ಮಹಾರಾಷ್ಟ್ರದ ಔರಾಂಗಾಬಾದ್ ನ ಪಟಾಕಿ ಮಾರುಕಟ್ಟೆಯಲ್ಲಿ ಬೆಂಕಿ ; 40 ವಾಹನಗಳಿಗೆ ಹಾನಿ

ಮುಂಬೈ, ಅ. 29 :ಮಹಾರಾಷ್ಟ್ರದ ಔರಾಂಗಾಬಾದ್ ನ ಪಟಾಕಿ ಮಾರುಕಟ್ಟೆಗೆ ಬೆಂಕಿ ಬಿದ್ದು ಭಾರೀ ನಷ್ಟ ಉಂಟಾಗಿದೆ.
ಪಟಾಕಿ ಮಾರುಕಟ್ಟೆಗೆ ಬೆಂಕಿ ಬಿದ್ದ ಪರಿಣಾಮ 200 ಅಂಗಡಿಗಳು ಹೊತ್ತಿ ಉರಿದಿದೆ. 40 ವಾಹನಗಳು ಸುಟ್ಟು ಕರಕಲಾಗಿದೆ. ಆದರೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮಧ್ಯಪ್ರದೇಶ, ಗುಜರಾತ್ ನಲ್ಲಿ ಪಟಾಕಿ ಮಾರುಕಟ್ಟೆಯಲ್ಲೂ ಅಗ್ನಿ ಅನಾಹುತ ಉಂಟಾಗಿದ್ದು, ಭಾರಿ ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.
Next Story





