Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ಜೈಲುಗಳಲ್ಲಿ 2.8 ಲಕ್ಷ...

ಭಾರತದ ಜೈಲುಗಳಲ್ಲಿ 2.8 ಲಕ್ಷ ವಿಚಾರಣಾಧೀನ ಕೈದಿಗಳು

ಸ್ನೇಹಾ ಅಲೆಕ್ಸಾಂಡರ್ಸ್ನೇಹಾ ಅಲೆಕ್ಸಾಂಡರ್27 Oct 2016 10:59 PM IST
share
ಭಾರತದ ಜೈಲುಗಳಲ್ಲಿ 2.8 ಲಕ್ಷ ವಿಚಾರಣಾಧೀನ ಕೈದಿಗಳು

1953ರಲ್ಲಿ ಬಂಧಿಸಲ್ಪಟ್ಟ ರುಡಾಲ್ ಶಾ 1968ರಲ್ಲಿ ನಿರ್ದೋಷಿಯೆಂದು ಸಾಬೀತಾದ ಬಳಿಕವೂ ಮೂವತ್ತು ವರ್ಷಗಳ ಕಾಲ ಬಿಹಾರದ ಮುಜಫ್ಫರ್‌ಪುರ ಜೈಲಿನಲ್ಲಿ ಕಳೆದ.

ತನ್ನ 16ನೆ ಹರೆಯದಲ್ಲಿ ಬಂಧಿತನಾದ ಬೋಕಾ ಠಾಕೂರ್ ಬಿಹಾರದ ಮಧುಬನಿ ಜೈಲ್‌ನಲ್ಲಿ ವಿಚಾರಣೆಯೇ ಇಲ್ಲದೆ 36 ವರ್ಷ ಬಂಧಿತನಾಗಿದ್ದ. ಶಾ ಮತ್ತು ಠಾಕೂರ್ 2014ರ ಕಾರಾಗೃಹ ಅಂಕಿಅಂಶಗಳ ಪ್ರಕಾರ ಭಾರತದ ಸೆರೆಮನೆಗಳಲ್ಲಿ ಬಂಧಿತರಾಗಿರುವ 2,82,879 ವಿಚಾರಣಾಧೀನ ಕೈದಿಗಳಲ್ಲಿ ಕೇವಲ ಎರಡು ಉದಾಹರಣೆಗಳಷ್ಟೇ. ಇದು ಆಫ್ರಿಕನ್ ದೇಶವಾಗಿರುವ ಬಾರ್ಬಡೋಸ್‌ನ ಜನಸಂಖ್ಯೆಗೆ ಸಮ.

