ಪ್ರೇರಣಾ ಟ್ರಸ್ಟ್‌ಗೆ ದೇಣಿಗೆ ಪ್ರಕರಣ ಖುಲಾಸೆಗೆ ಸಿಬಿಐ ದುರ್ಬಳಕೆ
ವಿ.ಎಸ್. ಉಗ್ರಪ್ಪ ಗಂಭೀರ ಆರೋಪ
ಬೆಂಗಳೂರು, ಅ. 28: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಕುಟುಂಬದ ಒಡೆತನದ ಶಿಕ್ಷಣ ಸಂಸ್ಥೆಗೆ ದೇಣಿಗೆ ಪಡೆದ ಪ್ರಕರಣದ ಖುಲಾಸೆಗೆ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂದು ಮೇಲ್ಮನೆ ಸದಸ್ಯ ವಿ.ಎಸ್. ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಿಕ್‌ಬ್ಯಾಕ್ ಪ್ರಕರಣದ ಪ್ರಾಥಮಿಕ ವಿಚಾರಣೆಯಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತು ಪಡಿಸುವ ಸಾಕ್ಷಾಧಾರಗಳಿದ್ದವು. ಆದರೆ, ಅಂತಿಮ ವಿಚಾರಣೆ ವೇಳೆ ಕೋರ್ಟ್‌ಗೆ ಸಾಕ್ಷ ಒದಗಿಸಲು ಸಿಬಿಐ ವಿಫಲವಾಗಿದೆ. ಅಂದರೆ, ಸಾಕ್ಷಗಳನ್ನು ಅಂತಿಮ ಹಂತದಲ್ಲಿ ಇಲ್ಲವಾಗಲು ಕಾರಣವೇನು ಎಂಬುದನ್ನು ಬಿಎಸ್‌ವೈ ಮತ್ತು ಸಿಬಿಐ ಸ್ಪಷ್ಟಪಡಿಸಬೇಕೆಂದು ಕೇಳಿದರು.ರೋಪ ಮುಕ್ತನಾಗಿದ್ದೇನೆಂದು ಯಡಿಯೂರಪ್ಪ ಸಂಭ್ರಮಿಸಲು ಅವರೇನು ಸತ್ಯ ಹರಿಶ್ಚಂದ್ರರಲ್ಲ. ಗೆಲುವಿನ ಚಿಹ್ನೆ ಪ್ರದರ್ಶನ ನಿಜಕ್ಕೂ ಪ್ರಾಮಾಣಿಕತೆಯ ಸಂಕೇತವಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ತಮ್ಮ ಕುಟುಂಬ ಒಡೆತನದ ಪ್ರೇರಣಾ ಟ್ರಸ್ಟ್‌ಗೆ ಜಿಂದಾಲ್ ಸಂಸ್ಥೆ 20ಕೋಟಿ ರೂ. ನೀಡಿದ್ದೇಕೆ ಎಂದು ಪ್ರಶ್ನಿಸಿದರು.ಲಕ್ಷ ರೂ.ಗೆ ಖರೀದಿಸಿದ್ದ ಒಂದು ಎಕರೆ ಭೂಮಿಯನ್ನು ಜಿಂದಾಲ್ ಸಂಸ್ಥೆಗೆ 20 ಕೋಟಿ ರೂ.ಗೆ ಮಾರಾಟ ಮಾಡಿದ್ದು ಹೇಗೆ ಎಂದು ಕೇಳಿದ ಉಗ್ರಪ್ಪ, ಯಾವ ಘನ ಉದ್ದೇಶಕ್ಕಾಗಿ ಜಿಂದಾಲ್ ಸಂಸ್ಥೆ ತಮ್ಮ ಶಿಕ್ಷಣ ಸಂಸ್ಥೆಗೆ ಹಣ ನೀಡಿದ್ದು ಎಂಬುದನ್ನು ಯಡಿಯೂರಪ್ಪ ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ತನಿಖೆ ಆಗಬೇಕು: ವಿಧಾನಸೌಧದ ಆವರಣದಲ್ಲಿ ಇತ್ತೀಚೆಗೆ ಕಾರೊಂದರಲ್ಲಿ ಪತ್ತೆಯಾದ 2ಕೋಟಿ ರೂ.ಹಣದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿ ದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆದರೆ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದರು.
ದಶಕಗಳಿಂದಲೂ ಸಾರ್ವಜನಿಕ ಜೀವನದಲ್ಲಿರುವ ಯಡಿಯೂರಪ್ಪ ಅವರ ಆಸ್ತಿ, ಡಿಸಿಎಂ ಮತ್ತು ಸಿಎಂ ಆದ ಕೂಡಲೇ ದಿಢೀರನೆ ಹತ್ತು, ನೂರು, ಸಾವಿರ ಪಟ್ಟುಗಳಷ್ಟು ಏರಿಕೆ ಆಗಿದ್ದು ಹೇಗೆ ಎಂದು ಪ್ರಶ್ನಿಸಿದ ಉಗ್ರಪ್ಪ, ಬಿಎಸ್‌ವೈ ಆಡಳಿತಾವಧಿಯಲ್ಲೇ ಬಳ್ಳಾರಿಯಲ್ಲಿ 1ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅದಿರು ಲೂಟಿಯಾಗಿತ್ತು. ರಾಜ್ಯದ ಜನತೆ ಬಿಜೆಪಿ ಸರಕಾರದ ಭ್ರಷ್ಟತೆಯನ್ನು ಮರೆಯಲು ಸಾಧ್ಯವಿಲ್ಲ ಎಂದು ಟೀಕಿಸಿದರು.







