‘ಸಾರ್ವತ್ರಿಕ ಆರೋಗ್ಯಕಾರ್ಡ್’ ವಿತರಣೆ: ಸಚಿವ ರಮೇಶ್‌ಕುಮಾರ್

ಬೆಂಗಳೂರು, ಅ. 27: ರಾಜ್ಯದ ಬಿಪಿಎಲ್-ಎಪಿಎಲ್ ಕುಟುಂಬಗಳೆಲ್ಲವನ್ನು ಸೇರಿಸಿ ಆರೋಗ್ಯ ಇಲಾಖೆ ಎಲ್ಲ ಯೋಜನೆಗಳ ಸಮೀಕರಿಸಿ ‘ಸಾರ್ವತ್ರಿಕ ಆರೋಗ್ಯ ಕಾರ್ಡ್’ ವಿತರಿ ಸಲು ಉದ್ದೇಶಿಸಿದ್ದು, ರೋಗಿ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸಲಾಗುವುದು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆಗಳ ಮೂಲಕ 2017ರ ಜೂನ್ ಒಳಗೆ ಗಣಕೀಕರಣ ವ್ಯವಸ್ಥೆ ಜಾರಿಗೊಳಿಸಲಾಗುವುದು. ಆರೋಗ್ಯ ಇಲಾಖೆಗೆ ಸಂಬಂಸಿದ ದೂರಗಳನ್ನು ಸ್ವೀಕರಿಸಲು 9535811104 ಸಂಖ್ಯೆ ವಾಟ್ಸ್‌ಆ್ಯಪ್ ಸೇವೆ ಆರಂಭಿಸಿದ್ದು, ದೂರುಗಳಿಗೆ ಒಂದು ತಿಂಗಳೊಳಗೆ ಪರಿಹಾರ ಒದಗಿಸಲಾಗುವುದು ಎಂದರು.
ಹೊಸ ಆ್ಯಂಬುಲೆನ್ಸ್: ಅವೈಜ್ಞಾನಿಕವಾಗಿರುವ ಆ್ಯಂಬುಲೆನ್ಸ್ ಸೇವೆಯನ್ನು ಕೂಡಲೇ ಸ್ಥಗಿತಗೊಳಿಸಿ ಪ್ರತಿಯೊಂದು ಹಳ್ಳಿಗೆ ತುರ್ತು ಆರೋಗ್ಯ ಸೇವೆ ಒದ ಗಿಸಲು ಪ್ರತಿ 15 ಕಿ.ಮೀ ವ್ಯಾಪ್ತಿಯಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗು ವುದು. ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾ.ಪಂ. ಕೇಂದ್ರಗಳಲ್ಲಿ ಆ್ಯಂಬುಲೆನ್ಸ್ ಇರಿಸಲಾಗುವುದು.ಯೋಜನೆಯಡಿ-711, ಆರೋಗ್ಯ ಇಲಾಖೆ-827 ಹಾಗೂ ಹೊಸದಾಗಿ 367 ಆ್ಯಂಬುಲೆನ್ಸ್ ಖರೀದಿಸಲಾಗುತ್ತಿದ್ದು, ಒಟ್ಟು 1,905 ಆ್ಯಂಬುಲೆನ್ಸ್‌ಗಳು ತುರ್ತು ಆರೋಗ್ಯ ಸೇವೆಗೆ ದೊರೆಯಲಿವೆ ಎಂದ ಅವರು, ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಸರಕಾರಿ ಆಸ್ಪತ್ರೆಗಳಿಗೆ ಮಾತ್ರವೇ ರೋಗಿಗಳನ್ನು ಕರೆದೊ ಯ್ಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.ೀಟಿ ನಿಷೇಧ: ರಾಜ್ಯದ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಯೂ ಬ್ರಾಂಡೆಡ್ ಔಷಧಗಳನ್ನು ಸರಕಾರಿ ವೈದ್ಯರು ರೋಗಿಗಳಿಗೆ ಪ್ರಿಸ್ಕಿಪ್‌ಷನ್ ಸಲಹಾ ಚೀಟಿ ಮೂಲಕ ಬರೆದು ಕೊಡುವುದನ್ನು ಸಂಪೂರ್ಣ ನಿಷೇಸಲಾಗಿದೆ. ಎಲ್ಲ ಒಳ ಮತ್ತು ಹೊರ ರೋಗಿಗಳಿಗೆ ಜನರಿಕ್ ಔಷ ಗಳನ್ನು ಆಸ್ಪತ್ರೆಯಿಂದ ಉಚಿತವಾಗಿ ನೀಡ ಲಾಗುವುದು ಎಂದು ರಮೇಶ್ ಕುಮಾರ್ ತಿಳಿಸಿದರು.