ನ.14-15ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಥಿಂಕ್‌ಬಿಗ್-2016’
ಮಹಿಳಾ ಉದ್ಯಮಿಗಳ ಅಂತಾರಾಷ್ಟ್ರೀಯ ಸಮಾವೇಶ: ಆರ್.ವಿ.ದೇಶಪಾಂಡೆ

ಬೆಂಗಳೂರು, ಅ.28: ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳಾ ಉದ್ಯಮಿಗಳ ಅಂತಾರಾಷ್ಟ್ರೀಯ ಸಮಾವೇಶ ‘ಥಿಂಕ್‌ಬಿಗ್-2016’ನ್ನು ಬೆಂಗಳೂರಿನಲ್ಲಿ ನ.14 ಮತ್ತು 15ರಂದು ಹಮ್ಮಿಕೊಂಡಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ ಎಂದು ಮಧ್ಯಮ ಹಾಗೂ ಬೃಹತ್ ಕೈಗಾರಿಕೆಗಳ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.
"¦
ಶುಕ್ರವಾರ ಸಮಾವೇಶದ ಪೂರ್ವಭಾವಿ ತಯಾರಿ ಯ ವೀಕ್ಷಣೆಗಾಗಿ ಸರಕಾರದ ಉನ್ನತ ಅಧಿಕಾರಿಗಳು ಮತ್ತು ಮಾಧ್ಯಮದವರೊಂದಿಗೆ ಸಮಾವೇಶ ನಡೆ ಯುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಂಕ್‌ಬಿಗ್-2016’ ಸಮಾವೇಶದಲ್ಲಿ ಮುಖ್ಯ ವಾಗಿ ಏಷ್ಯಾ ಖಂಡದ ರಾಷ್ಟ್ರಗಳ ಮಹಿಳಾ ಉದ್ಯಮಿ ಗಳು ಸೇರಿದಂತೆ ಮುಂದುವರಿದ ದೇಶಗಳ ದೊಡ್ಡ ಉದ್ಯಮಿಗಳು ಭಾಗವಹಿಸಲಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಯಿದ್ದು ಈಗಾಗಲೇ 1,300ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಸಮಾವೇಶಕ್ಕೆ ನೋಂದಾಯಿಸಿಕೊಂಡಿ ದ್ದಾರೆ ಎಂದು ಅವರು ಹೇಳಿದರು.
ಮಹಿಳಾ ಉದ್ಯಮಿಗಳಿಗೆ ಇರುವ ವಿಫುಲ ಅವಕಾಶ ಗಳನ್ನು ಪರಿಚಯಿಸುವುದು ಮತ್ತು ಉತ್ತೇಜನ ನೀಡುವುದು ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಸರಕಾರದಿಂದ ಇರುವ ಸವಲತ್ತು ಹಾಗೂ ದೊಡ್ಡ ಉದ್ಯಮಿಗಳಿಗೆ ಚಿಕ್ಕ ಉದ್ಯಮಗಳನ್ನು ಪರಿಚಯಿಸುವ ಕಾರ್ಯ ನಡೆಯುತ್ತದೆ. ಸಮಾವೇಶದಲ್ಲಿ ವಿಚಾರ ಸಂಕಿರಣ, ಉತ್ಪನ್ನಗಳ ಮಾರಾಟ ಮಳಿಗೆಗಳು ಇರಲಿವೆ ಎಂದು ದೇಶಪಾಂಡೆ ತಿಳಿಸಿದರು.ಂತಾರಾಷ್ಟ್ರೀಯ ಸಮಾವೇಶಗಳ ಕೇಂದ್ರ ಕರ್ನಾಟಕ: ಈಗಾಗಲೆ ಭಾರತದಲ್ಲೇ ಅತಿ ದೊಡ್ಡ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ’ ಮಾಡಿ ಜಗತ್ತಿನ ಆಕರ್ಷಣೆಗೆ ಒಳಗಾಗಿರುವ ಬೆಂಗಳೂರು ಹಲವು ಅಂತಾರಾಷ್ಟ್ರೀಯ ಸಮಾವೇಶ ಗಳನ್ನು ಹಮ್ಮಿಕೊಳ್ಳುವುದರ ಮೂಲಕ ದೇಶದಲ್ಲಿ ಮೇಲುಗೈ ಸಾಧಿಸಿದೆ ಎಂದು ಅವರು ಹೇಳಿದರು. ಪ್ರಸಕ್ತ ಸಾಲಿನ ನ.14 ಹಾಗೂ 15ರಂದು ಅಂತಾ ರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಮಾವೇಶ, ಬೆಂಗಳೂರು ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ನ.14, 15 ಹಾಗೂ 16ರಂದು ನಡೆಯಲಿದೆ. ಪ್ರವಾಸಿ ಭಾರತ್ ಕಾರ್ಯಕ್ರಮವು 2017ನೆ ಸಾಲಿನ ಜನವರಿ 7, 8 ಹಾಗೂ 9ರಂದು, ಮೇಕ್ ಇನ್ ಇಂಡಿಯಾ ಸಮಾ ವೇಶ ಬೆಂಗಳೂರಿನ ಅಶೋಕ್ ಹೊಟೇಲ್‌ನಲ್ಲಿ ಫೆ.13 ಮತ್ತು 14ರಂದು ನಡೆಯಲಿದೆ ಎಂದು ದೇಶಪಾಂಡೆ ವಿವರಣೆ ನೀಡಿದರು.
ಬೆಂಗಳೂರಿನ ಸೌಂದರ್ಯವನ್ನು ಕಾಪಾಡಿ: ರಾಜ್ಯ ಸರಕಾರ ಹಮ್ಮಿಕೊಳ್ಳುತ್ತಿರುವ ಹಲವು ಅಂತಾರಾಷ್ಟ್ರೀಯ ಸಮಾವೇಶಗಳು ಬೆಂಗಳೂರಿನಲ್ಲಿ ನಡೆಯುತ್ತಿರುವ ಕಾರಣ ನಗರದ ಸ್ವಚ್ಛತೆಯನ್ನು ಕಾಪಾಡಬೇಕು ಹಾಗೂ ಬೆಂಗಳೂರು ಉದ್ಯಾನನಗರಿ ಎಂಬ ಗರಿಯನ್ನು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಉಳಿಸಿಕೊಳ್ಳಬೇಕು ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ದೇಶಪಾಂಡೆ ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳ ಕಾರ್ಯದರ್ಶಿ ಕೆ. ರತ್ನಪ್ರಭಾ ಸೇರಿದಂತೆ ಬಿಡಿಎ ಮತ್ತು ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
‘ಥಿಂಕ್‌ಬಿಗ್-2016’ ಸಮಾವೇಶ ದಲ್ಲಿ ಮುಖ್ಯ ವಾಗಿ ಏಷ್ಯಾ ಖಂಡದ ರಾಷ್ಟ್ರಗಳ ಮಹಿಳಾ ಉದ್ಯಮಿಗಳು ಸೇರಿದಂತೆ ಮುಂದುವರಿದ ದೇಶಗಳ ದೊಡ್ಡ ಉದ್ಯಮಿಗಳು ಭಾಗವಹಿಸಲಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆಯಿದ್ದು ಈಗಾಗಲೇ 1,300ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಸಮಾವೇಶಕ್ಕೆ ನೋಂದಾಯಿಸಿ ಕೊಂಡಿದ್ದಾರೆ.
-ಆರ್.ವಿ ದೇಶಪಾಂಡೆ







