ಹೋಂ ಸ್ಟೇ ನೋಂದಣಿ ಕಡ್ಡಾಯ
ಉಡುಪಿ. ಅ.27: ಕರ್ನಾಟಕ ಸರಕಾರದ ಪ್ರವಾಸೋದ್ಯಮ ನೀತಿ 2015-20ನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಹೊಸ ಪ್ರವಾಸೋದ್ಯಮ ನೀತಿಯಂತೆ ಹೋಮ್ ಸ್ಟೇ ನಡೆಸಲು ಹಾಲಿ ಕಾರ್ಯ ನಿರ್ವಹಿಸುತ್ತಿರುವ ಹೋಂ ಸ್ಟೇ ಮಾಲಕರು ಹಾಗೂ ನೂತನವಾಗಿ ಸ್ಥಾಪಿಸಲು ಉದ್ದೇಶಿಸಿರುವ ಹೋಂ ಸ್ಟೇ ಮಾಲಕರು ನ.15ರೊಳಗೆ ಆನ್‌ಲೈನ್ ಮೂಲಕ ನೋಂದಣಿ ಮಾಡುವುದು ಕಡ್ಡಾಯವಾಗಿದೆ ಎಂದು ಸರಕಾರದ ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, 2ನೆ ಮಹಡಿ ಎ ಬ್ಲಾಕ್ ಕೊಠಡಿ ಸಂ.303 ರಜತಾದ್ರಿ ಮಣಿಪಾಲ. ದೂ.ಸಂ.:0820-2574868ರನ್ನು ಸಂಪರ್ಕಿಸಲು ಪಕಟನೆ ತಿಳಿಸಿದೆ.
Next Story





