ಎಫ್‌ಬಿಐಯಿಂದ ನಟಿ ಏಂಜೆಲಿನಾ ಜೋಲೀ ವಿಚಾರಣೆ

ವಾಶಿಂಗ್ಟನ್, ಅ. 27: ಖಾಸಗಿ ವಿಮಾನವೊಂದರಲ್ಲಿ ನಡೆದ ಘಟನೆ ಬಗ್ಗೆ ಹಾಲಿವುಡ್ ನಟಿ ಆ್ಯಂಜೆಲಿನಾ ಜೋಲಿ ಅವರನ್ನು ಎಫ್‌ಬಿಐ ಗಂಟೆಗಳ ಕಾಲ ಪ್ರಶ್ನಿಸಿತು ಎನ್ನಲಾಗಿದೆ. ಖಾಸಗಿ ವಿಮಾನದಲ್ಲಿ ನಟಿಯ ಪರಿತ್ಯಕ್ತ ಗಂಡ ಹಾಗೂ ಹಾಲಿವುಡ್ ನಟ ಬ್ರಾಡ್ ಪಿಟ್, ಅವರ 15 ವರ್ಷದ ಮಗ ಮ್ಯಾಡಾಕ್ಸ್ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆಗೆ ಸಂಬಂಧಿಸಿ ಈ ವಿಚಾರಣೆ ನಡೆದಿದೆ.
‘‘ವಿಮಾನ ಹಾರಾಟ ಆರಂಭಿಸಿದಂದಿನಿಂದ ನಡೆದ ಘಟನಾವಳಿಗಳ ವಿವರಗಳನ್ನು ಅಧಿಕಾರಿಗಳು ತಿಳಿಯಬಯಸಿದರು. ಅವರು ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ’’ ಎಂದು ಮೂಲವೊಂದು ತಿಳಿಸಿದೆ.
ಗಂಡನಿಂದ ವಿಚ್ಛೇದನೆ ಕೋರಿ ಜೋಲೀ ಸೆಪ್ಟಂಬರ್ 19ರಂದು ಅರ್ಜಿ ಸಲ್ಲಿಸಿದ್ದಾರೆ.
Next Story





