ತಂದೆಯ ವಿರುದ್ಧವೇ ದೂರು ನೀಡಿದ ಬಾಲಕಿ
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಹುಮಾನ ಘೋಷಣೆ

ಚಂಡೀಗಢ, ಅ. 29 : ತನ್ನ ತಂದೆ ಪೈರಿನ ಕೂಳೆಯನ್ನು ಹೊತ್ತಿ ಉರಿಸಿ ಪರಿಶರ ನಾಶಗೊಳಿಸಿದ ಬಗ್ಗೆದೂರಿದ ಜಿಂದ್ ಜಿಲ್ಲೆಯ ಬಾಲಕಿಯೊಬ್ಬಳಿಗೆ ಹರ್ಯಾಣ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರೂ 11000 ನಗದು ಬಹುಮಾನ ಘೋಷಿಸಿದೆ.
ಹದಿನಾರು ವರ್ಷದ ಬಾಲಕಿ ಸೊನಾಲಿ ಶಿಯೋಕಂಡ್ ಈ ಕಟಾವಿನ ಸಮಯದಲ್ಲಿಇತರ ರೈತರುಇಂತಹ ಕಾರ್ಯ ಮಾಡದಂತೆ ತಡೆಯಲು ಯುವಜನತೆಗೆ ಸ್ಫೂರ್ತಿಯಾಗಿದ್ದಾಳೆ. ಈ ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ಬಾಲಕಿಗೆ ಸಮಾರಂಭವೊಂದರಲ್ಲಿ ನೀಡಲಾಗುವುದು.
ತನ್ನ ಪುತ್ರಿಯೇ ತನ್ನ ವಿರುದ್ಧ ದೂರು ನೀಡಿದ್ದಾಳೆಂದು ತಿಳಿದ ರೈತ ಶಂಶೇರ್ ಶಿಯೋಕಂಡ್ ಮೊದಲುಕೋಪಗೊಂಡಿದ್ದರೂ ತಾನು ಮಾಡುವ ಕಾರ್ಯದಿಂದಾಗಿ ಉಂಟಾಗುವ ಪರಿಸರ ಮಾಲಿನ್ಯದ ಬಗ್ಗೆ ಅರಿತು ಮಗಳ ಮೇಲಿನ ಕೋಪ ಕರಗಿ ಹೋಗಿತ್ತು. ಆದರೆ ಆತ ಮಾಡಿದ ತಪ್ಪಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಆತನ ಮೇಲೆರೂ 2500 ದಂಡ ಕೂಡ ವಿಧಿಸಿತ್ತು.
ತನ್ನ ತಂದೆ ಮಾತ್ರವಲ್ಲ ಇಡೀ ಕುಟುಂಬವೇ ದೂರು ನೀಡಿದಂದಿನಿಂದ ತನ್ನ ಮೇಲೆ ಸಿಟ್ಟುಗೊಂಡಿತ್ತು, ಎಂದುಆರ್ ಇ ಕನ್ಯಾ ಮಹಾವಿದ್ಯಾಲಯ ಇಲ್ಲಿನ ಹತ್ತನೇ ತರಗತಿ ವಿದ್ಯಾರ್ಥಿನಿಯಾಗಿರುವ ಸೊನಾಲಿ ಹೇಳಿದ್ದಾಳೆ.

ಪೈರಿನ ಕೂಳೆಯನ್ನು ಉರಿಸುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆಯೆಂದು ತಾನು ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೆ, ಎಂದು ಹೇಳುವ ಸೊನಾಲಿ ತಾನು ತನ್ನ ತಂದೆಗೆ ಭತ್ತದತ್ಯಾಜ್ಯವನ್ನುತನ್ನ ಎರಡು ಎಕರೆ ಭೂಮಿಯಲ್ಲಿ ಸುಡದಂತೆ ಎಚ್ಚರಿಸಿದ್ದರೂ ಅವರು ತನ್ನ ಎಚ್ಚರಿಕೆಯನ್ನು ಮೀರಿ ಅದನ್ನು ಸುಟ್ಟಿದ್ದರು ಎಂದು ವಿವರಿಸಿದ್ದಾಳೆ.
ಶುಕ್ರವಾರದಂದು ರಾಷ್ಟ್ರೀಯ ಹಸಿರು ಪೀಠವು ಹರ್ಯಾಣ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಪೈರಿನ ತ್ಯಾಜ್ಯವನ್ನು ಸುಡದಂತೆ ತಡೆಯಲು ಯಾವುದೇ ಕ್ರಮ ಕೈಗೊಂಡಿಲ್ಲದೇ ಇರುವುದಕ್ಕೆ ತರಾಟೆಗೆತೆಗೆದುಕೊಂಡಿತ್ತು.