ದೊರೆತ ಅಂಕಿಅಂಶಗಳನ್ನು ಇಂಡಿಯಾ ಸ್ಪೆಂಡ್ ವಿಶ್ಲೇಷಿಸಿದಾಗ ಸಮಸ್ಯೆಯ ವಿಸ್ತಾರ ಅರಿವಿಗೆ ಬರುತ್ತದೆ: 2010 ಮತ್ತು 2014 ಮಧ್ಯೆ ಶೇ. 25 ವಿಚಾರಣಾಧೀನ ಕೈದಿಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದವರಾಗಿದ್ದರು. ಈ ಅವಧಿಯಲ್ಲಿ ಒಟ್ಟು ಕೈದಿಗಳ ಪೈಕಿ ವಿಚಾರಣಾಧೀನ ಕೈದಿಗಳ ಪ್ರಮಾಣ ಶೇ. 65ಕ್ಕೂ ಮೇಲಿತ್ತು. 2014ರಲ್ಲಿ ಹತ್ತರಲ್ಲಿ ಏಳು ಕೈದಿಗಳು ವಿಚಾರಣಾಧೀನರಾಗಿದ್ದರು ಮತ್ತು ಹತ್ತರಲ್ಲಿ ಇಬ್ಬರು ಶಿಕ್ಷೆಗೊಳಗಾಗದೆಯೇ ಒಂದು ವರ್ಷಕ್ಕೂ ಹೆಚ್ಚು ಕಾಲ ಸೆರೆಮನೆಯಲ್ಲಿದ್ದರು. ವಿಚಾರಣೆ ಅಥವಾ ವಿಚಾರಣೆ ನಡೆಯುವ ಸಮಯದಲ್ಲಿ ವಿಚರಾಣಾಧೀನ ಕೈದಿಗಳನ್ನು ಅವರ ಅಪರಾಧ ಸಾಬೀತಾಗುವವರೆಗೆ ಮುಗ್ಧರು ಎಂದು ಪರಿಗಣಿಸಲಾಗುತ್ತದೆ. ಆದರೆ ಬಹಳಷ್ಟು ಬಾರಿ ಅವರು ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾಗುತ್ತಾರೆ ಮತ್ತು ಕಾರಾಗೃಹದಲ್ಲಿನ ಹಿಂಸಾಚಾರ ಮತ್ತು ಕೆಳಮಟ್ಟದ ಜೀವನಸ್ಥಿತಿಗೆ ತೆರೆದುಕೊಳ್ಳಬೇಕಾಗುತ್ತದೆ. ಬಹಳಷ್ಟು ಮಂದಿ ತಮ್ಮ ಕುಟುಂಬದ ಜೊತೆಗಿನ ಸಂಬಂಧವನ್ನೇ ಮತ್ತು ಬಹುತೇಕ ಸಂದರ್ಭಗಳಲ್ಲಿ ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುತ್ತಾರೆ. ಎರಡು ಕಾರಣಗಳಿಂದಾಗಿ ವಿಚಾರಣಾಧೀನ ಕೈದಿಗಳು ನ್ಯಾಯಿಕ ಪ್ರತಿನಿಧಿಗಳ ಭೇಟಿಯಿಂದ ವಂಚಿತರಾಗುತ್ತಾರೆ: ಸಂಪನ್ಮೂಲದ ಕೊರತೆ ಮತ್ತು ಸೆರೆಮನೆಯ ಆವರಣದ ಒಳಗೆ ವಕೀಲರ ಜೊತೆ ಮಾತುಕತೆ ನಡೆಸಲು ಇರುವ ಅತ್ಯಲ್ಪಸ್ವಾತಂತ್ರ್ಯ. ಸಂವಿಧಾನದ 21ನೆ ವಿಧಿಯು ಕೈದಿಗಳ ಬದುಕುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿ ನ್ಯಾಯಬದ್ಧ ಮತ್ತು ವೇಗದ ವಿಚಾರಣೆ ಹಕ್ಕನ್ನು ಅವರಿಗೆ ನೀಡಿರುವುದಾಗಿ 1980ರಲ್ಲೇ ಸರ್ವೋಚ್ಚ ನ್ಯಾಯಾಲಯ ಸೂಚಿಸಿದ್ದರೂ ಈ ಸ್ಥಿತಿಯಿದೆ.

