ನಾಳೆ ಬಾಲ ಮುನ್ನಡೆ ಕಾರ್ಯಕ್ರಮ
ಕಾಪು, ಅ.27: ಇಲ್ಲಿನ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ರೇಂಜ್ ವತಿಯಿಂದ ಎಸ್‌ಇಡಿಸಿ ಸ್ಫಟಿಕ ಸಂಭ್ರಮ ಪ್ರಯುಕ್ತ ರೇಂಜ್ ಕಾನ್ಫರೆನ್ಸ್ ಹಾಗೂ ಎಸ್‌ಬಿಎಸ್ ಬಾಲ ಮುನ್ನಡೆ ಕಾರ್ಯಕ್ರಮವು ಅ.29ರಂದು ಸಂಜೆ 4ಕ್ಕೆ ನೂರುಲ್ ಉಲಮಾ ವೇದಿಕೆ ಕಾಪು ಜಂಕ್ಷನ್‌ನಲ್ಲಿ ನಡೆಯಲಿದೆ.
ಸೈಯದ್ ಅಬ್ದುಲ್ ಬಾಸಿತ್ ಸಖಾಫಿ ದುಆ ನೆರವೇರಿಸಲಿದ್ದು, ಎಸ್‌ಜೆಎಂ ಕಾಪು ರೇಂಜ್ ಅಧ್ಯಕ್ಷ ಅಬ್ದುಲ್ ರಝಾಕ್ ಅಲ್ ಖಾಸಿಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಅಬ್ದುರ್ರಶೀದ್ ಸಖಾಫಿ ಉದ್ಘಾಟಿಸುವರು. ಹಾಫಿಲ್ ಸುಫ್ಯಾನ್ ಸಖಾಫಿ ಸಂದೇಶ ಭಾಷಣ ಮಾಡುವರು.
Next Story





