ಹಣ ಬಿಟ್ಟು ಕೆಲಸ ಇಲ್ಲ !
ಐಐಟಿ, ಐಐಎಂಗಳಿಗೆ ಕೇಂದ್ರ ಸರಕಾರ ನೀಡಿರುವ ಸೂಚನೆ ಏನು ಗೊತ್ತೇ ?

ಹೊಸದಿಲ್ಲಿ, ಅ.29: ನೀವು ನಿಮಗೆ ಸಾಕಷ್ಟು ಆದಾಯ ಗಳಿಸಲು ಕಾಲ ಕೂಡಿ ಬಂದಿದೆ. ಇಂತಹ ಒಂದು ಸಂದೇಶವನ್ನು ನರೇಂದ್ರ ಮೋದಿ ಸರಕಾರ ಐಐಟಿ, ಐಐಎಂ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸರಕಾರಿ ವಸ್ತು ಸಂಗ್ರಹಾಲಯಗಳು ಸಹಿತ ಎಲ್ಲಾ ಸರಕಾರಿ ಅನುದಾನಿತಸಂಸ್ಥೆಗಳಿಗೆ ನೀಡಿದೆ.
ವಿತ್ತ ಸಚಿವಾಲಯವು ಎಲ್ಲಾ ಸರಕಾರಿ ಇಲಾಖೆಗಳಿಗೆ ಹಾಗೂ ಸಚಿವಾಲಯಗಳಿಗೆ ಪತ್ರ ಬರೆದಿದ್ದು, ಅವರ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸ್ವಾಯತ್ತ ಹಾಗೂ ಅನುದಾನಿತ ತಂಸ್ಥೆಗಳನ್ನು ಗುರುತಿಸಿ ಅವುಗಳು ತಾವು ನೀಡುವ ಸೇವೆಗಳಿಗೆ ಸಾಕಷ್ಟು 'ಯೂಸರ್ ಚಾರ್ಜಸ್' ವಿಧಿಸುತ್ತಿದೆಯೇ ಎಂದುತಿಳಿದುಕೊಳ್ಳಲು ಹೇಳಿದೆ.
''ಈ ಸಂಸ್ಥೆಗಳನ್ನು ಸರಕಾರಿ ಹಣದಿಂದ ನಿರ್ಮಿಸಲಾಗಿದೆ. ಹಾಗಿರುವಾಗ ಆದಾಯದ ವಿವಿಧ ಮೂಲಗಳನ್ನು ಅವುಗಳು ಗುರುತಿಸುವ ಕೆಲಸ ಮಾಡಬೇಕು'' ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲಾವಸ ಹೇಳಿದ್ದಾರೆ.
ಹೆಚ್ಚಿನ ಶಿಕ್ಷಣ ಸಂಸ್ಥೆಗಳಲ್ಲಿವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುವ ಶುಲ್ಕದಲ್ಲಿಯೇ ಯೂಸರ್ ಚಾರ್ಜಸ್ ಅಡಕವಾಗಿರುವುದಾದರೆ, ಮ್ಯೂಸಿಯಂಗಳಲ್ಲಿ ಪ್ರವೇಶಾತಿ ಟಿಕೆಟ್ಟುಗಳಲ್ಲಿ ಈ ಮೊತ್ತ ಸಂಗ್ರಹಿತವಾಗುತ್ತದೆ. ವಿದ್ಯಾರ್ಥಿಗಳ ಶುಲ್ಕವನ್ನು ಹೆಚ್ಚಿಸುವುದು ಎಲ್ಲಾ ವಿಧಗಳಲ್ಲಿಯೂ ಅಸಮರ್ಥನೀಯವಾಗುವುದು.
ಹಲವಾರು ಸಚಿವಾಲಯಗಳ ಅಧಿಕಾರಿಗಳು ಪ್ರಸ್ತುತ ಸಭೆಗಳನ್ನು ನಡೆಸುತ್ತಿದ್ದು ವಿತ್ತ ಸಚಿವಾಲಯ ಸೂಚಿಸಿದಂತೆ ಯೂಸರ್ ಚಾರ್ಜಸ್ ಸಂಗ್ರಹಿಸುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ. ಮಾನವ ಸಂಪನ್ಮೂಲ ಇಲಾಖೆ ಹಲವಾರು ಸಂಸ್ಥೆಗಳಲ್ಲಿ ವಿಧಿಸಲಾಗುವ ಯೂಸರ್ ಚಾರ್ಜಸ್ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ.





