸ್ತವಾಂಶಗಳ ಕೊರತೆಯಿಂದ ಕೂಡಿದೆ ಹಾಗೂ ಕ್ರಮಕ್ಕೆ ಸಂಪೂರ್ಣ ಕಾರಣಗಳನ್ನು ನೀಡಿಲ್ಲವೆಂದು ಅದು ಅಭಿಪ್ರಾಯಿಸಿತ್ತು.
Next Story





