‘ಬೋಯಿ’ ಸಮುದಾಯಕ್ಕೆ‘ಎಸ್ಸಿ ಜಾತಿ ಪ್ರಮಾಣ ಪತ್ರ’ ಬೇಡ
ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿ ಶಿಫಾರಸು
ಬೆಂಗಳೂರು, ಅ. 28: ರಾಜ್ಯದಲ್ಲಿನ ಕೆಲ ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ‘ಬೋಯಿ’ (ಆಟಜಿ) ಸಮುದಾಯ ಅಸ್ಪಶ್ಯ ಜಾತಿಗೆ ಸೇರಿಲ್ಲ. ಆದುದರಿಂದ ಈ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ(ಎಸ್ಸಿ) ದೃಢೀಕರಣ ಪತ್ರ ನೀಡಬಾರದು ಎಂದು ಮೇಲ್ಮನೆ ಸದಸ್ಯ ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿ ವರದಿ ಸಲ್ಲಿಸಿದೆ.
ಶುಕ್ರವಾರ ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಸಮಿತಿ ವರದಿ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಸ್ಪಶ್ಯ’ ಜಾತಿಗೆ ಸೇರಿರುವ ‘ಭೋವಿ’ ಸಮುದಾಯ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದೆ. ಹೀಗಾಗಿ ಆ ಸಮುದಾಯಕ್ಕೆ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿದ್ದು, ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ.ದರೆ, ‘ಬೋಯಿ’ ಸಮುದಾಯ ಮೂಲತಃ ‘ವಡ್ಡರ’ ಜಾತಿಯ ಕಲ್ಲು ವಡ್ಡ, ಮಣ್ಣು ವಡ್ಡ, ತೆಲುಗು ವಡ್ಡ ಸೇರಿದಂತೆ ಅದರ ಉಪ ಪಂಗಡಗಳಿಂದ ಸಮಿಶ್ರವಾಗಿದೆ. ಈ ಸಮುದಾಯ 1944ರಲ್ಲೆ ದಾವಣಗೆರೆಯಲ್ಲಿ ವಡ್ಡ ಜನಾಂಗದ ಸಮಾವೇಶ ನಡೆಸಿ, ತಮ್ಮನ್ನು ‘ಬೋಯಿ’ ಎಂದು ಸಂಬೋಧಿಸಬೇಕೆಂದು ನಿರ್ಣಯ ಕೈಗೊಂಡಿತ್ತು. ಆ ಹಿನ್ನೆಲೆಯಲ್ಲಿ ಅಂದಿನ ಮೈಸೂರು ಮಹಾರಾಜರು 1946ರ ಫೆ.1ರಂದು ವಡ್ಡ ಸಮುದಾಯವನ್ನು ‘ಬೋಯಿ’ ಎಂದು ಗುರುತಿಸಿ ಗೆಜೆಟ್ ಆದೇಶ ಹೊರಡಿಸಿದೆ.ದುದರಿಂದ ಬೋಯಿ ಸಮುದಾಯ ಪ್ರಸ್ತುತ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿನ ಪ್ರವರ್ಗ-1ರಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಈ ಬೋಯಿ ಜನಾಂಗ ಆರ್ಥಿಕವಾಗಿ ಹಿಂದುಳಿದಿದೆ. ಆದರೆ ಅಸ್ಪಶ್ಯ ಜಾತಿಯಲ್ಲ ಎಂದು ಉಗ್ರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.ರ್ಹರಿಗೆ ಸೌಲಭ್ಯ ಕಲ್ಪಿಸಿ: ಬೋಯಿ ಜನಾಂಗವನ್ನು ಭೋವಿ ಸಮುದಾಯದ ಜತೆ ಹೋಲಿಕೆ ಮಾಡದೆ ಪರಿಶಿಷ್ಟ ಜಾತಿ(ಎಸ್ಸಿ)ಪಟ್ಟಿಯಲ್ಲಿರುವ ಭೋವಿ ಸಮುದಾಯಕ್ಕೆ ಜಾತಿ ದೃಢೀಕರಣ ಪತ್ರ ನೀಡಬೇಕು. ಅದೇ ರೀತಿ ಅವರಿಗೆ ಸೂಕ್ತ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.ನರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಿ, ಅರ್ಹರನ್ನು ಕಡೆಗಣಿಸಿದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಾತಿ ದೃಢೀಕರಣ ಪತ್ರ ವಿತರಣೆ ಸಂಬಂಧ ಎಲ್ಲ ತಹಶೀಲ್ದಾರರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಉಗ್ರಪ್ಪ ಹೇಳಿದರು. ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜಾ, ಸದಸ್ಯರಾದ ಎಂ.ಡಿ.ಲಕ್ಷ್ಮಿ ನಾರಾಯಣ್, ಧರ್ಮಸೇನ್ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.





