ಅಮೆರಿಕ: ಹಿಜಾಬ್ ಧರಿಸಿದ್ದಕ್ಕೆ ಉದ್ಯೋಗ ನಿರಾಕರಣೆ

ವಾಷಿಂಗ್ಟನ್, ಅಕ್ಟೋಬರ್ 28: ಹಿಜಾಬ್ ಧರಿಸಿದ್ದಕ್ಕಾಗಿ ತನಗೆ ಕೆಲಸ ನೀಡಲು ನಿರಾಕರಿಸಲಾಗಿದೆ ಎಂದು ಝಹರಾ ಇಮಾಂ ಅಲಿ ಎಂಬ ಮಹಿಳೆ ಹೇಳಿದ್ದಾರೆಂದು ವರದಿಯಾಗಿದೆ. ಅಮೆರಿಕದಪ್ರಸಿದ್ಧ ಕಂಪೆನಿ ಸೆಕ್ಯುರಿಟ್ಟಾಸ್ ಸೆಕ್ಯುರಿಟಿ ಸರ್ವೀಸ್ ಕಂಪೆನಿ ಧಾರ್ಮಿಕ ವಿಶ್ವಾಸದ ಹೆಸರಿನಲ್ಲಿ ಕೆಲಸ ನೀಡಲು ನಿರಾಕರಿಸಿದೆ. ಈ ಕುರಿತು ಅಮೆರಿಕದ ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ ಕಾನೂನು ಸಲಹೆ ಸಮಿತಿ ಕಂಪೆನಿ ದೂರು ನೀಡಲು ನಿರ್ಧರಿಸಿದೆ. 2015 ಸೆಪ್ಟಂಬರ್‌ನಲ್ಲಿ ಸೆಕ್ಯುರಿಟ್ಟಾಸ್ ಕಂಪೆನಿಯಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರು.
ಟೆಲಿಫೋನ್ ಸಂದರ್ಶನದಲ್ಲಿ ಹಿಜಾಬ್ ಧರಿಸುತ್ತೀರಾದರೆ ಕೆಲಸ ಕೋಡಲು ಸಾಧ್ಯವಿಲ್ಲ ಎಂದು ಕಂಪೆನಿ ಝಹರಾಗೆ ತಿಳಿಸಿತ್ತು. ಅಮೆರಿಕದಲ್ಲಿ ಇಸ್ಲಾಮ್ ವಿರುದ್ಧ ದ್ವೇಷ ವ್ಯಾಪಕಗೊಂಡ ಬಳಿಕ ಮುಸ್ಲಿಮರು ಎಲ್ಲ ಕ್ಷೇತ್ರದಲ್ಲಿಯೂ ತಾರತಮ್ಯವನ್ನು ಅನುಭವಿಸುತ್ತಿದ್ದಾರೆ ಎಂದು ಕೌನ್ಸಿಲ್ ಆನ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ ಮಿಸೋರಿ ಚಾಪ್ಟರ್ ನಿರ್ದೇಶಕ ಫೈಝಲ್ ಸಯೀದ್ ತಿಳಿಸಿದ್ದಾರೆ. ಈ ಕೇಸು ಇತರೆಲ್ಲ ಸಂಸ್ಥೆಗಳಿಗೆ ಒಂದು ಪಾಠವಾಗಲಿ. ಧಾರ್ಮಿಕ ತಾರತಮ್ಯ ದೇಶದಲ್ಲಿ ನಡೆಯಬಾರದೆಂದು ಫೆಝಲ್ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.







