Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಆಬ್ಸ್ ವ್ಯಾಯಾಮ ಮಾಡದೆಯೇ ಹೊಟ್ಟೆ ಬೊಜ್ಜು...

ಆಬ್ಸ್ ವ್ಯಾಯಾಮ ಮಾಡದೆಯೇ ಹೊಟ್ಟೆ ಬೊಜ್ಜು ಕರಗಿಸಲು ಸಾಧ್ಯ !

ಹೇಗೆ ನೋಡಿ

ವಾರ್ತಾಭಾರತಿವಾರ್ತಾಭಾರತಿ29 Oct 2016 4:30 PM IST
share
ಆಬ್ಸ್ ವ್ಯಾಯಾಮ ಮಾಡದೆಯೇ ಹೊಟ್ಟೆ ಬೊಜ್ಜು ಕರಗಿಸಲು ಸಾಧ್ಯ !

ನಾವೆಲ್ಲರೂ ಉತ್ತಮವಾದ ಮೈಕಟ್ಟು ಹೊಂದಿರಬೇಕು ಎಂದೇ ಬಯಸುತ್ತೇವೆ. ಯಾರಿಗೂ ಹೊಟ್ಟೆಯಲ್ಲಿ ಬೊಜ್ಜು ತುಂಬಿಕೊಂಡು ನಡೆದಾಡುವುದು ಇಷ್ಟವಾಗುವುದಿಲ್ಲ. ಹಾಗಿದ್ದರೆ ಹೊಟ್ಟೆಯ ಬೊಜ್ಜನ್ನು ಕರಗಿಸಲು ಏನು ಮಾಡಬೇಕು? ಇಲ್ಲಿದೆ ಕೆಲವು ವಿಧಾನಗಳು.

ಭಾರ ಎತ್ತಿ

ಭಾರ ಎತ್ತುವ ತರಬೇತಿ ಪಡೆಯುವುದು ಅತ್ಯುತ್ತಮ. ಮಧ್ಯಭಾಗದಲ್ಲಿ ದೇಹದ ಕೊಬ್ಬನ್ನು ಬದಲಿಸುವುದು ಲಾಭಕರ. ರೆಸಿಸ್ಟನ್ಸ್ ಟ್ರೈನಿಂಗ್ ವ್ಯಾಯಾಮ ಮೂಳೆಗಳನ್ನು ಬೆಳೆಸುತ್ತದೆ. ಇದು ಚಯಾಪಚಯ ದರವನ್ನು ಏರಿಸುತ್ತದೆ. ಹೀಗಾಗಿ ದಿನವಿಡೀ ಕ್ಯಾಲರಿಗಳನ್ನು ಕರಗಿಸಬಹುದು. ನಿಮಗೆ ಎಷ್ಟು ಬಿಗಿಯಾದ ಸ್ನಾಯುಗಳು ಇವೆಯೋ ಕೊಬ್ಬು ಅಷ್ಟೇ ಕಡಿಮೆಯಾಗುತ್ತದೆ. ರೆಸಿಸ್ಟನ್ಸ್ ಟ್ರೈನಿಂಗ್ ವ್ಯಾಯಾಮ ಮಾಡುವುದು ಜಿಮ್‌ನಲ್ಲಿ ಭಾರವಾದ ಸಾಧನಗಳನ್ನು ಎತ್ತುವುದಕ್ಕೇ ಸೀಮಿತವಾಗಿರುವುದಿಲ್ಲ. ಅದು ನಿಮ್ಮದೇ ದೇಹವನ್ನು ಸುಧಾರಿಸಬಹುದು. ಕೆಟಲ್ ಬೆಲ್ಸ್ ಮತ್ತು ರೆಸಿಸ್ಟನ್ಸ್ ಬ್ಯಾಂಡ್ಸ್‌ಗಳನ್ನು ಕೊಂಡೊಯ್ಯಲು ಸುಲಭ. ಇದು ಹೊರಾಂಗಣದಲ್ಲಿಯೂ ನಿಮಗೆ ತರಬೇತಿ ಪಡೆಯಲು ನೆರವಾಗುತ್ತದೆ. ನೀವು ವಾರಕ್ಕೆ ಎರಡು- ಮೂರು ಬಾರಿ 30 ನಿಮಿಷಗಳ ಕಾಲ ತೂಕ ಎತ್ತುವುದನ್ನು ಮಾಡಬೇಕು. ಇಷ್ಟರಲ್ಲೇ ಲಾಭ ಸಿಗಲಿದೆ.

