ಗೋವಾದ ಮಾಜಿ ಸಿಎಂ ಶಶಿಕಲಾ ಕಾಕೋಡ್ಕರ್ ನಿಧನ
ಪಣಜಿ,ಅ.28: ಗೋವಾದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಶಿಕಲಾ ಕಾಕೋಡ್ಕರ್(81) ಅವರು ಅಲ್ಪಕಾಲದ ಅಸ್ವಾಸ್ಥದ ಬಳಿಕ ಇಂದು ಬೆಳಿಗ್ಗೆ ಇಲ್ಲಿ ನಿಧನರಾದರು.
ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ)ಯ ಹಿರಿಯ ನಾಯಕಿಯಾಗಿದ್ದ ಅವರು ಗೋವಾದ ಮೊದಲ ಮುಖ್ಯಮಂತ್ರಿಯಾಗಿದ್ದ ತನ್ನ ತಂದೆ ದಯಾನಂದ ಬಾಂದೋಡ್ಕರ್ ಅವರು 1973ರಲ್ಲಿ ನಿಧನರಾದ ಬಳಿಕ ಮುಖ್ಯಮಂತ್ರಿ ಗದ್ದುಗೆಯನ್ನೇರಿದ್ದರು.
Next Story





