ವೃತ್ತಿ ಜೀವನದಲ್ಲಿ ಮಾಡಲೇಬಾರದ 7 ತಪ್ಪುಗಳು

ಸಿಬ್ಬಂದಿಗಳನ್ನು ಸಂತೋಷದಿಂದ ಇರಿಸುವುದು ಹೇಗೆ ಎನ್ನುವ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಅವರಿಗೆ ಪ್ರೇರಣೆಯಾಗುವುದು ಮತ್ತು ಸ್ಫೂರ್ತಿ ನೀಡುವ ಬಗ್ಗೆ, ನಾವು ಮಾಡುವ ಕೆಲವು ಸರಳ ತಪ್ಪುಗಳ ಬಗ್ಗೆಯೂ ಮಾಹಿತಿಗಳಿವೆ. ಆದರೆ ಕಚೇರಿಯಲ್ಲಿ ಉತ್ತಮ ವಾತಾವರಣವನ್ನು ಸೃಷ್ಟಿಸಬೇಕೆಂದರೆ ಈ ಕೆಳಗಿನ ಕೆಲವು ವಿಷಯಗಳತ್ತ ಗಮನಕೊಡಬೇಕು.
ಸ್ಪಷ್ಟ ದೃಷ್ಟಿಕೋನದ ಕೊರತೆ
ತಂಡಕ್ಕೆ ತಮ್ಮ ಗುರಿ ಮತ್ತು ಕೆಲಸ ಮಾಡುತ್ತಿರುವ ಉದ್ದೇಶ ತಿಳಿದಿರಬೇಕು. ಕಂಪನಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದೂ ತಿಳಿದಿರಬೇಕು. ಇಲ್ಲದಿದ್ದರೆ ನಿತ್ಯದ ಕರ್ತವ್ಯಗಳು ಮತ್ತು ವ್ಯಾಪ್ತಿಯನ್ನು ಅವರು ತಿಳಿದುಕೊಳ್ಳಲಿ ಸಾಧ್ಯವಾಗುವುದಿಲ್ಲ. ಸ್ಪಷ್ಟವಾದ ದೃಷ್ಟಿಕೋನ ಮತ್ತು ಮಹಾತ್ವಾಕಾಂಕ್ಷೆ ಇರುವುದು ಅಗತ್ಯ. ತಂಡವನ್ನು ಮುನ್ನಡೆಸುವವರು ಅದನ್ನು ವಿವರಿಸಿ ಎಲ್ಲರಲ್ಲಿ ಉತ್ಸಾಹ ಮೂಡಿಸಬೇಕು. ಬಹಳಷ್ಟು ಸಂದರ್ಭದಲ್ಲಿ ಸಂಸ್ಥೆಯೊಂದರ ಉದ್ದೇಶ ಮತ್ತು ಗುರಿಯನ್ನು ಅನುಷ್ಠಾನಕ್ಕೆ ತರುವಲ್ಲಿ ಮಧ್ಯದ ವ್ಯವಸ್ಥಾಪಕರು ಮತ್ತು ಹಿರಿಯ ನಾಯಕರು ವಿಫಲರಾಗುತ್ತಾರೆ. ಅವರಿಂದ ಸಾಧ್ಯವಾಗದೆ ಇರುವುದನ್ನು ಉಳಿದ ತಂಡ ನಿಭಾಯಿಸುತ್ತಾರೆ ಎನ್ನುವುದು ಕನಸು. ಸ್ಪಷ್ಟವಾಗಿ ವ್ಯಾಖ್ಯಾನಿಸಿದ ಗುರಿ ಇದ್ದಾಗ ಎಲ್ಲರೂ ಜೊತೆಯಾಗಿ ಕರ್ತವ್ಯ ನಿಭಾಯಿಸಬಹುದು.
