ಇಸ್ಲಾಮಾಬಾದ್‌ನಲ್ಲಿ 2 ತಿಂಗಳು ರ‍್ಯಾಲಿ ನಿಷೇಧ!

ಇಸ್ಲಾಮಾಬಾದ್,ಅ. ; 28: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ರಾಜಕೀಯ ರ‍್ಯಾಲಿಗಳು, ಸಭೆಗಳು ಮತ್ತು ಪ್ರತಿಭಟನೆಗಳನ್ನು ಎರಡು ತಿಂಗಳ ಕಾಲ ನಿಷೇಧ ಹೇರಲಾಗಿದೆ ಎಂದು ವರದಿಯಾಗಿದೆ. ಇವುಗಳನ್ನು ನಿಷೇಧಿಸಿ ಪಾಕಿಸ್ತಾನದ ಗೃಹಸಚಿವಾಲಯ ಹೇಳಿಕೆಹೊರಡಿಸಿದೆ.
ಇಮ್ರಾನ್ ಖಾನ್ ಪಾರ್ಟಿ ತೆಹ್ರೀಕೆ ಇನ್ಸಾಫ್ ಪ್ರಧಾನಿ ಶರೀಫ್ ವಿರುದ್ಧ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಎರಡು ತಿಂಗಳ ಕಾಲ ರಾಜಕೀಯ ಕಾರ್ಯಕ್ರಮಗಳಿಗೆ ನಿಷೇಧವನ್ನುಹೇರಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ. ವಿದೇಶಿ ವೆಬ್ಸೈಟ್ ಮೂಲಕ ಸೋರಿಕೆಯಾದ ಪನಾಮ ಪೇಪರ್‌ನಲ್ಲಿ ನವಾಝ್ ಶರೀಫ್‌ರ ಮಕ್ಕಳು ಮತ್ತು ಕುಟುಂಬದ ಖಾತೆಯ ವಿವರಗಳು ಬಹಿರಂಗವಾಗಿತ್ತು. ಇದರವಿರುದ್ಧ ಇಮ್ರಾನ್ ಬಲವಾದ ಪ್ರತಿಭಟನೆಯೊಂದಿಗೆ ರಂಗಪ್ರವೇಶಿಸಿದ್ದಾರೆ. ನವೆಂಬರ್ ಎರಡರಂದು ಇಮ್ರಾನ್‌ಖಾನ್‌ರ ಪಾರ್ಟಿ ತೆಹ್ರೀಕೆ ಇನ್ಸಾಫ್ ಶರೀಫ್ ವಿರುದ್ಧ ರ‍್ಯಾಲಿ ಏರ್ಪಡಿಸಲಿದ್ದು, ಇದನ್ನು ತಡೆಯುವುದಕ್ಕಾಗಿ ಸರಕಾರ ರಾಜಕೀಯ ಕಾರ್ಯಕ್ರಮಗಳನ್ನು ನಿಷೇಧಿಸುವುದಕ್ಕೆ ಮುಂದಾಗಿದೆ.
ಪನಾಮ ಪೇಪರ್‌ಗೆ ಸಂಬಂಧಪಟ್ಟ ವಿಷಯದಲ್ಲಿ ಎತ್ತಿರುವ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ಶರೀಫ್‌ರ ರಾಯಲ್‌ಪಿಂಡಿ ವಸತಿಗೆ ರ‍್ಯಾಲಿ ನಡೆಸಲಾಗುವುದು ಎಂದು ಇಮ್ರಾನ್ ಖಾನ್ ಘೋಷಿಸಿದ್ದರು.
ಆದರೆ ಪನಾಮ ವಿವಾದವನ್ನು ಉದ್ಧರಿಸಿ ತನ್ನ ವಿರುದ್ಧ ಎತ್ತಲಾದ ಆರೋಪಗಳನ್ನು ಪ್ರಧಾನಿ ನವಾಝ್ ಶರೀಫ್ ಮಾಧ್ಯಮಗಳಲ್ಲಿ ಮತ್ತು ಪಾರ್ಲಿಮೆಂಟ್‌ನಲ್ಲಿ ನಿರಾಕರಿಸಿದ್ದರು. ಈವಿಷಯದಲ್ಲಿ ನವೆಂಬರ್ ಒಂದಕ್ಕೆ ಪಾಕಿಸ್ತಾನ ಸುಪ್ರೀಂಕೋರ್ಟು ತೀರ್ಪು ನೀಡಲಿದೆ ಎಂದು ವರದಿ ತಿಳಿಸಿದೆ.