ಕೈದಿಗಳು ಎರಡು ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ- ಬಹುತೇಕರು ಬಡವರಾಗಿದ್ದು ಸವಲತ್ತು ವಂಚಿತ ಸಮುದಾಯಗಳಿಂದ ಬಂದಿರುತ್ತಾರೆ, ಅವರಿಗೆ ಶಿಕ್ಷಣ ಕೂಡಾ ಅಷ್ಟಾಗಿ ಇರುವುದಿಲ್ಲ ಮತ್ತು ಅವರ ಧ್ವನಿಯನ್ನು ಕೂಡಾ ಯಾರೂ ಕೇಳುವವರಿರುವುದಿಲ್ಲ. ‘‘ಇಂಡಿಯಾ ಸ್ಪೆಂಡ್‌ಗೆ ನೀಡಿದ ಇಮೇಲ್ ಸಂದರ್ಶನದಲ್ಲಿ ವಕೀಲರಾಗಿರುವ ಮತ್ತು ಆಮ್ನೆಸ್ಟಿ ಅಂತಾರಾಷ್ಟ್ರೀಯದಲ್ಲಿನ ವಿಚಾರಣಾಧೀನ ಕೈದಿಗಳ ಯೋಜನೆಯ ವ್ಯವಸ್ಥಾಪಕರಾಗಿರುವ ಅರಿಜಿತ್ ಸೇನ್ ಹೇಳುವಂತೆ ಬಹಳಷ್ಟು ಮಂದಿ ವಿಚಾರಣಾಧೀನ ಕೈದಿಗಳು ಬಡವರಾಗಿದ್ದು ಸಣ್ಣಪುಟ್ಟ ಅಪರಾಧಗಳಿಗೆ ಬಂಧಿತರಾಗಿದ್ದಾರೆ ಮತ್ತು ಅವರಿಗೆ ತಮ್ಮ ಹಕ್ಕು ಮತ್ತು ನ್ಯಾಯಿಕ ಬೆಂಬಲವನ್ನು ಪಡೆಯುವ ಬಗ್ಗೆ ಅರಿವಿಲ್ಲದಿರುವುದರಿಂದ ಜೈಲಿನಲ್ಲಿ ದೀರ್ಘ ಕಾಲ ಕಳೆಯುವಂತಾಗುತ್ತದೆ.
2005ರಲ್ಲಿ ಜಾರಿಗೆ ಬಂದ ಅಪರಾಧ ಪ್ರಕ್ರಿಯಾ ಸಂಹಿತೆಯ ವಿಧಿ 436ಎ ಯ ಹೊರತಾಗಿಯೂ ವಿಚಾರಣಾಧೀನ ಕೈದಿಗಳು ಕಂಬಿಯ ಹಿಂದೆ ವರ್ಷಾನುಗಟ್ಟಲೆ ಕಳೆಯಬೇಕಾಗುತ್ತದೆ. ಈ ವಿಧಿಯ ಪ್ರಕಾರ ಒಬ್ಬ ವಿಚಾರಣಾಧೀನ ಕೈದಿಯು ತನ್ನ ಅಪರಾಧಕ್ಕೆ ದೊರೆಯಬಹುದಾಗಿದ್ದ ಗರಿಷ್ಠ ಪ್ರಮಾಣದ ಶಿಕ್ಷೆಯ ಅರ್ಧ ಸಮಯವನ್ನು ಜೈಲಿನಲ್ಲಿ ಕಳೆದರೆ ಅಂಥಾ ಕೈದಿಯನ್ನು ಕಡ್ಡಾಯವಾಗಿ ಜಾಮೀನು ಇದ್ದು ಅಥವಾ ಇಲ್ಲದೆ ವೈಯಕ್ತಿಕ ಬಾಂಡ್ ಮೇಲೆ ಬಿಡುಗಡೆಗೊಳಿಸಬೇಕು.