ನಿರಂತರವಾಗದೆ ಇರುವುದು
ಮೇಲಿನ ಸ್ತರದಿಂದ ನಿರಂತರವಾಗಿ ಸಲಹೆ ಸೂಚನೆ ಬಾರದೆ ಇದ್ದಾಗ ಗೊಂದಲ ಏರ್ಪಡುತ್ತದೆ. ತಂಡಕ್ಕೆ ಸರಿಯಾದ ದಿಕ್ಕು ಮತ್ತು ಆದ್ಯತೆಗಳು ತಿಳಿಯದೆ ಪಥ ಬಿಟ್ಟು ಸಾಗಬಹುದು. ಇದು ನಿರ್ದೇಶನಗಳು ಮತ್ತು ಆದ್ಯತೆಗಳಿಗೆ ಮಾತ್ರ ಅನ್ವಯಿಸುವುದಿಲ್ಲ. ಎಲ್ಲಾ ಉದ್ಯೋಗಿಗಳಿಗೂ ಇದು ಅನ್ವಯಿಸುತ್ತದೆ. ಪರಿಹಾರ ರೀತಿ, ಗ್ರಾಹಕರಿಗಾಗಿ ಇರುವ ಗುರಿ ಮತ್ತು ಮುಖ್ಯವಾಗಿ ಹಿರಿಯ ನಾಯಕರ ಅಭಿಪ್ರಾಯಗಳು ತಿಳಿದಿರಬೇಕು. ನಿರಂತರವಾಗಿ ಈ ವಿವರಗಳು ಮತ್ತು ದಾರಿ ತಿಳಿದಾಗ ಎಲ್ಲಾ ಕಡೆ ಕೆಲಸ ಸರಾಗವಾಗಿ ನಡೆಯುತ್ತದೆ.
ಆಶ್ವಾಸನೆಗಳನ್ನು ಮುರಿಯುವುದು
ಇತರ ಯಾವುದೇ ಪರಿಸ್ಥಿತಿಯಂತೆ ಇದು ನಂಬಿಕೆ ಮುರಿಯುವ ವೇಗದ ಹಾದಿ. ಹಲವು ಅಧ್ಯಯನಗಳು ತೋರಿಸಿರುವ ಪ್ರಕಾರ ಉತ್ಪಾದನೆ, ಆದಾಯ ಮತ್ತು ಲಾಭಗಳು ನೇರವಾಗಿ ನಕಾರಾತ್ಮಕವಾಗಿ ಅಥವಾ ಸಕಾರಾತ್ಮಕವಾಗಿ ಸಂಸ್ಥೆಯೊಳಗಿನ ನಂಬಿಕೆಯನ್ನು ಆಧರಿಸಿದೆ. ಬಹಳಷ್ಟು ಬಾರಿ ಇದೇನು ಉದ್ದೇಶಪೂರ್ವಕವಾಗಿ ಇರುವುದಿಲ್ಲ. ಕೆಲವೊಮ್ಮೆ ನಾಯಕರು ಏನು ಆಶ್ವಾಸನೆ ಮಾಡಲಾಗಿದೆ ಎಂದೇ ಮರೆತು ಹೋಗಿರುತ್ತದೆ ಮತ್ತು ಕಾರ್ಯನಿರ್ವಹಣೆಯ ಭರದಲ್ಲಿ ಗೊಂದಲ ಏರ್ಪಟ್ಟಿರುತ್ತದೆ. ಇವೆಲ್ಲವನ್ನು ತಪ್ಪಿಸಲು ಆಶ್ವಾಸನೆ ಈಡೇರಿಸಲು ಬಲಿಷ್ಠವಾದ ದಾರಿಯನ್ನು ಹಾಕಿಕೊಳ್ಳುವುದೇ ಆಗಿದೆ.
