500/1,000 ರೂ.ನೋಟು ಬಳಕೆ ಆರ್‌ಬಿಐಯಿಂದ ಎಚ್ಚರಿಕೆ
ಮುಂಬೈ,ಅ.27: 500 ರೂ.ಮತ್ತು 1,000 ರೂ.ಮುಖಬೆಲೆಯ ನಕಲಿ ನೋಟುಗಳ ಹಾವಳಿಯಿಂದ ಕಳವಳಗೊಂಡಿರುವ ಆರ್‌ಬಿಐ ತಮ್ಮ ದಿನನಿತ್ಯದ ವ್ಯವಹಾರಗಳಲ್ಲಿ ಈ ನೋಟುಗಳನ್ನು ಸ್ವೀಕರಿಸುವ ಮುನ್ನ ಅವುಗಳನ್ನು ಪರೀಕ್ಷಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುವಂತೆ ಜನತೆಗೆ ಸೂಚಿಸಿದೆ.
ಈ ಮುಖಬೆಲೆಗಳ ನೋಟುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವಂತೆ ತಿಳಿಸಿರುವ ಬ್ಯಾಂಕು, ಹೆಚ್ಚಿನ ಮುಖಬೆಲೆಯ ಸಾಚಾ ನೋಟುಗಳು ಸುಲಭದಲ್ಲಿ ನಕಲು ಮಾಡಲಾಗದ ಭದ್ರತಾ ಲಕ್ಷಣಗಳನ್ನು ಹೊಂದಿವೆ ಮತ್ತು ಸೂಕ್ಷ್ಮ ಪರಿಶೀಲನೆಯ ಮೂಲಕ ನಕಲಿ ನೋಟುಗಳನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಹೇಳಿದೆ. ಕರೆನ್ಸಿ ನೋಟುಗಳಲ್ಲಿಯ ಭದ್ರತಾ ಅಂಶಗಳ ಬಗ್ಗೆ ವಿವರವಾದ ಮಾಹಿತಿಗಳು ಆರ್‌ಬಿಐನ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಹೆಚ್ಚಿನ ಸಂಖ್ಯೆಯಲ್ಲಿ ನೋಟುಗಳ ಬಳಕೆಗೆ ಹೆಚ್ಚುವರಿ ಗುರುತಿನ ಅಗತ್ಯವನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಆರ್‌ಬಿಐ ಪರಿಶೀಲಿಸುತ್ತಿದೆ.ನಕಲಿ ನೋಟುಗಳ ಹಾವಳಿಯನ್ನು ಹತ್ತಿಕ್ಕುವಲ್ಲಿ ಸಹಕರಿಸುವಂತೆ ಅದು ಜನರನ್ನು ಮತ್ತು ಅಧಿಕಾರಿಗಳನ್ನು ಕೋರಿಕೊಂಡಿದೆ.
Next Story