ನಿಮ್ಮ ಭಂಗಿ ಸುಧಾರಿಸಿ

ಉತ್ತಮ ವ್ಯಾಯಾಮದ ಭಂಗಿ ದೈಹಿಕವಾಗಿ ಆಕರ್ಷಕವಾಗಿರುವುದು ಮಾತ್ರವಲ್ಲ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸಲೂ ನೆರವಾಗುತ್ತದೆ. ಸಾಮಾನ್ಯವಾಗಿ ಹೊಟ್ಟೆಗೆ ಪ್ರತ್ಯೇಕವಾದ ವ್ಯಾಯಾಮಗಳಿರುತ್ತವೆ. ನೀವು ಇವುಗಳನ್ನು ಮಾಡುತ್ತಲೇ ಬದಲಾವಣೆ ಕಾಣಬಹುದು. ನೇರವಾಗಿ ನಿಲ್ಲುವುದು ತಕ್ಷಣವೇ ಕೆಲವು ಪೌಂಡ್‌ಗಳನ್ನು ಇಳಿಸಬಹುದು. ಹೀಗೆ ಕುಳಿತು ಮಾಡಿದ ವ್ಯಾಯಾಮದ ನಂತರ ನೇರ ನಿಲ್ಲುವಂತಹ ಭಂಗಿಗಳು ತಕ್ಷಣದಲ್ಲಿ ಹೆಚ್ಚು ಆಕರ್ಷಕ ಮೈಕಟ್ಟು ಕೊಡಲಿದೆ. ವಾರಕ್ಕೆ ಎರಡು ಮೂರು ಬಾರಿ ಫೋಮ್ ರೋಮ್ ಮತ್ತು ಸ್ಟ್ರೆಚ್ ಮಾಡಬೇಕು. ಇದು ದೇಹದ ಮುಂಭಾಗದ ಮೇಲಿನ ಬಿಗಿತ ಮತ್ತು ಘರ್ಷಣೆ ಕಡಿಮೆ ಮಾಡುತ್ತದೆ. ಇದರಲ್ಲಿ ಎದೆ, ಭುಜಭಾಗ, ಮೇಲಿನ ಎದೆ ಮತ್ತು ಸೊಂಟದ ಸ್ನಾಯುಗಳೂ ಸೇರಿರುತ್ತವೆ. ಸ್ನಾಯುಗಳು ಮತ್ತು ಪೋಸ್ಟರಿಯರ್ ಚೈನ್ ಒಳಗೊಂಡಿರುವ ವ್ಯಾಯಾಮವನ್ನು ಹೆಚ್ಚು ಮಾಡಬೇಕು. ಇವುಗಳಲ್ಲಿ ಬೆನ್ನು, ಗ್ಲೂಟ್ಸ್ ಮತ್ತು ಮಂಡಿರಜ್ಜು ವ್ಯಾಯಾಮ ಮಾಡಬೇಕು.

ಒತ್ತಡ ಕಡಿಮೆ

ನೀವು ಚಿಂತೆಯಲ್ಲಿದ್ದಾಗ ವ್ಯಾಯಾಮ ಮಾಡಲು ಇಳಿದರೆ ನಿಮ್ಮ ದೇಹವು ಒತ್ತಡದ ಹಾರ್ಮೋನ್‌ಗಳು ಮತ್ತು ಸ್ಟಿರಾಯ್ಡಿಗಳನ್ನು ಹೊರ ಸೂಸುತ್ತದೆ. ಇದು ನೇರವಾಗಿ ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಉಬ್ಬುವಿಕೆ ಮತ್ತು ಮಲಬದ್ಧತೆಯಾಗಬಹುದು. ಒತ್ತಡ ಹಾಕಿದ ದೇಹ ಮತ್ತು ಮನಸ್ಸು ಕೊರ್ಟಿಸಾಲ್ ಎನ್ನುವ ಹಾರ್ಮೋನ್ ಹೆಚ್ಚಾಗಿ ಬಿಡುಗಡೆ ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬಿನ ಪದರಕ್ಕೆ ಕಾರಣವಾಗುತ್ತದೆ. ಸೊಂಟದ ಮೇಲೆ ಕೊಬ್ಬು ತುಂಬಿ ಕೆಲವು ಪ್ರಮುಖ ಅಂಗಗಳ ರಕ್ಷಣೆಗೆ ಪರಯತ್ನಿಸುತ್ತದೆ. ನಿಮಗೆ ಸಾಕಷ್ಟು ಸಮಯವಿರಲಿ. ಪ್ರತೀ ದಿನ ಉಲ್ಲಾಸದಿಂದ ವ್ಯಾಯಾಮಕ್ಕೆ ಇಳಿಯಿರಿ. ಸಂಜೆ ಯೋಗ ತರಗತಿಗಳಿಗೆ ಹೋಗಿ. ಸಾಕಷ್ಟು ನಿದ್ರೆ ಮಾಡಿ. ಶಾಂತಿ ಕೊಡುವಂತಹ ಸಂಗೀತ ಕೇಳಿ. ಆಳವಾದ ಉಸಿರುಬಿಟ್ಟು ರಿಲ್ಯಾಕ್ಸ್ ಆಗಿ.

ಕೃಪೆ:english.alarabiya.net

share
ವಾರ್ತಾಭಾರತಿ
ವಾರ್ತಾಭಾರತಿ
Next Story
X