ಜನೌಷ ಮಳಿಗೆ: ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಜನರಿಕ್ ಔಷಗಳನ್ನು ದೊರಕಿಸಿಕೊಡಲು ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಪ್ರಾರಂಭಿಕವಾಗಿ 200 ಜನೌಷ ಮಳಿಗೆಗಳನ್ನು ಸ್ಥಾಪಿಸಲು ಕೇಂದ್ರದೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.ಯಾಲಿಸಿಸ್ ಕೇಂದ್ರ: ರಾಜ್ಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ಖಾಸಗಿ ಸಹಭಾಗಿತ್ವದಲ್ಲಿ ನಾಲ್ಕು ಹಾಸಿಗೆಗಳ ಡಯಾಲಿಸಿಸ್ ಘಟಕಗಳನ್ನು ಸ್ಥಾಪಿಸಲಾಗುವುದು ಎಂದ ಅವರು, ಎಲ್ಲ ತಾಲೂಕು ಕೇಂದ್ರಗಳಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಜನವರಿಯಿಂದ ತೀವ್ರ ನಿಗಾ ಘಟಕ ಆರಂಭಿಸಲಾಗುವುದು ಎಂದರು.
ಮೂರು ಹಾಸಿಗೆಗಳುಳ್ಳ ಒಂದು ಘಟಕಕ್ಕೆ 27ಲಕ್ಷ ರೂ.ವೆಚ್ಚ ತಗಲಲಿದ್ದು, ಈ ಪೈಕಿ 15ಲಕ್ಷ ರೂ.ಶಾಸಕರ ನಿಯಿಂದ, 5ಲಕ್ಷ ರೂ.ಸಂಸದರ ನಿಯಿಂದ ಉಳಿದ ಹಣವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಭರಿಸಲಾಗುವುದು ಎಂದು ಅವರು ಹೇಳಿದರು. ುನ್‌ಗುನ್ಯ ಹಾಗೂ ಡೆಂಗ್ ಪ್ರಕರಣಗಳು ಹೆಚ್ಚುತ್ತಿದ್ದು, ರೋಗಿಗಳಿಗೆ ಅಗತ್ಯ ರಕ್ತಕಣಗಳನ್ನು ಪೂರೈಸುವ ಸಂಬಂಧ ಎಲ್ಲ್ಲ ಜಿಲ್ಲಾಸ್ಪತ್ರೆಗಳಲ್ಲಿ ರಕ್ತನಿ ಕೇಂದ್ರಗಳನ್ನು ಆರಂಭಿಸಲಾಗುವುದು. ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಅಗತ್ಯ ಪರಿಕರಗಳನ್ನು ತ್ವರಿತವಾಗಿ ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರ, ಶವಾಗಾರ ಸೌಲಭ್ಯ ಕಲ್ಪಿಸಲಾಗುವುದು. ಹುಬ್ಬಳ್ಳಿಯಲ್ಲಿ ಇಲಾಖೆ ಸಹಾಯವಾಣಿ ಕೇಂದ್ರದ ಮೇಲಿನ ಒತ್ತಡ ಕಡಿಮೆ ಮಾಡಲು ಇಂದಿರಾನಗರದಲ್ಲಿ ಮತ್ತೊಂದು ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಇನ್ನೂ ಮುಂದೆ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಆನ್‌ಲೈನ್ ಮೂಲಕ ಔಷಗಳನ್ನು ಸರಬರಾಜು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದ ಅವರು, ಹಾಪ್‌ಕಾಮ್ಸ್ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಅಲ್ಲದೆ, ರೋಗಿಗಳ ಶಸ ಚಿಕಿತ್ಸೆಗೆ ಅನುಕೂಲವಾಗುವಂತೆ ಕ್ಷೌರಿಕ ಕೇಂದ್ರ ಪ್ರಾರಂಭಿಸಲಾಗುವುದು, ಈ ಕ್ಷೌರಿಕ ಕೇಂದ್ರಗಳ ಸೌಲಭ್ಯ ರೋಗಿಗಳ ಅನುಕೂಲಕ್ಕಾಗಿ ಮಾತ್ರ ಎಂದು ಸ್ವಷ್ಟಪಡಿಸಿದರು.