ನಿಮ್ಮ ಉದಾಹರಣೆ ಬೇಡ
ನೀವೇ ಮಾಡಿ ತೋರಿಸುವುದು ಸಮರಾಂಗಣದ ಒಳಗೆ ಮತ್ತು ಹೊರಗೂ ಆಗಬೇಕು. ಹಾಗೆಯೇ ಕೇವಲ ಮಾತನಾಡುವುದರಿಂದಲೂ ಪ್ರಯೋಜನವಿಲ್ಲ. ನಾಯಕರಿಗೆ ಹಲವು ಜವಾಬ್ದಾರಿಗಳಿರುತ್ತವೆ ಮತ್ತು ಅವುಗಳಲ್ಲಿ ಮುಖ್ಯವಾಗಿ ಕಂಪನಿಯ ದೃಷ್ಟಿಕೋನ ಮತ್ತು ಮೌಲ್ಯಗಳನ್ನು ಜೀವಂತವಾಗಿಡುವುದು. ನಾಯಕರು ಹೀಗೆ ಮಾಡಲು ಸಾಧ್ಯವಾಗದೆ ಇದ್ದಾಗ ವಿಶ್ವಾಸಾರ್ಹತೆಗೆ ಹಾನಿಯಾಗುತ್ತದೆ. ತಂಡ ನಂಬಿಕೆ ಕಳೆದುಕೊಳ್ಳುತ್ತದೆ. ಜನರಿಗೆ ಪ್ರೇರಣೆಯಾಗುವುದು ಸುಲಭವಾದರೂ ಅದೇ ರೀತಿ ನಡೆದುಕೊಳ್ಳುವುದು ಸಾಧ್ಯವಿಲ್ಲ. ಹೀಗಾಗಿ ಕೇವಲ ಮಾತಿನ ಬದಲಾಗಿ ಸ್ವತಃ ಶ್ರಮ ಹಾಕಿ ಇದನ್ನು ತೋರಿಸಬೇಕು.
ಭಾವನಾತ್ಮಕ ಚತುರತೆಯ ಕೊರತೆ
ಬಹಳಷ್ಟು ಉದ್ಯಮ ನಾಯಕರು ಮತ್ತು ಸಂಸ್ಥೆ ಇದನ್ನು ಅಗತ್ಯವಿಲ್ಲ ಎಂದೇ ತಿಳಿಯುತ್ತಾರೆ. ಒಂದು ತಂಡವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಸಹಿಷ್ಣುತೆ ಬೇಕು. ನಾಯಕರು ಭಾವನಾತ್ಮಕವಾಗಿ ಬುದ್ಧಿವಂತರಾಗಿದ್ದರೆ ಉತ್ತಮ ಲಾಭ ತರಬಹುದು. ಉದ್ಯೋಗಿಗಳ ಜೊತೆಗೆ ನಿಜವಾಗಿಯೂ ಸಂಪರ್ಕ ಹೊಂದಿದ್ದಾರೆಯೇ ಮತ್ತು ಜನರಿಗೆ ಸಕಾರಾತ್ಮಕವಾಗಿ ಪ್ರೇರಣೆಯಾಗಿದ್ದಾರೆಯೇ ಎನ್ನುವುದೂ ಮುಖ್ಯ. ಸ್ವಯಂ ತಿಳಿದಿರುವುದು, ನಮ್ಮ ಭಾವನೆಗಳು ಇತರರ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂದು ಅರ್ಥ ಮಾಡಿಕೊಳ್ಳುವುದು, ವಿನಯ ಮತ್ತು ಅನುಭೂತಿ ಇರುವುದು ಮತ್ತು ಉತ್ತಮ ಸಂಪರ್ಕ ಕೌಶಲ್ಯವನ್ನು ಹೊಂದಿರುವುದು ತಂಡವನ್ನು ಮುನ್ನಡೆಸಲು ಮುಖ್ಯ. ಸಮಾನ ಗುರಿಗಳನ್ನು ಸಾಧಿಸಲು ಇದು ಅಗತ್ಯ.
