ಸೆಮಿಫೈನಲ್‌ನಲ್ಲಿ ಭಾರತಕ್ಕೆ ದ.ಕೊರಿಯಾ ಎದುರಾಳಿ
ಚಾಂಪಿಯನ್ಸ್ ಟ್ರೋಫಿ

ಕ್ವಾಂಟನ್, ಅ.27: ಅಗ್ರ ರ್ಯಾಂಕಿನ ಭಾರತ ತಂಡ ನಾಲ್ಕನೆ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ.
ಗುರುವಾರ ಇಲ್ಲಿ ನಡೆದ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಕೊರಿಯಾ 8 ಅಂಕ ಪಡೆದು ನಾಲ್ಕನೆ ಸ್ಥಾನ ಪಡೆದಿದೆ. ಒಟ್ಟು 13 ಅಂಕ ಗಳಿಸಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ.
ಮಲೇಷ್ಯಾ(10 ಅಂಕ) ಹಾಗೂ ಪಾಕಿಸ್ತಾನ (9 ಅಂಕ)ಕ್ರಮವಾಗಿ 2ನೆ ಹಾಗೂ 3ನೆ ಸ್ಥಾನದಲ್ಲಿವೆ. ಪಾಕ್ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಚೀನಾ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿದೆ. ಮಲೇಷ್ಯಾಕ್ಕೆ ಅಂಕಪಟ್ಟಿಯಲ್ಲಿ 2ನೆ ಸ್ಥಾನ ಪಡೆಯಲು ಪಂದ್ಯ ಡ್ರಾ ಸಾಧಿಸಬೇಕಾಗಿತ್ತು. ಒಂದು ವೇಳೆ ಕೊರಿಯಾ ಗೆಲುವು ಸಾಧಿಸಿದ್ದರೆ, ಭಾರತಕ್ಕೆ ಸೆಮಿ ಫೈನಲ್‌ನಲ್ಲಿ ಪಾಕಿಸ್ತಾನ ಎದುರಾಳಿಯಾಗುತ್ತಿತ್ತು.
ಭಾರತ ತಂಡ ಸೆಮಿಫೈನಲ್‌ನಲ್ಲಿ ಕೊರಿಯಾ ತಂಡವನ್ನು ಎದುರಿಸಿದರೆ, ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡ ಮಲೇಷ್ಯಾವನ್ನು ಎದುರಿಸಲಿದೆ.
Next Story