ಈ ವಿಧಿಯು ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆಗೆ ಗುರಿಯಾಗಬಹುದಾದ ಕೈದಿಗಳಿಗೆ ಅನ್ವಯವಾಗುವುದಿಲ್ಲ. ಆದರೆ 2014ರ ಕಾರಾಗೃಹ ಅಂಕಿಅಂಶಗಳು ತೋರಿಸುವ ಪ್ರಕಾರ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಅಪರಾಧಿ ಕೃತ್ಯಗಳಿಗೆ ಬಂಧಿಸಲ್ಪಟ್ಟಿರುವ ಶೇ. 39 ಕೈದಿಗಳಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆ ನೀಡುವ ಸಾಧ್ಯತೆಯಿಲ್ಲ. 2014ರ ಕೊನೆಯಲ್ಲಿ 1,22,056 (ಶೇ. 43) ವಿಚಾರಣಾಧೀನ ಕೈದಿಗಳು ಆರು ತಿಂಗಳಿನಿಂದ ಐದು ವರ್ಷದವರೆಗೆ ಜೈಲಿನಲ್ಲಿ ಬಂದಿಯಾಗಿದ್ದಾರೆ. ಇವರಲ್ಲಿ ಹಲವರು ತಮಗೆ ಸಿಗಬಹುದಾದಂಥಾ ಶಿಕ್ಷೆಯ ಅವಧಿಗಿಂತಲೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ. ಲೆಕ್ಕಾಚಾರದಲ್ಲಿ ಜಮ್ಮು ಮತ್ತು ಕಾಶ್ಮೀರ ಎಲ್ಲರಿಗಿಂತ ಮುಂದಿದೆ. ಮೂರು ತಿಂಗಳ ಅವಧಿಯನ್ನು ಹೊರತುಪಡಿಸಿ ಉಳಿದೆಲ್ಲಾ ಅವಧಿಗಳಲ್ಲಿ ಬಂಧಿತರಾಗಿರುವ ವಿಚಾರಣಾಧೀನ ಕೈದಿಗಳ ಸಂಖ್ಯೆಯು ಐದು ವರ್ಷಗಳಲ್ಲಿ ಹೆಚ್ಚಿದೆ. ಮೂರು ತಿಂಗಳಿಂದ ಐದು ವರ್ಷಗಳ ಅವಧಿಯ ಬಂಧನದಲ್ಲಿ ಅತೀ ಹೆಚ್ಚು ಏರಿಕೆಯಾಗಿದೆ. 2014ರಲ್ಲಿ 36 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 16ರಲ್ಲಿ ಶೇ. 25 ವಿಚಾರಣಾಧೀನ ಕೈದಿಗಳು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಂಧನದಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಪ್ರಮಾಣ ಶೇ. 53 ಇದ್ದರೆ ಗೋವಾದಲ್ಲಿ ಶೇ. 50 ಮತ್ತು ಗುಜರಾತ್‌ನಲ್ಲಿ ಶೇ. 42 ಇದೆ. ಉತ್ತರ ಪ್ರದೇಶವು ಈ ಸಂಖ್ಯೆಯಲ್ಲಿ (18,214) ಮುಂದಿದೆ.