ಮೊಹಲ್ಲಾ ಆಸ್ಪತ್ರೆ
ಹೊಸದಿಲ್ಲಿ ಸರಕಾರದ ‘ಮೊಹಲ್ಲಾ ಆಸ್ಪತ್ರೆ’ ಮಾದರಿಯಲ್ಲಿ ರಾಜ್ಯದಲ್ಲಿಯೂ ವಿಸ್ತರಣಾ ಆರೋಗ್ಯ ಕೇಂದ್ರಗಳನ್ನು ತೆರೆಯಲಾ ಗುವುದು. ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳು, ಕಾರ್ಮಿಕ ಕಾಲನಿ ಮತ್ತು ಕೊಳಚೆ ಪ್ರದೇಶಗಳಲ್ಲಿ ವಿಸ್ತರಣಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭ ಮಾಡಲಾಗುವುದು ಎಂದು ರಮೇಶ್ ಕುಮಾರ್‌ತಿಳಿಸಿದರು.
‘ಸರಕಾರಿ ಆಸ್ಪತ್ರೆಗಳಲ್ಲಿ4 ರೂ.ಗೆ ಇಡ್ಲಿ, 8 ರೂ.ಗೆ ಅನ್ನ-ಸಾಂಬಾರ್’
ಬೆಂಗಳೂರು, ಅ. 27: ಎಲ್ಲ ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳು ಮತ್ತವರ ಸಂಬಂಕರು ಮತ್ತು ಆಸ್ಪತ್ರೆ ಸಿಬ್ಬಂದಿ ಅನುಕೂಲಕ್ಕಾಗಿ ಅಗ್ಗದ ದರ ಉಪಾಹಾರ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರ ಇಲಾಖೆ ಮತ್ತು ಎಂಎಸ್‌ಐಎಲ್ ಸಹ ಯೋಗದಲ್ಲಿ ಉಪಾಹಾರ ಕೇಂದ್ರಗಳನ್ನು ತೆರೆಯಲಿದ್ದು, ಇವುಗಳ ನಿರ್ವಹಣೆಯನ್ನು ಮಹಿಳಾ ಸ್ವ ಸಹಾಯ ಗುಂಪುಗಳು, ಸ್ವಯಂ ಸೇವಾ ಸಂಸ್ಥೆಗಳು, ಮಹಿಳಾ ಉದ್ಯಮಿಗಳಿಗೆ ವಹಿಸಲಾಗುವುದು ಎಂದರು.ರೂ.ಗೆ ಇಡ್ಲಿ: ಆಸ್ಪತ್ರೆಗಳಲ್ಲಿನ ಉಪಾಹಾರ ಕೇಂದ್ರ ಗಳಲ್ಲಿ 4 ರೂ.ಗೆ ಒಂದು ಇಡ್ಲಿ, 8 ರೂ.ಗೆ ಒಂದು ಪ್ಲೆಟ್ ಅನ್ನ-ಸಾಂಬಾರ್, 8 ರೂ.ಗೆ 2 ಚಪಾತಿ ನೀಡಲಾಗು ವುದು ಎಂದ ಅವರು, ಆಹಾರ ಇಲಾಖೆ ಅಕ್ಕಿ-ಬೇಳೆ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ನೀಡಲಿದೆ. ಎಂಎಸ್‌ಐಎಲ್ ಶುದ್ಧ ಕುಡಿಯುವ ನೀರು ಸೇರಿ ಇನ್ನಿತರ ಪರಿಕರಗಳನ್ನು ಒದಗಿಸಲಿದೆ.ರೋಗ್ಯ ಇಲಾಖೆ ಕಟ್ಟಡ, ವಿದ್ಯುತ್ ಹಾಗೂ ನೀರಿನ ಸೌಲಭ್ಯ ಕಲ್ಪಿಸಲಿದೆ. ಎಲ್ಲ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ ಗಳಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ರಾಷ್ಟ್ರೀಯಆರೋಗ್ಯ ಅಭಿಯಾನ ಯೋಜನೆಯಡಿ ಶುದ್ಧ ಕುಡಿ ಯುವ ನೀರಿನ ಘಟಕ ಸ್ಥಾಪಿಸಲಾಗುವುದು ಎಂದರು.







