Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಭಾರತೀಯ ಕಾಲ್ ಸೆಂಟರ್‌ಗಳು ಕದ್ದ...

ಭಾರತೀಯ ಕಾಲ್ ಸೆಂಟರ್‌ಗಳು ಕದ್ದ ಅಮೆರಿಕನ್ನರ ಹಣ 2004 ಕೋಟಿ ರೂ.: ಅಮೆರಿಕ ಗೃಹ ಕಾರ್ಯದರ್ಶಿ

ವಾರ್ತಾಭಾರತಿವಾರ್ತಾಭಾರತಿ28 Oct 2016 8:48 PM IST
share
ಭಾರತೀಯ ಕಾಲ್ ಸೆಂಟರ್‌ಗಳು ಕದ್ದ ಅಮೆರಿಕನ್ನರ ಹಣ 2004 ಕೋಟಿ ರೂ.: ಅಮೆರಿಕ ಗೃಹ ಕಾರ್ಯದರ್ಶಿ

ವಾಶಿಂಗ್ಟನ್, ಅ. 28: ಸಾವಿರಾರು ಅಮೆರಿಕನ್ನರನ್ನು ವಂಚಿಸಿವೆ ಎಂದು ಆರೋಪಿಸಲಾದ ಐದು ಭಾರತೀಯ ಕಾಲ್ ಸೆಂಟರ್‌ಗಳು ಸಂತ್ರಸ್ತರಿಂದ 300 ಮಿಲಿಯ ಡಾಲರ್ (2004 ಕೋಟಿ ರೂಪಾಯಿ)ಗೂ ಅಧಿಕ ಹಣವನ್ನು ಕದ್ದಿವೆ ಎಂದು ಅಮೆರಿಕದ ಗೃಹ ಕಾರ್ಯದರ್ಶಿ ಜೆಹ್ ಜಾನ್ಸನ್ ಹೇಳಿದ್ದಾರೆ.
ಅಮೆರಿಕದ ಹಲವು ಇಲಾಖೆಗಳ ಜಂಟಿ ಕಾರ್ಯಾಚರಣೆ ಫಲವಾಗಿ ಎಲ್ಲಾ ಐದು ಕಾಲ್‌ಸೆಂಟರ್‌ಗಳು ಹಾಗೂ 31 ಭಾರತೀಯರು ಸೇರಿದಂತೆ 56 ಮಂದಿಯ ವಿರುದ್ಧ ಆರೋಪ ಹೊರಿಸುವುದು ಸಾಧ್ಯವಾಯಿತು ಹಾಗೂ ಅಮೆರಿಕದಲ್ಲಿ 20 ಮಂದಿಯನ್ನು ಬಂಧಿಸುವುದು ಸಾಧ್ಯವಾಯಿತು ಎಂದು ಜಾನ್ಸನ್ ಗುರುವಾರ ತಿಳಿಸಿದರು.
‘‘ಅವರು ಸಾವಿರಾರು ಸಂತ್ರಸ್ತರಿಂದ 2004 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸುಲಿಗೆ ಮಾಡಿದ್ದಾರೆ’’ ಎಂದು ಅವರು ಹೇಳಿದರು.
 ಅಹ್ಮದಾಬಾದ್‌ನಲ್ಲಿರುವ ಈ ಕಾಲ್‌ಸೆಂಟರ್‌ಗಳ ಜಾಲದ ವ್ಯಕ್ತಿಗಳು ಅಮೆರಿಕದ ಗೃಹ ಇಲಾಖೆ, ಆಂತರಿಕ ಕಂದಾಯ ಸೇವೆಗಳು ಅಥವಾ ಇತರ ಸರಕಾರಿ ಅಧಿಕಾರಿಗಳಂತೆ ನಟಿಸಿ ಅಮೆರಿಕನ್ನರಿಗೆ ಫೋನ್ ಮಾಡುತ್ತಿದ್ದರು. ನಿಮ್ಮ ವಿರುದ್ಧ ಬಂಧನ ವಾರಂಟ್‌ಗಳು ಹೊರಟಿವೆ, ಗಡಿಪಾರು ಆದೇಶ ನೀಡಲಾಗಿದೆ ಅಥವಾ ಆದಾಯತೆರಿಗೆ ಬಾಕಿ ಇದೆ ಎಂಬುದಾಗಿ ಅವರನ್ನು ಹೆದರಿಸಿ, ಅವುಗಳನ್ನು ರದ್ದುಪಡಿಸಬೇಕಾದರೆ ಹಣ ನೀಡುವಂತೆ ಒತ್ತಾಯಿಸುತ್ತಿದ್ದರು.
ಅಮೆರಿಕದಲ್ಲಿ ವಾಸಿಸುತ್ತಿರುವ ಜನರಿಗೆ ಕರೆ ಮಾಡಿ ಸುಲಿಗೆ ಮಾಡಿದ ಅಹ್ಮದಾಬಾದ್‌ನ ಕಾಲ್‌ಸೆಂಟರ್‌ಗಳೆಂದರೆ- ಎಚ್‌ಗ್ಲೋಬಲ್, ಕಾಲ್ ಮಂತ್ರ, ವರ್ಲ್ಡ್‌ವೈಡ್ ಸೊಲ್ಯೂಶನ್, ಝಾರಿಯಾನ್ ಕಮ್ಯುನಿಕೇಶನ್ಸ್ ಮತ್ತು ಶರ್ಮಾ ಬಿಪಿಒ ಸರ್ವಿಸಸ್.
ಅಮೆರಿಕದ ವಿವಿಧ ಸರಕಾರಿ ಸಂಸ್ಥೆಗಳು ಮೂರು ವರ್ಷಗಳ ಸುದೀರ್ಘ ತನಿಖೆಯ ಬಳಿಕ ಈ ಕಂಪೆನಿಗಳ ಅಪರಾಧವನ್ನು ಸಾಬೀತುಪಡಿಸಿವೆ.
‘‘ತಮಗೆ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಕರೆಗಳು ಬಂದಿವೆ ಎಂಬುದಾಗಿ ಈವರೆಗೆ 18 ಲಕ್ಷಕ್ಕೂ ಅಧಿಕ ಮಂದಿ ದೂರು ನೀಡಿದ್ದಾರೆ. 5 ಕೋಟಿ ಡಾಲರ್ (334 ಕೋಟಿ ರೂ.)ಗೂ ಅಧಿಕ ಹಣ ನೀಡಿದ್ದೇವೆ ಎಂಬುದಾಗಿ 9,600ಕ್ಕೂ ಅಧಿಕ ಮಂದಿ ಹೇಳಿದ್ದಾರೆ’’ ಎಂದು ತೆರಿಗೆ ವಿಭಾಗದ ಟ್ರೆಶರಿ ಇನ್ಸ್‌ಪೆಕ್ಟರ್ ಜನರಲ್ ಜೆ. ರಸೆಲ್ ಜಾರ್ಜ್ ಹೇಳಿದರು.
ಈ ವಂಚನೆಯಲ್ಲಿ ಒಬ್ಬರಿಂದಲೇ ಸುಲಿಗೆ ಮಾಡಲಾದ ಗರಿಷ್ಠ ಮೊತ್ತ 90.85 ಲಕ್ಷ ರೂ. ಎಂದು ಅಧಿಕಾರಿಗಳು ಹೇಳಿದ್ದಾರೆ. ಅದನ್ನು ಕ್ಯಾಲಿಫೋರ್ನಿಯದ ವ್ಯಕ್ತಿಯೊಬ್ಬರಿಂದ ವಸೂಲು ಮಾಡಲಾಗಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X