ಸುಧಾರಣೆಯ ಪ್ರಯತ್ನ

2013ರ ಜೂನ್‌ನಲ್ಲಿ ನಿವೃತ್ತ ನ್ಯಾಯಾಧೀಶರಾದ ಆರ್ಸಿ ಲಹೋಟಿ ಸರ್ವೋಚ್ಚ ನ್ಯಾಯಾಲಯಕ್ಕೆ ಬರೆದ ಪತ್ರದಲ್ಲಿ ನ್ಯಾಯಾಲಯ ಮತ್ತು ಸರಕಾರದ ಹಲವು ಆದೇಶಗಳ ನಂತರವೂ ದೇಶದ 1382 ಜೈಲುಗಳಲ್ಲಿ ಇರುವ ಅಮಾನವೀಯ ಪರಿಸ್ಥಿತಿಯ ಬಗ್ಗೆ ಉಲ್ಲೇಖಿಸಿದ್ದರು. ನಂತರ ಸಾರ್ವಜನಿಕ ಹಿತಾಸಕ್ತಿ ದಾವೆಯಾಗಿ ದಾಖಲಿಸಲ್ಪಟ್ಟ ಈ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮತ್ತು ರಾಜ್ಯಗಳ ನಿರಾಶದಾಯಕ ಪ್ರತಿಕ್ರಿಯೆಯ ಹೊರತಾಗಿಯೂ 2014ರ ಅಭೂತಪೂರ್ವ ಆದೇಶದಲ್ಲಿ ಸರ್ವೋಚ್ಚ ನ್ಯಾಯಾಲಯವು ಭಾರತೀಯ 2013ರ ಮಧ್ಯಾಂತರ ಆದೇಶದಲ್ಲಿ ತಿಳಿಸಿದಂತೆ ವಿಚಾರಣಾಧೀನ ಕೈದಿಗಳ ಪುನರವಲೋಕನ ಸಮಿತಿಯನ್ನು ಪ್ರತಿ ಜಿಲ್ಲೆಯಲ್ಲಿ ರಚಿಸಿ ಅಪರಾಧಿ ಪ್ರಕ್ರಿಯೆ ದಂಡ ಸಂಹಿತೆಯ 436ಎ ಸೆಕ್ಷನ್‌ನಡಿ ಅರ್ಹ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಸೂಚಿಸಬೇಕು. ‘‘ವಿಚಾರಣಾಧೀನ ಕೈದಿಗಳ ಪುನರವಲೋಕನ ಸಮಿತಿಯು ಜಿಲ್ಲಾ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒಳಗೊಂಡಿದ್ದು ಪ್ರಕರಣಗಳ ಶೀಘ್ರ ವಿಚಾರಣೆ ಮತ್ತು ವಿಮರ್ಶೆಯನ್ನು ನಡೆಸಲು ಒಟ್ಟಾರೆಯಾಗಿ ಜವಾಬ್ದಾರರಾಗಿರುತ್ತಾರೆ. 2015ರ ಜುಲೈ 1 ಮತ್ತು 2016 ಜನವರಿ 31ರ ಮಧ್ಯೆ ಸುಮಾರು 6000 ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇದು ಖಂಡಿತವಾಗಿಯೂ ಸರಿಯಾದ ದಿಕ್ಕಿನೆಡೆಗೆ ಇಟ್ಟ ಹೆಜ್ಜೆಯಾಗಿತ್ತು’’ ಎನ್ನುತ್ತಾರೆ ಸೇನ್.

