30ರಂದು ಮುಹಿಮ್ಮಾತ್ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರದ ಉದ್ಘಾಟನಾ ಸಮಾರಂಭ
ಮಂಗಳೂರು,ಅ.29:2017 ಎಪ್ರಿಲ್ 27ರಿಂದ 30ರ ತನಕ ನಡೆಯಲಿರುವ ಕುಂಬಳೆಯ ಮುಹಿಮ್ಮಾತ್ ಸಂಸ್ಥೆಯ ಬೆಳ್ಳಿ ಹಬ್ಬದ ಪ್ರಚಾರದ ಉದ್ಘಾಟನಾ ಸಮಾರಂಭ ಮಂಗಳೂರಿನ ಪುರಭವನದಲ್ಲಿ ಅಕ್ಟೋಬರ್ 30ರಂದು ನಡೆಯಲಿದೆ.
ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಡಾ. ಫಾರೂಕ್ ನಯೀಮಿ ಕೊಲ್ಲಂ ತ್ರಿವಳಿ ತಲಾಕ್ ಮತ್ತು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಖಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಸಚಿವ ಯುಟಿ ಕಾದರ್, ವೈ ಅಬ್ದುಲ್ಲ ಕುಞಿ, ಕನಚೂರು ಮೋನು ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ
Next Story