ನಾಯಕರ ಮೇಲೆ ನಂಬಿಕೆ ಇಲ್ಲದಿರುವುದು
ಯಶಸ್ವೀ ನಾಯಕರು ತಮ್ಮ ಕೆಲಸಗಾರರ ನಂಬಿಕೆ ಕಳೆದುಕೊಂಡಿರುತ್ತಾರೆ. ಅವರು ಯಾವಾಗಲೂ ತಮ್ಮ ಕಡೆಗೇ ಹೆಚ್ಚು ಗಮನವನ್ನು ಸೆಳೆದುಕೊಂಡು ಇತರರನ್ನು ಬದಿಗೆ ಸರಿಸಿರುತ್ತಾರೆ. ಒಬ್ಬ ಗ್ರಾಹಕ ಅಥವಾ ಕಂಪನಿಗಳ ಉಪಭೋಗಿತರು ನೇರವಾಗಿ ಸಂಪರ್ಕಿಸುವುದು ತಂಡದ ಕಡೆಗೆ. ಹೀಗಾಗಿ ಸಿಬ್ಬಂದಿಗಳ ಅಭಿಪ್ರಾಯ ಮುಖ್ಯವಾಗುತ್ತದೆ. ಹೀಗಾಗಿ ಕಂಪನಿ ನಷ್ಟದಲ್ಲಿದ್ದರೆ ಸಂಪೂರ್ಣವಾದ ನಾಯಕತ್ವವನ್ನು ಕೈಗೆ ತೆಗೆದುಕೊಳ್ಳುವುದು ಉತ್ತಮ. ಪ್ರಾಮಾಣಿಕತೆ ಎನ್ನುವುದು ಯಶಸ್ಸು ಅಥವಾ ವೈಫಲ್ಯ ಅಂತಿಮವಾಗಿ ತಮ್ಮದೇ ಎನ್ನುವುದನ್ನು ನಾಯಕರು ಅರಿತುಕೊಳ್ಳುವುದು.
ಸಂಪನ್ಮೂಲಗಳನ್ನು ಒದಗಿಸದೆ ಇರುವುದು
ಕೆಲವೊಮ್ಮೆ ಸಿಬ್ಬಂದಿಗಳು ವಿಫಲವಾಗುವುದು ಮತ್ತು ಸಾಮಾನ್ಯ ಪ್ರದರ್ಶನವೂ ಬೇಸರ ತರಿಸುತ್ತದೆ. ಉದ್ಯೋಗಿಗಳು ತಮ್ಮ ಬೆಳವಣಿಗೆಗೆ ಮ್ಯಾನೇಜ್ಮೆಂಟ್ ಕೊಡುಗೆ ಕೊಡುವುದಿಲ್ಲ ಎಂದು ಕಂಡಾಗ ಕಂಪನಿ ಬಿಟ್ಟು ಹೋಗುತ್ತಾರೆ. ತಂಡದ ಖಾಸಗಿ ಮತ್ತು ವೃತ್ತಿ ಅಭಿವೃದ್ಧಿ ಎರಡರಲ್ಲೂ ಗಮನ ಹರಿಸುವುದು ಅವರ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಇದು ಕಂಪನಿ ತಮ್ಮ ವೃತ್ತಿ ಹಾದಿಯನ್ನು ರೂಪಿಸಿಕೊಳ್ಳಲೂ ನೆರವಾಗುತ್ತದೆ. ಅಲ್ಲದೆ ಸಿಬ್ಬಂದಿಗಳ ನಂಬಿಕೆಯೂ ವೃದ್ಧಿಸಿ ವ್ಯವಹಾರದಲ್ಲಿ ಲಾಭವಾಗಬಹುದು.
ನಾಯಕತ್ವದ ಯಾವುದೇ ಮಟ್ಟದಲ್ಲಿರುವುದೂ ಕಷ್ಟ. ಆದರೆ ಅದನ್ನು ಯಾವಾಗಲೂ ನಿಭಾಯಿಸಬೇಕಾಗುತ್ತದೆ. ವಿಶ್ವಾಸಾರ್ಹತೆ, ಜೊತೆಯಾಗಿರುವುದು ಮತ್ತು ಸರಿಯಾದ ನಿರ್ಧಾರ ಕೈಗೊಳ್ಳುವುದು ಸಾಧ್ಯವಾದಾಗಲೇ ಉತ್ತಮ ತಂಡವನ್ನು ಕಟ್ಟಬಹುದು.
ಕೃಪೆ: www.businessinsider.com







