Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ರಣಜಿ: ಅಸ್ಸಾಂಗೆ ಕರ್ನಾಟಕ ದಿಟ್ಟ...

ರಣಜಿ: ಅಸ್ಸಾಂಗೆ ಕರ್ನಾಟಕ ದಿಟ್ಟ ಉತ್ತರ;ಉತ್ತಪ್ಪ-ನಾಯರ್ ಆಕರ್ಷಕ ಶತಕ

ಹಿಮಾಚಲಪ್ರದೇಶ 36 ರನ್‌ಗೆ ಆಲೌಟ್, ರನ್ ನೀಡದೆ 4 ವಿಕೆಟ್ ಪಡೆದ ಆಕಾಶ್

ವಾರ್ತಾಭಾರತಿವಾರ್ತಾಭಾರತಿ28 Oct 2016 11:27 PM IST
share
ರಣಜಿ: ಅಸ್ಸಾಂಗೆ ಕರ್ನಾಟಕ ದಿಟ್ಟ ಉತ್ತರ;ಉತ್ತಪ್ಪ-ನಾಯರ್ ಆಕರ್ಷಕ ಶತಕ

ಮುಂಬೈ, ಅ.28: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಅವರ ಆಕರ್ಷಕ ಅಜೇಯ ಶತಕದ ನೆರವಿನಿಂದ ಕರ್ನಾಟಕ ತಂಡ ಅಸ್ಸಾಂಗೆ ದಿಟ್ಟ ಉತ್ತರ ನೀಡಲು ಮುಂದಾಗಿದೆ.

ಇಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಎರಡನೆ ದಿನವಾದ ಶುಕ್ರವಾರ ಆಟ ಕೊನೆಗೊಂಡಾಗ ಕರ್ನಾಟಕ 69 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಉತ್ತಪ್ಪ(ಅಜೇಯ 108, 206 ಎಸೆತ, 12 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಕರುಣ್ ನಾಯರ್(ಅಜೇಯ 108, 198 ಎಸೆತ, 13 ಬೌಂಡರಿ) 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 219 ರನ್ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕ, ಅಸ್ಸಾಂ ಇನಿಂಗ್ಸ್‌ಗಿಂತ 102 ರನ್ ಹಿನ್ನಡೆಯಲ್ಲಿದೆ.

ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಆರ್.ಸಮರ್ಥ್ ಹಾಗೂ ಮಾಯಾಂಕ್ ಅಗರ್‌ವಾಲ್ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ಗೆ ಸೇರಿದರು. ಈ ಇಬ್ಬರು ಔಟಾದಾಗ ಭಾರತ ಎಕ್ಸ್‌ಟ್ರಾ ರನ್ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 4 ರನ್ ಗಳಿಸಿತ್ತು.

ತಂಡ ಸಂಕಷ್ಟದಲ್ಲಿದ್ದಾಗ ಜೊತೆಯಾದ ಉತ್ತಪ್ಪ-ನಾಯರ್ ಜೋಡಿ ಅಸ್ಸಾಂ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿ ಕರ್ನಾಟಕ ದಿಟ್ಟ ಉತ್ತರ ನೀಡಲು ನೆರವಾಗಿದ್ದಾರೆ. ಅಸ್ಸಾಂ 325, ಅಮಿತ್ ವರ್ಮ ಔಟಾಗದೆ 166 ರನ್

ಇದಕ್ಕೆ ಮೊದಲು 6 ವಿಕೆಟ್‌ಗಳ ನಷ್ಟಕ್ಕೆ 268 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಅಸ್ಸಾಂ ತಂಡ ನಿನ್ನೆಯ ಮೊತ್ತಕ್ಕೆ 102 ರನ್ ಸೇರಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಪುರ್ಕಯಸ್ತ(59) ನಿನ್ನೆಯ ಮೊತ್ತಕ್ಕೆ 3 ರನ್ ಸೇರಿಸಿ ಸ್ಟುವರ್ಟ್ ಬಿನ್ನಿಗೆ ವಿಕೆಟ್ ಒಪ್ಪಿಸಿದರು.

