ಭಾರತೀಯ ಯೋಧನ ಅಂಗಾಂಗ ಕತ್ತರಿಸಿ ಹತ್ಯೆಗೈದ ಉಗ್ರರು

ಶ್ರೀನಗರ, ಅ.28: ಅತ್ಯಂತ ಭೀಭತ್ಸ ಘಟನೆಯೊಂದರಲ್ಲಿ ಪಾಕ್ ಪ್ರೇರಿತ ಉಗ್ರರು ಭಾರತೀಯ ಸೇನಾಪಡೆಯ ಯೋಧನನ್ನು ಗುಂಡಿಟ್ಟು ಹತ್ಯೆ ಮಾಡಿ ಆತನ ಶವವನ್ನು ತುಂಡರಿಸಿದ್ದಾರೆ. ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಮಚ್ಲಿ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆ ದಾಟಿ ಒಳನುಸುಳಿದ ಉಗ್ರರು ಭಾರತೀಯ ಪಡೆಗಳತ್ತ ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಓರ್ವ ಯೋಧ ಮೃತಪಟ್ಟಿದ್ದಾನೆ.
ಮೃತಪಟ್ಟ ಯೋಧನ ಶವವನ್ನು ತುಂಡರಿಸಿ ವಿರೂಪಗೊಳಿಸಿದ ಉಗ್ರರು ಬಳಿಕ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ಪರಾರಿಯಾದರು. ಪರಾರಿಯಾಗುತ್ತಿದ್ದ ಉಗ್ರರಿಗೆ ಪಾಕ್ ಪಡೆಗಳು ಸಹಕಾರ ನೀಡಿದ್ದವು. ಘಟನೆಯಲ್ಲಿ ಓರ್ವ ಉಗ್ರನನ್ನು ಭಾರತೀಯ ಸೇನೆ ಹತ್ಯೆ ಮಾಡಿದೆ. ಯೋಧನ ಶವ ವಿರೂಪಗೊಳಿಸಿರುವ ಘಟನೆ ಪಾಕಿಸ್ತಾನದ ಸಂಸ್ಥೆಗಳಲ್ಲಿ ಅಧಿಕೃತ ಮತ್ತು ಅನಧಿಕೃತವಾಗಿ ಚಾಲ್ತಿಯಲ್ಲಿರುವ ಅಮಾನುಷ, ಅನಾಗರಿಕ ಪದ್ದತಿಯ ದ್ಯೋತಕವಾಗಿದೆ.
ಈ ಘಟನೆಗೆ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರ ಹೇಳಲಾಗುವುದು ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.
Next Story





