ಪರಮಾಣು ಶಕ್ತ ಹೈಪರ್‌ಸಾನಿಕ್ ಗ್ಲೈಡರ್ ಯಶಸ್ವಿ ಪರೀಕ್ಷೆ
ಮಾಸ್ಕೊ, ಅ. 28: ರಶ್ಯ ತನ್ನ ಸುಧಾರಿತ ಹೈಪರ್‌ಸಾನಿಕ್ ಗ್ಲೈಡರ್ ಸಿಡಿತಲೆಯ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ ಎಂದು ಶುಕ್ರವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ‘‘ಗರಿಷ್ಠ ಎತ್ತರದಲ್ಲಿ ಸೆಕಂಡ್‌ಗೆ 7 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲ ಸಿಡಿತಲೆಯ ಸಂಪೂರ್ಣ ಪ್ರಾಯೋಗಿಕ ಪರೀಕ್ಷೆ ಮೊದಲ ಬಾರಿಗೆ ಯಶಸ್ವಿಯಾಗಿ ಪೂರ್ಣಗೊಂಡಿದೆ’’ ಎಂದು ರಶ್ಯ ಮಾಧ್ಯಮವನ್ನು ಉಲ್ಲೇಖಿಸಿ ಕ್ಸಿನುವ ವಾರ್ತಾ ಸಂಸ್ಥೆ ವರದಿ ಮಾಡಿದೆ.
ಸಿಡಿತಲೆಯನ್ನು ಮಂಗಳವಾರ ರಶ್ಯದ ಪಶ್ಚಿಮ ಒರನ್‌ಬರ್ಗ್ ವಲಯದ ಡೊಂಬರೊವ್‌ಸ್ಕಿ ಪ್ರದೇಶದಿಂದ ತೀರಾ ಉತ್ತರದಲ್ಲಿರುವ ಕಮ್‌ಚಟ್ಕದ ಕುರದಲ್ಲಿರುವ ನೆಲೆಗೆ ಹಾರಿಸಿ ಬಿಡಲಾಗಿತ್ತು.
ಸಿಡಿತಲೆಯು ವಾತಾವರಣದ ದಟ್ಟ ಮಜಲುಗಳನ್ನು ತಲುಪುವ ಮೊದಲು, ನಿರೋಧಕ ಕ್ಷಿಪಣಿಗಳಿಗೆ ಸಿಲುಕದಂತೆ ಅಡ್ಡಾದಿಡ್ಡಿಯಾಗಿ ಚಲಿಸುತ್ತದೆ.
Next Story





