ರೋಟರಿ ಜಿಲ್ಲೆ 3182ರ ವಲಯ 4ರಿಂದ ‘ಯುವಧ್ವನಿ’
ಉಡುಪಿ, ಅ.27:ರೋಟರಿ ಜಿಲ್ಲೆ 3182ರ ವಲಯ 4 ಶಾಂತಿ ಸ್ನೇಹ ಮತ್ತು ಸಾಮರಸ್ಯಕ್ಕಾಗಿ ಸಂಗೀತವೆಂಬ ವಿನೂತನ ಕಲ್ಪನೆಯಲ್ಲಿ ‘ಯುವಧ್ವನಿ’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದೆ. ಸಂಗೀತ ಅಭಿಯಾನದಲ್ಲಿ ಅ.29ರ ಶನಿವಾರ ಸಂಜೆ 4:00ಕ್ಕೆ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ.ಎ.ಪಿ. ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
ಇಂದ್ರಾಳಿ ಪತ್ರಕರ್ತರ ಕಾಲೋನಿಯ ‘ಶ್ರೀಸವಾಸ್ಯಂ’ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ ಮಧ್ವರಾಜ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಉಡುಪಿಯ ಖ್ಯಾತ ಸಂಗೀತ ಗುರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಗುರುಸಂದೇಶ ನೀಡಲಿದ್ದಾರೆ.
ಉದಯೋನ್ಮುಖ ಯುವ ಸಂಗೀತ ಪ್ರತಿಭೆಗಳಾದ ಸೂರಜ್ ಶೆಣೈ ಉಡುಪಿ, ಶ್ರವಣ್ ಎಸ್. ಬಾಸ್ರಿ, ವಿನಯ ಭಟ್ ಮಂಗಳೂರು, ಚೇತನ್ ನಾಯಕ್ ಉಡುಪಿ, ಸಂಪ್ರೀತ್ ಉಡುಪಿ, ಪ್ರಸಾದ್ ಶೆಣೈ ಉಡುಪಿ, ರಜತ್ ಮಯ್ಯ ಉಜಿರೆ, ಡಾ.ಅಭಿಷೇಕ್ ರಾವ್ ಕೊರಡ್ಕಲ್, ಸುಪ್ರಿಯಾ ಕಲ್ಕೂರ್ ಕುಂಜಿಬೆಟ್ಟು ಹಾಗೂ ಉಡುಪಿ ಶ್ರಾವ್ಯಾ ಎಸ್. ಬಾಸ್ರಿ ಸಂಗಿತ ವಾದ್ಯ ಗೋಷ್ಠಿ, ಸುಗಮ ಸಂಗೀತ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಸಿಕೊಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ರೋಟರಿ ಜಿಲ್ಲೆ 3182ರ ಅಸಿಸ್ಟೆಂಟ್ ಗವರ್ನರ್ ಸುಬ್ರಹ್ಮಣ್ಯ ಬಾಸ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







