ಕಾರ್ಡ್ ಮಾಹಿತಿ ಸೋರಿಕೆ
ಅ.31ರೊಳಗೆ ವಿಧಿವಿಜ್ಞಾನ ವರದಿ ಸಲ್ಲಿಕೆ
ಹೊಸದಿಲ್ಲಿ,ಅ.28: ಇತ್ತೀಚೆಗೆ ಎಸ್‌ಬಿಐ ಸೇರಿದಂತೆ ಪ್ರಮುಖ ಬ್ಯಾಂಕುಗಳ 32 ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡ್‌ಗಳ ಮಾಹಿತಿ ಸೋರಿಕೆ ಪ್ರಕರಣದಲ್ಲಿ ರಿಸರ್ವ್ ಬ್ಯಾಂಕಿನಿಂದ ವಿಧಿವಿಜ್ಞಾನ ಲೆಕ್ಕಪರಿಶೋಧನೆಯ ಹೊಣೆಯನ್ನು ವಹಿಸಿಕೊಂಡಿದ್ದ ಬೆಂಗಳೂರಿನ ಹಣಪಾವತಿ ಸುರಕ್ಷತಾ ತಜ್ಞ ಸಂಸ್ಥೆ ಎಸ್‌ಐಎಸ್‌ಎ ತನ್ನ ವರದಿಯನ್ನು ಮುಂದಿನ 2-3 ದಿನಗಳಲ್ಲಿ ಸಲ್ಲಿಸುವ ನಿರೀಕ್ಷೆಯಿದೆ.
ಎಸ್‌ಐಎಸ್‌ಎ ಅ.31ರಂದು ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ ಎಂದು ಶುಕ್ರವಾರ ತಿಳಿಸಿದ ಮೂಲಗಳು, ಇದು ಇಡೀ ಘಟನೆಯ ನಿಖರವಾದ ಚಿತ್ರಣವನ್ನು ನೀಡಲಿದೆ. ಹ್ಯಾಕಿಂಗ್ ಎಲ್ಲಿ ನಡೆದಿತ್ತು ಎಂಬ ಸುಳಿವನ್ನು ಒದಗಿಸಲಿದೆ ಎಂದು ಹೇಳಿದವು.
Next Story





