ಕೆಜೆಪಿ ಸ್ಥಾಪಕ ಪ್ರಸನ್ನ ಮೇಲೆ ಮಸಿ
ಬಿಎಸ್ ವೈ - ಶೋಭಾ ಕುರಿತು ಪತ್ರಿಕಾಗೋಷ್ಠಿ

ಬೆಂಗಳೂರು, ಅ. 28: ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ವಿವಾಹವಾಗಿರುವ ಕುರಿತು ರಹಸ್ಯವನ್ನು ಬಹಿರಂಗಪ ಡಿಸಲು ಮುಂದಾದ ಕೆಜೆಪಿ ಸಂಸ್ಥಾಪಕ, ರಾಜ್ಯಾಧ್ಯಕ್ಷ ಪದ್ಮನಾಭ ಪ್ರಸನ್ನ ಕುಮಾರ್ ಅವರಿಗೆ ಪತ್ರಕರ್ತರ ಸೋಗಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳ ತಂಡ ಮಸಿ ಬಳಿದ ಘಟನೆ ಶುಕ್ರವಾರ ನಡೆದಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಯವರನ್ನು ವಿವಾಹವಾಗಿದ್ದಾರೆ ಎಂದು ಆರೋಪಿಸಿ ಪ್ರಸನ್ನ ಕುಮಾರ್ ಸಾಕ್ಷವನ್ನು ಬಹಿರಂಗಗೊಳಿಸಲು ಮುಂದಾದಾಗ ಇದರಲ್ಲಿ ದೋಷವಿದೆ ಎಂದು ಆಕ್ಷೇಪ ವ್ಯಕ್ತಪಡಿ ಸುತ್ತಿದ ದುಷ್ಕರ್ಮಿಗಳ ತಂಡ ಏಕಾಏಕಿ ಎರಡು ಬಾಟಲಿಗಳಲ್ಲಿ ತಂದಿದ್ದ ಮಸಿಯನ್ನು ಅವರ ಮೇಲೆ ಸುರಿದರು.ಮಸಿ ಬಳಿದ ನಂತರ ದುಷ್ಕರ್ಮಿಗಳು ಭಾರತ ರಕ್ಷಣಾ ವೇದಿಕೆಗೆ ಜಯವಾಗಲಿ, ಭಾರತೀಯ ಹೆಣ್ಣಿನ ಬಗ್ಗೆ ಕೀಳಾಗಿ ಮಾತನಾಡುವವರಿಗೆ ಧಿಕ್ಕಾರವಿರಲಿ ಎಂದು ಘೋಷಣೆಗಳನ್ನು ಕೂಗಿ ಕ್ಷಣಾರ್ಧದಲ್ಲೇ ಸ್ಥಳದಿಂದ ಕಾಲ್ಕಿತ್ತರು.
ಯಡಿಯೂರಪ್ಪನವರ ಮೇಲೆ ಆರೋಪ: ಮಾಜಿ ಮುಖ್ಯಮಂತ್ರಿ ಯಡಿಯೂರ ಪ್ಪನವರೇ ಬಾಡಿಗೆ ಗೂಂಡಾಗಳನ್ನು ಬಿಟ್ಟು ಮಸಿ ಬಳಿಸಿದ್ದಾರೆ. ಈ ಹಿಂದೆಯೂ ಶಿವಮೊಗ್ಗ ದಲ್ಲಿ ಯಡಿಯೂರಪ್ಪ ಬೆಂಬಲಿಗರು ಹಲ್ಲೆ ನಡೆಸಲು ಯತ್ನಿಸಿದ್ದರು. ಯಡಿಯೂರಪ್ಪ ನವರಿಗೆ ನಾಚಿಕೆಯಾಗಬೇಕು. ಬೆನ್ನ ಹಿಂದೆ ಚೂರಿ ಹಾಕುವುದನ್ನು ಬಿಟ್ಟು ಧೈರ್ಯವಾಗಿ ನೇರವಾಗಿ ಬಂದು ಚೂರಿ ಹಾಕಿ ಎಂದು ಪ್ರಸನ್ನ ಕುಮಾರ್ ಸವಾಲೆಸೆದರು.
ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಸೇರಿದ ನಂತರ ಏನೇನು ಮಾಡಿದರು ಎನ್ನುವುದು ನನಗೆ ಗೊತ್ತಿದೆ. ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ವಿವಾಹವಾಗಿದೆ ಎನ್ನುವುದಕ್ಕೆ ನನ್ನ ಬಳಿ ಸಿಡಿ ಇದೆ. ಸದ್ಯದಲ್ಲೇ ಇದನ್ನು ಬಹಿರಂಗಪಡಿಸುತ್ತೇನೆ. ಯಡಿಯೂರಪ್ಪನವರಿಂದ ನನಗೆ ಜೀವ ಬೆದರಿಕೆಯಿದ್ದು ನನಗೆ ಸರಕಾರ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣ ಕುರಿತು ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ವಿವಾಹ ಕುರಿತು ಹೇಳಿದ್ದು...
ನನಗೆ ವಿವಾಹವಾದರೆ ಅನ್ನ ಛತ್ರ ನಿರ್ಮಾಣ ಮಾಡುತ್ತೇನೆ ಎಂದು ಹರಕೆ ಹೊತ್ತು ಕೊಂಡಿದ್ದರು. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ವಿವಾಹ ಆದ ನಂತರ ಹರಕೆಯನ್ನು ತೀರಿಸಲು ಕೇರಳದ ಮಡೇಕಾವು ಎಂಬಲ್ಲಿ ಮಹಾ ಕಾಳಿ ದೇವಸ್ಥಾನದಲ್ಲಿ ಅನ್ನ ಛತ್ರ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ದಾಖಲೆಯನ್ನು ಬಹಿರಂಗಗೊಳಿಸಿದರು.
ಈ ಕಟ್ಟಡದ ಸ್ಮರಣಾರ್ಥ ಕಲ್ಲಿನ ಮೇಲೆ ಶ್ರೀಮತಿ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪನವರು ನಿರ್ಮಾಣ ಮಾಡಿದ್ದಾರೆ ಎಂದು ಕೆತ್ತಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ವಿವಾಹವಾಗಿದೆ ಎನ್ನಲು ಈ ಒಂದೇ ಸಾಕ್ಷಿ ಸಾಕು ಎಂದು ಹೇಳಿದರು.