ಆದರೆ ಬಿಡುಗಡೆಗೊಂಡವರ ಪ್ರಮಾಣ ಭಾರತೀಯ ಜೈಲುಗಳಲ್ಲಿರುವ ವಿಚಾರಣಾಧೀನ ಕೈದಿಗಳ ಪೈಕಿ ಕೇವಲ ಶೇ. 2 ಆಗಿದೆ. ತೀರ್ಮಾನವಾಗದ ಪ್ರಕರಣಗಳು 2014ರಲ್ಲಿ ಶೇ. 84 ಆಗಿದ್ದರೆ 2015ರಲ್ಲಿ ಶೇ. 86 ಆಗಿತ್ತು ಇದು ಬದಲಾವಣೆಯು ಎಷ್ಟು ನಿಧಾನವಾಗಿ ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ. 

ಸಣ್ಣಮಟ್ಟದ ಪರಿಣಾಮ

ಇಂಡಿಯಾ ಸ್ಪೆಂಡ್ 2015ರಲ್ಲಿ ವರದಿ ಮಾಡಿರುವಂತೆ ಹೆಚ್ಚು ಪ್ರಕರಣಗಳು ತೀರ್ಮಾನವಾಗದೆ ಉಳಿಯಲು ಕೆಳಹಂತದ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳೂ ಒಂದು ಪ್ರಮುಖ ಕಾರಣವಾಗಿದೆ. ಉಳಿದಿರುವ 25 ಮಿಲಿಯನ್ ಪ್ರಕರಣಗಳನ್ನು ತೀರ್ಮಾನ ಮಾಡಲು ಕನಿಷ್ಠ 12 ವರ್ಷಗಳು ಬೇಕಾಗುತ್ತದೆ ಎಂದು ಇಂಡಿಯಾ ಸ್ಪೆಂಡ್ ವರದಿ ಮಾಡುತ್ತದೆ. ಪೊಲೀಸರು ಮತ್ತು ಕೈದಿಗಳು ಅಪರಾಧ ದಂಡ ಸಂಹಿತೆಯ ಸೆಕ್ಷನ್ 436ಎಯ ಬಗ್ಗೆ ಕಡಿಮೆ ಅರಿವನ್ನು ಹೊಂದಿದ್ದಾರೆ. ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ ಅಪರಾಧ ದಂಡ ಸಂಹಿತೆಯಡಿ ಈ ಸೆಕ್ಷನ್ ಒಂದು ಕಡ್ಡಾಯ ಪ್ರಕ್ರಿಯೆಯಾಗಿದ್ದು ಇದನ್ನು ಐಪಿಸಿಯಡಿ ಅಪರಾಧ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ವಿಚಾರಣಾಧೀನ ಕೈದಿಗಳ ವಿಮರ್ಶೆ ಸಮಿತಿಗಳ ನಿಷ್ಕ್ರಿಯತೆ, ಕಾರಾಗೃಹ ದಾಖಲೆಗಳಲ್ಲಿನ ವ್ಯತ್ಯಾಸ, ಮಾಹಿತಿ ವ್ಯವಸ್ಥೆಯ ಕಳಪೆ ವ್ಯವಸ್ಥಾಪನೆ, ಪರಿಣಾಮಕಾರಿ ನ್ಯಾಯಿಕ ನೆರವಿನ ಕೊರತೆ ಮತ್ತು ಪೊಲೀಸ್ ಹಿಂಬಾಲಿಕೆ ಮತ್ತು ವೀಡಿಯೊ ಕಾನ್ಫರೆನ್ಸ್ ವ್ಯವಸ್ಥೆಯ ಕೊರತೆ ಮುಂತಾದ ಅಂಶಗಳು ಭಾರತೀಯ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಶನಲ್ ತಿಳಿಸುತ್ತದೆ. 

ಎರಡು ಕಾರಣಗಳಿಂದಾಗಿ ವಿಚಾರಣಾಧೀನ ಕೈದಿಗಳು ನ್ಯಾಯಿಕ ಪ್ರತಿನಿಧಿಗಳ ಭೇಟಿಯಿಂದ ವಂಚಿತರಾಗುತ್ತಾರೆ: ಸಂಪನ್ಮೂಲದ ಕೊರತೆ ಮತ್ತು ಸೆರೆಮನೆಯ ಆವರಣದ ಒಳಗೆ ವಕೀಲರ ಜೊತೆ ಮಾತುಕತೆ ನಡೆಸಲು ಇರುವ ಅತ್ಯಲ್ಪಸ್ವಾತಂತ್ರ್ಯ. ಸಂವಿಧಾನದ 21ನೆ ವಿಧಿಯು ಕೈದಿಗಳ ಬದುಕುವ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಭಾಗವಾಗಿ ನ್ಯಾಯಬದ್ಧ ಮತ್ತು ವೇಗದ ವಿಚಾರಣೆ ಹಕ್ಕನ್ನು ಅವರಿಗೆ ನೀಡಿರುವುದಾಗಿ 1980ರಲ್ಲೇ ಸರ್ವೋಚ್ಚ ನ್ಯಾಯಾಲಯ ಸೂಚಿಸಿದ್ದರೂ ಈ ಸ್ಥಿತಿಯಿದೆ.

ಕೈದಿಗಳು ಎರಡು ರೀತಿಯ ಸಮಸ್ಯೆಯನ್ನು ಎದುರಿಸುತ್ತಾರೆ- ಬಹುತೇಕರು ಬಡವರಾಗಿದ್ದು ಸವಲತ್ತು ವಂಚಿತ ಸಮುದಾಯಗಳಿಂದ ಬಂದಿರುತ್ತಾರೆ, ಅವರಿಗೆ ಶಿಕ್ಷಣ ಕೂಡಾ ಅಷ್ಟಾಗಿ ಇರುವುದಿಲ್ಲ ಮತ್ತು ಅವರ ಧ್ವನಿಯನ್ನು ಕೂಡಾ ಯಾರೂ ಕೇಳುವವರಿರುವುದಿಲ್ಲ.

share
ಸ್ನೇಹಾ ಅಲೆಕ್ಸಾಂಡರ್
ಸ್ನೇಹಾ ಅಲೆಕ್ಸಾಂಡರ್
Next Story
X