ದೋಹಾ: ಪತ್ರಕರ್ತೆ ಅಯ್ಯೂಬ್ ಭಾಷಣಕ್ಕೆ ತಡೆ

ದೋಹಾ,ಅ.27: ಕತಾರ್‌ನಲ್ಲಿಯ ಭಾರತೀಯ ರಾಯಭಾರಿ ಕಚೇರಿಯು ಅ.22ರಂದು ಇಲ್ಲಿ ಆಯೋಜಿಸಿದ್ದ ಬಹಿರಂಗ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಲು ಭಾರತೀಯ ಪತ್ರಕರ್ತೆ ರಾಣಾ ಅಯ್ಯೂಬ್ ಅವರಿಗೆ ಅವಕಾಶವನ್ನು ನಿರಾಕರಿಸಲಾಗಿದ್ದು, ಇದು ಮೋದಿ ಸರಕಾರದ ಅನಧಿಕೃತ ನಿರ್ಬಂಧಗಳಿಗೆ ಒಂದು ನಿದರ್ಶನ ಎಂದು ಸಾಮಾಜಿಕ ತಾಣಗಳಲ್ಲಿ ಆರೋಪಿಸಲಾಗಿದೆ.
ಅಯ್ಯೂಬ್ ಅವರ ಕೃತಿ ‘ಗುಜರಾತ್ ಫೈಲ್ಸ್-ಅನಾಟಮಿ ಆಫ್ ಎ ಕವರ್ ಅಪ್’ ಇತ್ತೀಚಿಗಷ್ಟೇ ಬಿಡುಗಡೆಗೊಂಡಿದೆ. 2002ರ ಗುಜರಾತ್್ ಹತ್ಯಾಕಾಂಡಗಳಲ್ಲಿ ವಹಿಸಿದ್ದ ಪಾತ್ರಗಳಿಗಾಗಿ ಬಿಜೆಪಿಯ ಹಾಲಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ಈ ಕೃತಿಯು ದೋಷಾರೋಪಣೆ ಮಾಡಿದೆ.
Next Story





