ಎನ್‌ಎಂಪಿಟಿ : ಎರಡು ಕಾರ್ಮಿಕ ಸಂಘಟನೆಗಳು ವಿಲೀನ

ಮಂಗಳೂರು, ಅ. 29: ಅಖಿಲ ಭಾರತ ಬಂದರು ಮತ್ತು ದಕ್ಕೆ ಕಾರ್ಮಿಕರ ಒಕ್ಕೂಟ (ಎಚ್‌ಎಂಎಸ್)ದ ಕರೆಯನ್ವಯ ನವಮಂಗಳೂರು ಬಂದರು ಮಂಡಳಿಯಲ್ಲಿ ದಕ್ಕೆ ಕಾರ್ಮಿಕರನ್ನು ಪ್ರತಿನಿಧಿಸುತ್ತಿರುವ ಕರ್ನಾಟಕ ಡಾಕ್ ಎಂಡ್ ಜನರಲ್ ವರ್ಕರ್ಸ್ ಯೂನಿಯನ್ ಬಂದರು ಕಾರ್ಮಿಕರನ್ನು ಪ್ರತಿನಿಧಿಸುತ್ತಿರುವ ನವಮಂಗಳೂರು ಬಂದರು ಸ್ಟಾಫ್ ಅಸೋಸಿಯೇಷನ್ (ಎಚ್‌ಎಂಎಸ್)ನೊಂದಿಗೆ ವಿಲೀನಗೊಂಡಿತು.
ಕಳೆದ ಅಕ್ಟೋಬರ್ 10 ರಂದು ನಡೆದ ಜಂಟಿ ಮಹಾಸಭೆಯಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಚ್‌ಎಂಎಸ್‌ನ ರಾಜ್ಯಾಧ್ಯಕ್ಷರೂ ಹಾಗೂ ನವಮಂಗಳೂರು ಬಂದರು ಮಂಡಳಿಯ ಸದಸ್ಯ ಎಂ. ಸುರೇಶ್ಚಂದ್ರ ಶೆಟ್ಟಿ, ನವಮಂಗಳೂರ ಬಂದರು ಮಂಡಳಿಯಲ್ಲಿ ಕಾರ್ಯಾಚರಿಸುತ್ತಿರುವ ಈ ಎರಡು ಸಂಘಟನೆಗಳ ವಿಲೀನತೆ ಒಂದು ಐತಿಹಾಸಿಕ ಹಾಗೂ ಅಸ್ಮರಣೀಯ ಘಟನೆ ಎಂದರು. ಈ ವಿಲೀನ ಪ್ರಕ್ರಿಯೆಯಿಂದಾಗಿ ಕಾರ್ಮಿಖರ ಶಕ್ತಿ ಮತ್ತು ಒಗ್ಗಟ್ಟು ಹೆಚ್ಚಾಗಲಿದೆ ಎಂದರು.
ಮುಂದಿನ ದಿನದಲ್ಲಿ ಕೇಂದ್ರ ಸರಕಾರವು ಕೈಗೊಳ್ಳುವ ಕ್ರಮಗಳೀಗೆ ಪೂರಕವಾಗಿ ಈ ವಿಲೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಅಖಿಲ ಭಾರತ ಬಂದರು ಮತ್ತು ದಕ್ಕೆ ಕಾರ್ಮಿಕರ ಒಕ್ಕೂಟದ ಖಜಾಂಚಿ ಮತ್ತು ನವ ಮಂಗಳೂರು ಬಂದರು ಮಂಡಳಿಯ ಸದಸ್ಯ ಎಚ್.ಆರ್ ದಿನೇಶ್ ಆಚಾರ್ ತಿಳಿಸಿದರು. ಜಂಟಿ ಕಾರ್ಯಕಾರಿ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ ರಮೇಶ್ ಪೂಜಾರಿ ಮಾತನಾಡಿ, ಗೌರವಾನ್ವಿತ ದಿವಂಗತ ಎಂ.ಲೋಕಯ್ಯ ಶೆಟ್ಟಿಯವರ ನಾಯಕತ್ವದಲ್ಲಿ ಕಟ್ಟಿ ಬೆಳೆಸಿದ ಈ ಸಂಘಟನೆ ಇನ್ನೂ ಬಲಗೊಂದು ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವರೇ ಈ ದಿಟ್ಟ ಹೆಜ್ಜೆ ಇಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಂಟಿ ಕಾರ್ಯಾಕಾರಿ ಸಮಿತಿಗೆ ಆಯ್ಕೆ ನಡೆುತು. ಅಧ್ಯಕ್ಷರಾಗಿ ಎಂ. ಸುರೇಂದ್ರ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ರಮೇಶ್ ಪೂಜಾರಿ, ಹಿರಿಯ ಉಪಾಧ್ಯಕ್ಷರಾಗಿ ಸುಧಾಕರ್, ಅಶೋಕ್ ಶೆಟ್ಟಿ, ಎಲಿಝಬೆತ್ ಸ್ಟೇಪಿನ್, ಉಪಾಧ್ಯಕ್ಷರಾಗಿ ಪಿ.ಟಿ ಕೃಷ್ಣಪ್ಪ, ಪ್ರಭಾಕರ್ ಶೆಟ್ಟಿಗಾರ್, ರಮೇಶ್ ನಾಯಕ್, ರಮೇಶ್ ನಾಯಕ್, ಪ್ರವೀಣ್, ಬಾಲಕೃಷ್ಣ, ಶಿವರಾಮ್ ಶೆಟ್ಟಿ, ಕೆ. ಪ್ರಶಾಂತ್, ಕೆ. ಫಾರೂಕ್, ಪ್ರಧಾನ ಕಾರ್ಯದರ್ಶಿಯಾಗಿ ಎಚ್.ಆರ್. ದಿನೇಶ್ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಬಿ. ಸದಾಶಿವ ಶೆಟ್ಟಿಗಾರ್ ಉಳಿದಂತೆ ಸಂಘಟನಾ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.







