ಇಂದಿನ ಕಾರ್ಯಕ್ರಮ.
ಉಡುಪಿ ಜಿಲ್ಲೆ
ಪ್ರತಿಭಟನೆ: ಸರಕಾರಿ ಮಹಿಳಾ ಆಸ್ಪತ್ರೆಯ ಉಳಿವಿಗಾಗಿ ನಾಗರಿಕರ ಒಕ್ಕೂಟದ ವತಿಯಿಂದ ಹಾಜಿ ಅಬ್ದುಲ್ಲಾ ಸಾಹೇಬ್ ಸರಕಾರಿ ಮಹಿಳಾ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣದ ವಿರುದ್ಧ ಪ್ರತಿಭಟನೆ. ಸಮಯ: ಸಂಜೆ 4ರಿಂದ. ಸ್ಥಳ:ಜೋಡುಕಟ್ಟೆಯಿಂದ ವೌನ ಮೆರವಣಿಗೆ, ಬಳಿಕ ಸರ್ವಿಸ್ ಬಸ್‌ನಿಲ್ದಾಣದ ಬಳಿ ಪ್ರತಿಭಟನಾ ಸಭೆ.
ಸಾಮಾನ್ಯ ಸಭೆ: ಉಡುಪಿ ನಗರಸಭೆಯ ಸಾಮಾಅ್ಯ ಸಭೆ. ಅಧ್ಯ
ಕ್ಷತೆ ಮೀನಾಕ್ಷಿ ಮಾಧವ ಬನ್ನಂಜೆ. ಸಮಯ: ಬೆಳಗ್ಗೆ 10:30ರಿಂದ. ಸ್ಥಳ: ನಗರಸಭೆಯ ಸತ್ಯಮೂರ್ತಿ ಸಭಾಂಗಣ, ಉಡುಪಿ.
ಕ್ರೀಡಾಕೂಟ: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ, ಎಂಐಟಿ ಮಣಿಪಾಲ ಹಾಗೂ ರೋಟರಿ ಕ್ಲಬ್ ಉಡುಪಿ-ಮಣಿಪಾಲಗಳ ಸಹಯೋಗದೊಂದಿಗೆ ಆಯೋಜಿಸಿರುವ ಉಡುಪಿ ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಕೂಟ ಹಾಗೂ ರಾಷ್ಟ್ರೀಯ ಅಂತರ್ ಜಿಲ್ಲಾ ಕ್ರೀಡಾಕೂಟಕ್ಕೆ ಉಡುಪಿ ತಂಡಗಳ ಆಯ್ಕೆ. ಸಮಯ: ಬೆಳಗ್ಗೆ 10:30ರಿಂದ ಸಂಜೆ 4:30ರವರೆಗೆ. ಸ್ಥಳ: ಎಂಐಟಿ ಮೈದಾನ ಮಣಿಪಾಲ.
ಪೇಜಾವರ ಶ್ರೀಗಳ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5ಕ್ಕೆ ಚಂದ್ರಶಾಲೆ ಪುರಾಣ ವಿದ್ವಾನ್ ಬ್ರಹ್ಮಣ್ಯತೀರ್ಥಾಚಾರ್ಯರಿಂದ ಪ್ರವಚನ, 5:45ಕ್ಕೆ ರಾಜಾಂಗಣ ದಲ್ಲಿ ವಿದ್ವಾನ್ ಶಂಕರನಾರಾಯಣ ಅಡಿಗ ಬೆಂಗಳೂರು ಇವರಿಂದ ಧಾರ್ಮಿಕ ಉಪನ್ಯಾಸ ಬಳಿಕ ಪೇಜಾವರ ಶ್ರೀಗಳಿಂದ ಅನುಗ್ರಹ ಸಂದೇಶ. ಸಂಜೆ 7ರಿಂದ ರಾಜಾಂಗಣದಲ್ಲಿ ಬೆಂಗಳೂರಿನ ಎಂ.ಮೈತ್ರಿ ರಾವ್ ಇವರಿಂದ ಭರತನಾಟ್ಯ.
ಸಮಾಲೋಚನಾ ಶಿಬಿರ: ಮಣಿಪಾಲ ವಿವಿಯ ವಿಶ್ವ ಮಧುಮೇಹ ಪ್ರತಿಷ್ಠಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆಎಂಸಿ ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಧುಮೇಹಿಗಳಿಗಾಗಿ ಉಚಿತ ಪಾದ, ನೇತ್ರ ತಪಾಸಣೆ ಹಾಗೂ ಪಥ್ಯಾಹಾರ, ಪಾದದ ಆರೈಕೆಯ ಆಪ್ತ ಸಮಾಲೋಚನಾ ಶಿಬಿರ. ಸಮಯ: ಬೆಳಗ್ಗೆ 10ರಿಂದ. ಸ್ಥಳ: ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ.





