ನಿವೃತ್ತ ನೌಕರರ ಗುರುತು ಚೀಟಿಯಲ್ಲಿನ್ನು ರಾಷ್ಟ್ರೀಯ ಲಾಂಛನ
ಹೊಸದಿಲ್ಲಿ,ಅ.27: ನಿವೃತ್ತ ಕೇಂದ್ರ ಸರಕಾರಿ ನೌಕರರಿಗೆ ನೀಡಲಾಗುತ್ತಿರುವ ಪಿಂಚಣಿದಾರರ ಗುರುತಿನ ಚೀಟಿಗಳಿನ್ನು ಮುಂದೆ ರಾಷ್ಟ್ರೀಯ ಲಾಂಛನವನ್ನು ಹೊಂದಿರಲಿವೆ. ಈ ಸಂಬಂಧ ಸಿಬ್ಬಂದಿ,ಸಾರ್ವಜನಿಕ ದೂರುಗಳು ಮತ್ತು ಪಿಂಚಣಿ ಸಚಿವಾಯದ ಪ್ರಸ್ತಾವನೆಗೆ ಗೃಹ ಸಚಿವಾಲಯವು ಹಸಿರು ನಿಶಾನೆಯನ್ನು ತೋರಿಸಿದೆ.
ನಿವೃತ್ತ ನೌಕರರಿಗೆ ನೀಡಲಾಗುವ ಗುರುತಿನ ಚೀಟಿಗಳು ರಾಷ್ಟ್ರೀಯ ಲಾಂಛನವನ್ನು ಹೊಂದಿರುವ ಅಗತ್ಯವಿಲ್ಲ ಎಂದು ಈ ಹಿಂದೆ ನಿರ್ಧರಿಸಲಾಗಿತ್ತು. ಆದರೆ ಇದು ಸ್ವಾಯತ್ತ ಸಂಸ್ಥೆಗಳ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ. ಇಂತಹ ಸ್ವಾಯತ್ತ ಸಂಸ್ಥೆಗಳು ಗುರುತಿನ ಚೀಟಿಗಳಲ್ಲಿ ತಮ್ಮ ಸ್ವಂತ ಲಾಂಛನಗಳನ್ನು ಬಳಸಬಹುದು ಎಂದು ಸಿಬ್ಬಂದಿ ಸಚಿವಾಲಯವು ಆದೇಶದಲ್ಲಿ ತಿಳಿಸಿದೆ.
ದೇಶದಲ್ಲಿಂದು ಸುಮಾರು 50 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳಿದ್ದಾರೆ.
Next Story