ಅಜೇಯ ಶತಕ ಸಿಡಿಸಿದ ಅಮಿತ್ ವರ್ಮ(166 ರನ್, 316 ಎಸೆತ, 23 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟ ನೀಡಿದರು. ಪುರ್ಕಯಸ್ತ ಔಟಾದ ಬಳಿಕ ಅವರಿಗೆ ಅಸ್ಸಾಂನ ಕೆಳ ಕ್ರಮಾಂಕದ ಉಳಿದ ಆಟಗಾರರಿಂದ ಸೂಕ್ತ ಬೆಂಬಲ ಸಿಗಲಿಲ್ಲ.

ಕರ್ನಾಟಕದ ಪರ ಶ್ರೀನಾಥ್ ಅರವಿಂದ್(5-70) ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ಸ್ಪಿನ್ನರ್ ಎಸ್.ಗೋಪಾಲ್(3-74) ಹಾಗೂ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ(2-81) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್

ಅಸ್ಸಾಂ ಮೊದಲ ಇನಿಂಗ್ಸ್: 325 ರನ್‌ಗೆ ಆಲೌಟ್

(ಅಮಿತ್ ವರ್ಮ ಅಜೇಯ 166, ಪುರ್ಕಯಸ್ತ 59, ಎಸ್.ಅರವಿಂದ್ 5-70, ಎಸ್.ಗೋಪಾಲ್ 3-74, ಬಿನ್ನಿ 2-81)

ಕರ್ನಾಟಕ ಪ್ರಥಮ ಇನಿಂಗ್ಸ್: 223/2

(ರಾಬಿನ್ ಉತ್ತಪ್ಪ ಅಜೇಯ 108, ಕರಣ್ ನಾಯರ್ ಅಜೇಯ 108, ಎಕೆ ದಾಸ್ 1-27, ಕೆ.ದಾಸದ್ 1-46)

ಹಿಮಾಚಲಪ್ರದೇಶ 36 ರನ್‌ಗೆ ಆಲೌಟ್, ರನ್ ನೀಡದೆ 4 ವಿಕೆಟ್ ಪಡೆದ ಆಕಾಶ್

ಗುವಾಹಟಿ, ಅ.28: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ‘ಸಿ’ ಗುಂಪಿನ ಪಂದ್ಯ ಬೌಲರ್‌ಗಳ ಮೆರೆದಾಟಕ್ಕೆ ಸಾಕ್ಷಿಯಾಗಿದ್ದು, ಒಂದೇ ದಿನ 15 ವಿಕೆಟ್‌ಗಳು ಪತನಗೊಂಡಿವೆ.

ಶುಕ್ರವಾರ ಇಲ್ಲಿ ನಡೆದ 2ನೆ ದಿನದಾಟದಲ್ಲಿ 2 ವಿಕೆಟ್‌ಗೆ 8 ರನ್‌ನಿಂದ ಮೊದಲ ದಿನದಾಟ ಮುಂದುವರಿಸಿದ ಹಿಮಾಚಲ ಪ್ರದೇಶ ತಂಡ ಕೇವಲ 36 ರನ್‌ಗೆ ಆಲೌಟಾಯಿತು. ಇದು 2000ರ ಬಳಿಕ ರಣಜಿಯಲ್ಲಿ ದಾಖಲಾದ 4ನೆ ಕನಿಷ್ಠ ಸ್ಕೋರ್.

ಇದಕ್ಕೆ ಉತ್ತರವಾಗಿ ಹೈದರಾಬಾದ್ 99 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಕೇವಲ 63 ರನ್ ಮುನ್ನಡೆಯಲ್ಲಿದೆ. ಹಿಮಾಚಲ ಪ್ರದೇಶದ ವೇಗಿ ರಿಷಿ ಧವನ್(6-35) ಆರು ವಿಕೆಟ್‌ಗಳನ್ನು ಕಬಳಿಸಿ ಹೈದರಾಬಾದ್‌ಗೆ ಕಡಿವಾಣ ಹಾಕಿದ್ದಾರೆ.

