ಪಾಕಿಸ್ತಾನದ ಕೇಂದ್ರ ಗುತ್ತಿಗೆ ಪ್ರಕಟ: ಅಫ್ರಿದಿಗೆ ಸ್ಥಾನವಿಲ್ಲ

ಕರಾಚಿ, ಅ.27: ಆಲ್‌ರೌಂಡರ್ ಶಾಹಿದ್ ಅಫ್ರಿದಿಯನ್ನು 2016-17ನೆ ಸಾಲಿನ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಕೈಬಿಟ್ಟಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಅಫ್ರಿದಿಗೆ ಸ್ಪಷ್ಟ ಸಂದೇಶ ನೀಡಿದೆ.
ಮಾಜಿ ಟೆಸ್ಟ್, ಏಕದಿನ ಹಾಗೂ ಟ್ವೆಂಟಿ-20 ನಾಯಕ ಅಫ್ರಿದಿ ಕಳೆದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ‘ಎ’ ದರ್ಜೆಯಲ್ಲಿದ್ದರು. ಆದರೆ, ಈ ಬಾರಿ ಕೈಬಿಡುವ ಮೂಲಕ ಮನೆ ಹಾದಿ ತೋರಿಸಲಾಗಿದೆ.
ಚಾಂಪಿಯನ್ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್‌ರನ್ನು ಪಟ್ಟಿಯಿಂದ ಕೈಬಿಟ್ಟಿರುವ ಪಿಸಿಬಿ ಅಚ್ಚರಿ ಮೂಡಿಸಿದೆ. ಲೆಗ್-ಸ್ಪಿನ್ನರ್ ಯಾಸಿರ್ ಷಾಗೆ ‘ಎ’ ದರ್ಜೆಗೆ ಭಡ್ತಿ ನೀಡಲಾಗಿದೆ.
ಮಾಜಿ ನಾಯಕರಾದ ಮುಹಮ್ಮದ್ ಹಫೀಝ್ ಹಾಗೂ ಶುಐಬ್ ಮಲಿಕ್ ಅಗ್ರ ದರ್ಜೆಯನ್ನು ಉಳಿಸಿಕೊಂಡಿದ್ದಾರೆ. ಇದೇ ವೇಳೆ, ಅಹ್ಮದ್ ಶೆಹಝಾದ್ ಹಾಗೂ ಉಮರ್ ಅಕ್ಮಲ್‌ರನ್ನು ‘ಸಿ’ ದರ್ಜೆಗೆ ಹಿಂಭಡ್ತಿ ನೀಡಲಾಗಿದೆ.
‘ಎ’ ದರ್ಜೆಯ ಕ್ರಿಕೆಟಿಗರು ಪಂದ್ಯ ಶುಲ್ಕ, ಇತರ ಭತ್ಯೆ ಹಾಗೂ ಬೋನಸ್ ಹೊರತುಪಡಿಸಿ ಪ್ರತಿ ತಿಂಗಳು ಸುಮಾರು 5 ಲಕ್ಷ ರೂ. ಸಂಬಳ ಪಡೆಯಲಿದ್ದಾರೆ.
Next Story





