ಮೌಢ್ಯಾಚಾರಣೆ ಪ್ರತಿಬಂಧಕ ಕಾಯ್ದೆಗೆ ಒತ್ತಾಯ: ನಾಳೆ ಮಹತ್ವದ ಸಭೆ

ಬೆಂಗಳೂರು, ಅ.29: ಕರ್ನಾಟಕ ಮೌಢ್ಯಚಾರಣೆ ಪ್ರತಿಬಂಧಕ ಕಾನೂನಿನ ಅಗತ್ಯತೆ ಹಾಗೂ ಕಾನೂನು ಜಾರಿಗಾಗಿ ಒತ್ತಾಯಿಸಿ ಅ.30ರಂದು ಪೂರ್ವಾಹ್ನ 11 ಗಂಟೆಗೆ ಪ್ರಗತಿಪರರು ಮಹತ್ವದ ಸಭೆ ನಡೆಸಲಿದ್ದಾರೆ.
ವೈಜ್ಞಾನಿಕ ವೈಚಾರಿಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತು ಕೆಆರ್‌ವಿಪಿ-ಅಖಿಲ ಕರ್ನಾಟಕ ವಿಚಾರವಾದಿ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಬನಶಂಕರಿ 2ನೆ ಹಂತದ ಬಿಡಿಎ ಕಾಂಪ್ಲೆಕ್ಸ್ ಸಮೀಪದ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದೆ.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಡಾ.ಜಿ.ರಾಮಕೃಷ್ಣ ವಹಿಸಲಿದ್ದು, ಸಾಹಿತಿಗಳಾದ ಪ್ರೊ.ಚಂದ್ರಶೇಖರ ಪಾಟೀಲ್, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಭಾ. ವಿಚಾರವಾದಿ ಸಂಘಗಳ ಒಕ್ಕೂಟ ಅಧ್ಯಕ್ಷ ಡಾ.ನರೇಂದ್ರ ನಾಯಕ್, ಮಾಜಿ ಸಚಿವ ಡಾ.ಲಲಿತಾ ನಾಯಕ್, ಡಾ.ವಸುಂಧರಾ ಭೂಪತಿ ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
Next Story