ಇದಕ್ಕೆ ಮೊದಲು ಹೈದರಾಬಾದ್‌ನ ಸ್ಪಿನ್ನರ್ ಆಕಾಶ್ ಭಂಡಾರಿ(4-0), ವೇಗಿಗಳಾದ ರವಿ ಕಿರಣ್(3-12) ಹಾಗೂ ಚಾಮ ಮಿಲಿಂದ್(2-15) ದಾಳಿಗೆ ತತ್ತರಿಸಿದ ಹಿಮಾಚಲ ಪ್ರದೇಶ 25 ಓವರ್‌ಗಳಲ್ಲಿ ಗಂಟುಮೂಟೆ ಕಟ್ಟಿತು.

ಆಂಧ್ರದ ಸ್ಪಿನ್ ಬೌಲರ್ ಆಕಾಶ್ ಭಂಡಾರಿ 3 ಓವರ್‌ನಲ್ಲಿ ಒಂದೂ ರನ್ ನೀಡದೆ 3 ಮೇಡನ್ ಓವರ್‌ನೊಂದಿಗೆ ಎದುರಾಳಿ ತಂಡದ 4 ವಿಕೆಟ್‌ಗಳನ್ನು ಉಡಾಯಿಸಿ ಹೊಸ ದಾಖಲೆ ಬರೆದರು.

 ಹಿಮಾಚಲ ಪ್ರದೇಶದ ಸ್ಕೋರ್ ಟೆಲಿಫೋನ್ ನಂಬರ್‌ನ್ನು ಅಣಕಿಸುವಂತಿತ್ತು. ಗಂಗ್ಟಾ ಬಾರಿಸಿದ್ದ 8 ರನ್ ತಂಡದ ಪರ ದಾಖಲಾದ ಗರಿಷ್ಠ ಸ್ಕೋರ್. ನಾಯಕ ರಿಷಿ ಧವನ್ ಸಹಿತ ಐವರು ಆಟಗಾರರು ಶೂನ್ಯ ಸಂಪಾದಿಸಿದರು. ಡೋಗ್ರ(6), ಸುಮೀತ್ ವರ್ಮ(5), ದಾಗರ್(4) ಒಂದಂಕಿ ಸ್ಕೋರ್ ದಾಖಲಿಸಿದರು.

ಹಿಮಾಚಲ ಪ್ರದೇಶವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದ್ದ ಹೈದರಾಬಾದ್ ಕೂಡ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ತಂಡದ ಪರ ಅನಿರುದ್ಧ ಅಜೇಯ 44 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ಬದ್ರಿನಾಥ್ ಶೂನ್ಯಕ್ಕೆ ಔಟಾದರು.

ತಮಿಳುನಾಡು 547/7: ಕಟಕ್‌ನಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ತಮಿಳುನಾಡು ತಂಡ ಮಧ್ಯಪ್ರದೇಶದ ವಿರುದ್ಧ 7 ವಿಕೆಟ್‌ಗಳ ನಷ್ಟಕ್ಕೆ 547 ರನ್ ಗಳಿಸಿದೆ. ಆರಂಭಿಕ ಆಟಗಾರರಾದ ಸುಂದರ್ ಹಾಗೂ ಮುಕುಂದ್ ಶೂನ್ಯಕ್ಕೆ ಔಟಾದಾಗ ಕೌಶಿಕ್ ಗಾಂಧಿ(157), ಜಗದೀಶನ್(ಔಟಾಗದೆ 118), ದಿನೇಶ್ ಕಾರ್ತಿಕ್(95) ಹಾಗೂ ಇಂದ್ರಜಿತ್(68) ಪ್ರಮುಖ ಕಾಣಿಕೆ ನೀಡಿ ತಂಡವನ್ನು ಆಧರಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X