‘ಮರಳು ಕಾರ್ಮಿಕರನು್ನ ಭಯೋತಾ್ಪದಕರಂತೆ ನೋಡಬೇಡಿ’
ಮಂಗಳೂರು, ಅ.28: ದ.ಕ. ಜಿಲ್ಲಾದ್ಯಂತ ಮರಳು ತೆಗೆಯುವ ಕಾರ್ಮಿಕರು ಹಾಗೂ ಲಾರಿ ಚಾಲಕರ ಮೇಲೆ ಪೊಲೀಸ್ ಇಲಾಖೆ, ಗಣಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ದೌರ್ಜನ್ಯ ಹೆಚ್ಚಾಗುತ್ತಿದೆ. ಕಾರ್ಮಿಕ ರನ್ನು ಭಯೋತ್ಪಾದಕರಂತೆ ನೋಡುವ ದೃಷ್ಟಿಕೋನ ಬದಲಾಗಬೇಕು ಎಂದು ದ.ಕ. ಜಿಲ್ಲಾ ಮರಳು ತೆಗೆ ಯುವ ಮಾಲಕರು ಹಾಗೂ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ನವೀನ್‌ಚಂದ್ರ ಬಿ. ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಲ್ಲಾರಪಟ್ಣದಲ್ಲಿ ಮರಳು ದಕ್ಕೆಯ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭ ಶರ್ೀ ಎಂಬವರು ನೀರಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಸರಕಾರ ತಕ್ಷಣ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಸಣ್ಣಪುಟ್ಟ ದೋಣಿಗಳ ಮೂಲಕ ಮರಳು ತೆಗೆಯುತ್ತಿರುವ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸ ಲಾಗುತ್ತಿದೆ. ಇದೇ ರೀತಿ ದೌರ್ಜನ್ಯ ಮುಂದುವರಿದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಣ ಕೆ., ಮುಹಮ್ಮದ್ ಶರ್ೀ, ಭರತ್ ತಿಂಗಳಾಯ, ಪ್ರೇಮನಾಥ ಗುರುಪುರ ಉಪಸ್ಥಿತರಿದ್ದರು





