ಕಝಕಿಸ್ತಾನದ ಮೂವರು ಮಹಿಳಾ ಲಿಫ್ಟರ್‌ಗಳ ಪದಕಕ್ಕೆ ಕುತ್ತು
ಉದ್ದೀಪನಾ ಮದ್ದು ಸೇವನೆ ಪ್ರಕರಣ

ಲೌಸಾನ್, ಅ.27: ಉದ್ದೀಪನಾ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಎರಡನೆ ಬಾರಿಯೂ ಸ್ಯಾಂಪಲ್ ಪರೀಕ್ಷೆಯಲ್ಲ್ಲಿ ವಿಫಲವಾಗಿರುವ ಕಝಕಿಸ್ತಾನದ ಮೂವರು ಮಹಿಳಾ ಅಥ್ಲೀಟ್‌ಗಳಿಂದ ಒಲಿಂಪಿಕ್ಸ್ ಚಿನ್ನದ ಪದಕವನ್ನು ಹಿಂಪಡೆಯಲಾಗಿದೆ.
ಕಝಕಿಸ್ತಾನದ ಮೂವರು ಮಹಿಳಾ ವೇಟ್ ಲಿಫ್ಟರ್‌ಗಳು 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದರು.
ಉದ್ದೀಪನ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಗುರುವಾರ ಹೆಸರಿಸಿರುವ 8 ಕಳಂಕಿತ ಅಥ್ಲೀಟ್‌ಗಳ ಪೈಕಿ ಕಝಕ್‌ನ ಮೂವರು ಅಥ್ಲೀಟ್‌ಗಳಿದ್ದಾರೆ.
ಕ್ರಮವಾಗಿ 53 ಕೆಜಿ, 63 ಕೆಜಿ ಹಾಗೂ 75 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಝುಲ್ಫಿಯಾ ಚಿನ್‌ಶಾನ್ಲೊ, ಮೈಯಾ ಮನೆಝಾ ಹಾಗೂ ಸ್ವೆತ್ಲಾನಾ ಪೊಡೊಬೆಡೊವಾರಿಂದ ಪದಕವನ್ನು ಕಸಿದುಕೊಳ್ಳಲಾಗಿದೆ. ಈ ಮೂವರು ಉದ್ದೀಪನಾ ದ್ರವ್ಯ (ಸ್ಟ್ಯಾನೊರೊಲೊಲ್) ಸೇವಿಸಿರುವುದು ಸಾಬೀತಾಗಿದೆ.
ಮೂವರು ವೇಟ್ ಲಿಫ್ಟರ್‌ಗಳಿಂದ ಹಿಂಪಡೆದುಕೊಂಡಿರುವ ಪದಕಗಳನ್ನು ಇತರ ಅಥ್ಲೀಟ್‌ಗಳಿಗೆ ನೀಡಲಾಗುವುದೋ? ಎಂಬ ಬಗ್ಗೆ ಐಒಸಿ ಏನೂ ಹೇಳಿಲ್ಲ.
ಬೆಲಾರಿಸ್‌ನ ವೇಟ್‌ಲಿಫ್ಟರ್‌ರಿಂದ ಕಂಚಿನ ಪದಕವನ್ನು ಹಿಂದಕ್ಕೆ ಪಡೆಯಲಾಗಿದೆ. ಮರಿನಾ ಶಕೆರ್ಮಂಕೊವ್ 63 ಕೆಜಿ ತೂಕ ವಿಭಾಗದಲ್ಲಿ ಮೂರನೆ ಸ್ಥಾನ ಪಡೆದಿದ್ದರು. ಬೆಲಾರಿಸ್‌ನ ಇತರ ಇಬ್ಬರು ಲಿಫ್ಟರ್‌ಗಳು, ರಶ್ಯದ ಹ್ಯಾಮರ್ ಎಸೆತಗಾರ ಹಾಗೂ ರಶ್ಯದ ಪೋಲ್ ವಾಲ್ಟರ್ ಕೂಡ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಆದರೆ, ಇವರ್ಯಾರೂ ಒಲಿಂಪಿಕ್ಸ್ ಪದಕವನ್ನು ಜಯಿಸಿಲ್ಲ.
ಕಝಕ್ ಹಾಗೂ ಬೆಲಾರಿಸ್‌ನ ವೇಟ್‌ಲಿಫ್ಟರ್‌ಗಳು ಕನಿಷ್ಠ ಒಂದು ವರ್ಷ ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ಅಂತಾರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ನಿಯಮದ ಪ್ರಕಾರ ಒಂದು ದೇಶದ ಮೂವರು ಅಥ್ಲೀಟ್‌ಗಳು ಒಲಿಂಪಿಕ್ಸ್‌ನ ಮರು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಸ್ವಯಂ ನಿಷೇಧಕ್ಕೆ ಗುರಿಯಾಗಬೇಕಾಗುತ್ತದೆ.
ರಶ್ಯದ ಕುಸ್ತಿಪಟು ಮೂರು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಕಾರಣ ಅವರ ವಿರುದ್ಧದ ಪ್ರಕರಣವನ್ನು ಕೈ ಬಿಡಲಾಗಿದೆ. ಅವರು ಗೆದ್ದಂತಹ ಬೆಳ್ಳಿ ಪದಕ ಭಾರತದ ಕುಸ್ತಿಪಟು ಯೋಗೇಶ್ವರ ದತ್ತಗೆ ನೀಡಲಾಗುವುದಿಲ್ಲ ಎಂದು ಐಒಸಿ ಇದೇ ವೇಳೆ ಸ್ಪಷ್ಟಪಡಿಸಿದೆ.
ಲಂಡನ್ ಒಲಿಂಪಿಕ್ಸ್ ಹಾಗೂ 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸಂಗ್ರಹಿಸಿದ್ದ ಅಥ್ಲೀಟ್‌ಗಳ ಮಾದರಿಯನ್ನು ಐಒಸಿ ಮರು ಪರೀಕ್ಷೆ ನಡೆಸಿದ್ದು, ಇದರಲ್ಲಿ ಸುಮಾರು 98 ಮಾದರಿ ಋಣಾತ್ಮಕವಾಗಿದ್ದು, ಮಾದರಿ ಪರೀಕ್ಷೆಯಲ್ಲಿ ವಿಫಲವಾದವರ ಪೈಕಿ ವೇಟ್‌ಲಿಫ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಡೋಪಿಂಗ್‌ನ ಮರು ಪರೀಕ್ಷೆಯ ವೇಳೆ ಒತ್ತಡಕ್ಕೆ ಸಿಲುಕುವ ವೇಟ್ ಲಿಫ್ಟರ್‌ಗಳು ಹೆಚ್ಚಾಗಿ ವಿಫಲವಾಗುತ್ತಾರೆ. 2012ರ ಲಂಡನ್ ಒಲಿಂಪಿಕ್ಸ್‌ವೊಂದರಲ್ಲೇ ಅಗ್ರ-10 ವೇಟ್‌ಲಿಫ್ಟರ್‌ಗಳು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ.







